Jepee Bhat! |
ಅತ್ತೆಯು ಕಂಡರೆ ಸೊಸೆಯನ್ನೂ ಮಗಳಂತೆ,
ಆಗುವುದು ಮನೆ ಬೇಡವೆಂದರೂ ಸ್ವರ್ಗದಂತೆ..
ಸೊಸೆಯೂ ನೋಡಿಕೊಂಡರೆ ಅತ್ತೆಯನ್ನು ಅಮ್ಮನಂತೆ,
ಸಂಸಾರ ಸಾಗುವುದು ತೂತೇ ಇಲ್ಲದ ನಿಲ್ಲದ ದೋಣಿಯಂತೆ..
ಎಲ್ಲರೊಡನೆ ಒಂದಾಗಿ ಬಾಳು ಖುಷಿಯಿಂದ ಬಂದ ಮನೆಯಲ್ಲಿ,
ಬಂದ ಮನೆಗೇ ಇಡಬೇಡ ಬೆಂಕಿಯನ್ನು ನಿನ್ನ ಮೌನದಲ್ಲಿ..
ನಿನ್ನ ಮನದಲ್ಲಿ ಏನಿದ್ದರೂ ಹೇಳಿಬಿಡು ಅದೂ ಎಲ್ಲರೆದುರಲ್ಲಿ,
ಸಿಟ್ಟಾಗಿ ಯಾವುದನ್ನೂ ಕೆಡಿಸಬೇಡ ನಿನ್ನ ಕೋಪದ ಮಾತಿನಲ್ಲಿ....
ಗಾಳಿಗೆ ತೂರಿಬಿಡು ಅಲ್ಲಿ ಇಲ್ಲಿ ಹೇಳಿದ್ದನ್ನು ಅವರು-ಇವರು,
ನಮ್ಮ ಸಂಸಾರಕ್ಕೆ ಹುಳಿ ಹಿಂಡಲು ಅವರು ಯಾರು...?
ಕಷ್ಟ ಸುಖಕ್ಕೆ ಇಲ್ಲವೇ ಎಲ್ಲರೆದುರು ಕೈ ಹಿಡಿದ ಈ ಪತಿ ದೇವರು..??
ಬೇರೆ ಮತ್ತೂ ಹೆಚ್ಚಿನ ಕಷ್ಟಕ್ಕೆ ಇದ್ದಾನಲ್ಲವೇ ನಮ್ಮೆಲ್ಲರ ಆ ದೇವರು...:)

ನನ್ನ ಪ್ರೀತಿಯ ಸ್ನೇಹಿತೆಗೆ ಅರ್ಪಣೆ... ಯಾಕೆ ನೀನು ಅತ್ತೆ ಸೊಸೆ ಬಗೆಗೆ ಒಂದು ಕವನ ಬರೆಯಬಾರದು ಎಂದು ಒಂದು ವಿಶೇಷ, ವಿಶಿಷ್ಟ ಸಂದರ್ಭದಲ್ಲಿ ಸಲಹೆ ನೀಡಿದ ''ಅವಳಿಗೆ''........!!