Thursday, April 03, 2014

ಪ್ರತೀ ತಿಂಗಳ ನಿನ್ನ ಸ್ನಾನದ ನಂತರ, ಈ ದೇವರಿಗೂ ತಿಂಗಳಿಗೊಂದು ಸ್ಥಾನ.



ನಿನ್ನ ಕಿಬ್ಬೊಟ್ಟೆಯ ಕೆಳಗೆಲ್ಲೋ ನೋವಾದರೆ,
ನನಗಿಲ್ಲಿ ಹಾವಿನ ಕುಟುಕಿನ ಭಾವ.
ನೀ ಮತ್ತೆ ಅತ್ತು ಅತ್ತು ಸುಸ್ತಾಗಿ ಕೂತರೆ,
ನಾನಿಲ್ಲಿ ನಿನ್ನ ತೂಗುವ ತೊಟ್ಟಿಲ ಭಂಡಾರ

ಇಷ್ಟಾದರೂ ನಿನ್ನೀ ಕೆನ್ನೆ ಮುಂಗುರುಳಲ್ಲಿ ಏನೋ ಆಕರ್ಷಣೆ,
ಬಿಟ್ಟೂ ಬಿಡದೆ ನಾನೇ ನಾನಾದೆ ನಿನಗೆ ಅರ್ಪಣೆ
ಪ್ರತೀ ತಿಂಗಳ ನಿನ್ನ ಸ್ನಾನದ ನಂತರ,
ಈ ದೇವರಿಗೂ ತಿಂಗಳಿಗೊಂದು ಸ್ಥಾನ.

ಮತ್ತೆ ಮತ್ತೆ ನಿನ್ನ ಹೊಟ್ಟೆಯ ಕೆಳಗೇ ನಿನಗಾದರೆ ಗಮನ,
ಯಾವಾಗಲೂ ನಿನ್ನದೇ ಕನಸು ಮನಸಲಿ ನನ್ನೀ ಆಗಮನ.
ಭೂತಕಾಲದಲ್ಲಿ ಕಂಡ ಕನಸು ನಿಜವಾಗುವ ಬಯಕೆ,
ತಿಳಿದೂ ತಿಳಿಯದೆ ಒಡಲಾಳದಲ್ಲಿ ಬೆಳೆಯುತ್ತಿರುವ ಮೊಳಕೆ!!