JePee BhAt;) |
ಸೂರ್ಯ ಚಂದ್ರರಿಬ್ಬರೂ ಒಂದೊಂದು ಸಲ ಒಟ್ಟಿಗೇ ಆಕಾಶದಲ್ಲಿ ಬರುವಂತೆ,
ಚೆನ್ನಾಗಿರುವ ದಿನವೇ ಗುಡುಗು, ಸಿಡಿಲು, ಮಳೆ, ಒಟ್ಟಿಗೇ ಬರುವಂತೆ..
ನೆಟ್ಟಗೆ ಚೆನ್ನಾಗಿ ನಿಂತಿರುವ ಮನೆಗೆ ಭೂಕಂಪ ಬಂದು ಬಡಿದಂತೆ,
ಎಲ್ಲರೂ ನಗುತ್ತಾ ಚೆನ್ನಾಗಿ ಬಾಳುತ್ತಿದ್ದಾಗ ಒಮ್ಮೆಲೇ ಸುನಾಮಿ ಬಂದಂತೆ....
ಆಕಾಶವನ್ನೇ ಹಾಳೆಯಾಗಿಸಿ, ಅಲ್ಲಿರುವ ನಕ್ಷತ್ರವನ್ನೇ ಲೇಖನಿಯಾಗಿಸಿ,
ರಸ್ತೆಯನ್ನೇ ಮಂಚವಾಗಿಸಿ, ಮಂಜಿನ ಹನಿಗಳನ್ನೇ ಅದರ ಮೇಲೆ ಮಲಗಿಸಿ..
ಹೂವಿನ ಗಿಡಗಳನ್ನೇ ರೆಕ್ಕೆಯಾಗಿಸಿ, ದುಂಬಿಗಳ ಹತ್ತಿರ ಜೋಗುಳ ಹಾಡಿಸಿ,
ಆಲಸಿಯಾಗಿ ಬಿದ್ದುಕೊಂಡಿರುವೆ, ಕಲ್ಲಾಗಿ, ರಸ್ತೆ ಬದಿಯ ಯಾವತ್ತೂ ಕಸವಾಗಿ....
ಒಬ್ಬಂಟಿಯಾಗಿದ್ದಾಗ ಒಮ್ಮೊಮ್ಮೆ ತೀರಾ ಹೀಗೆನ್ನಿಸಿಬಿಡುತ್ತೆ,....
ಯಾಕೋ ಮನಸ್ಸು ಸುಮ್ಮ ಸುಮ್ಮನೆ ತೊಳಲಾಟದಲ್ಲಿ ಮಿಂದೇಳುತ್ತೆ...
ಹೃದಯ ತೀರಾ ಚಿಕ್ಕ ಮಗು ಥರ ಅಳುತ್ತೆ....
ಮನಸ್ಸು ಮತ್ತೆ ಅದೇ ಸಮಾಧಾನಗೊಳ್ಳುತ್ತೆ...
ಇಷ್ಟೆಲ್ಲಾ ಆದರೂ ಹೀಗೆನ್ನಿಸುವುದು ಸುಳ್ಳಲ್ಲ.
ಹೀಗೆಲ್ಲಾ ಆದರೂ ಇದು ಕಹಿಯಲ್ಲ...
ಜೀವನವೆಂದರೆ ಬರೀ ಸಿಹಿಯಲ್ಲ..
ಜಗತ್ತಿನಲ್ಲಿ ಎಲ್ಲವೂ ಇದೆಯಲ್ಲ..!!:):)