Tuesday, January 11, 2011

ಯಾವುದಕ್ಕೋ ಎಲ್ಲಿಯೋ ಹುಡುಕಾಟ, ನಿಲ್ಲುವುದು ಎಂದು? ಹೇಳದೆ ಕೇಳದೆ ಕಳೆದ ಮನಸು, ನಿಂತ ಹೃದಯ ಸರಿಯಾಗುವುದು ಎಂದು........??

Hearttie!

ಯಾಕೋ ಗೊತ್ತಿಲ್ಲ ಈಗೀಗ,
ಕೈಗೇ ಸಿಗುತ್ತಿಲ್ಲ ನನ್ನ ಮನ..
ಹೃದಯದ ಬಡಿತವೂ ನಿಂತಿದೆ,
ಕೇಳೋಣವೆಂದರೆ ಬಾಗಿಲೇ ಮುಚ್ಚಿದೆ...

ಮೊದಮೊದಲಿದ್ದ ಆ ಖುಷಿ,

ನಿನ್ನ ಪಡೆದುಕೊಳ್ಳುವಾಗ...
ಈಗ ಸಾಯುತ್ತಿದೆ,
ನಿನ್ನನ್ನೇ ಕಳೆದುಕೊಳ್ಳುವಾಗ...

ಬಯಸದೇ ನಿನ್ನ ಪಡೆದ ಜೀವ,

ಈಗ ಯಾವುದೋ ಭೀತಿಯಲ್ಲಿದೆ...
ಗೊತ್ತೋ ಗೊತ್ತಿದ್ದೋ ಗೊತ್ತಿಲ್ಲ..
ನಿನ್ನನ್ನೇ  ಮರೆಯುತ್ತಿದೆ.....

ನೀನಾಡಿದ ಒಂದೊಂದು ಮಾತು,

ಮಾಡಿದ ಒಂದೊಂದು ಚೇಷ್ಟೆಯೂ,
ಬಚ್ಚಿಟ್ಟ ಒಂದೊಂದು ಕಥೆ,
ಹೇಳದೇ ಬಂದು ಮುತ್ತಿಕ್ಕಿದ ಚಿಟ್ಟೆಯೂ...

ಯಾವುದಕ್ಕೋ ಎಲ್ಲಿಯೋ ಹುಡುಕಾಟ,

ನಿಲ್ಲುವುದು ಎಂದು?
ಹೇಳದೆ ಕೇಳದೆ ಕಳೆದ ಮನಸು,
ನಿಂತ ಹೃದಯ ಸರಿಯಾಗುವುದು ಎಂದು........??

Monday, January 10, 2011

ಯಾರು ಏನೇ ಹೇಳಿದರೂ ಕೇಳಳು ಅವಳು.. ಪಾಪ ಏನು ಮಾಡಿಯಾನು ಅವನು? ಇವರ ಕಥೆ ಏನಾಗುವುದೋ ದೇವರಿಗೇ ಗೊತ್ತು... ನಮಗೆ ಇಷ್ಟು ಸಾಕು ಈ ಹೊತ್ತು....!!

NANDU LOVE!

ಕಣ್ಣಿನಲ್ಲೇ ಎಲ್ಲ ಕಥೆಯನ್ನೂ ಹೇಳಿಬಿಡುತ್ತಾರೆ ಹುಡುಗಿಯರು..
ಅದನ್ನು ಅರ್ಥಮಾಡಿಕೊಳ್ಳಲಾಗದೆ ಒದ್ದಾಡುತ್ತಾರೆ ಹುಡುಗರು..
ಹುಡುಗಿಯರ ನೋಟದ ತಾಕತ್ತೇ ಅಂಥದ್ದು..
ಸಾಮಾನ್ಯ ಹುಡುಗರ ಹತ್ತಿರ ಅರಗಿಸಿಕೊಳ್ಳಲಾಗದಂಥದ್ದು..

ಹುಡುಗಿಯರ ಮಾತು, ಮನಸೇ ಬಾಣ..

ತಿನ್ನುತ್ತದೆ ಒಂದಲ್ಲ ಒಂದು ರೀತಿಯಲ್ಲಿ ಹುಡುಗರ ಪ್ರಾಣ..
ಹುಡುಗಿ ನಕ್ಕರೆ ಸಾಕು ಮಂಜಿನಂತೆ ಕರಗುತ್ತಾನೆ ಹುಡುಗ..
ಹುಡುಗ ಎಷ್ಟೇ ಅತ್ತರೂ ಬಂಡೆಯಷ್ಟು ಮತ್ತಷ್ಟು ಗಟ್ಟಿ ಹುಡುಗಿ,..

ಹುಡುಗಿಯರ ನಗು, ಮಾತೇ., ಹಾಗಾ ? ಗೊತ್ತಿಲ್ಲ ..

ಎಲ್ಲಾ ಹುಡುಗರೂ ಹಾಗೇನಾ ? ಅದೂ ಗೊತ್ತಿಲ್ಲಾ...
ಹುಡುಗಿಯರ ಒಲವಲ್ಲಿ ಬೀಳುವ ಹುಡುಗರು..
ಕಳೆದುಕೊಳ್ಳುವರು ಹೇಗೋ ತಮ್ಮ ನಿಲುವನ್ನು..

ಅವಳು ಮತ್ತಷ್ಟು, ಇನ್ನಷ್ಟು ಮಾತು ಬಿಟ್ಟಷ್ಟು.,

ಹುಡುಗರು ಪ್ರೀತಿಸುವರು ಅವರನ್ನು ಬಿಟ್ಟಿರದಷ್ಟು.,
ಯಾವಾಗಲೂ ಇವನಿಗೆ ಅವಳೇ ದೈವ ..
ಅವಳಿಗೆ ಮಾತ್ರ ಇವನು ದೆವ್ವ..

ಇವನು ಹೇಳುತ್ತಾನೆ ನೀನೆ ನನ್ನ ಚಿನ್ನ , ರನ್ನ...

ಅವಳು ಸುಮ್ಮನೆ ಹೇಳುತ್ತಾಳೆ, ಸಾಕು ನಿಲ್ಲಿಸು ಪೂಸಿ ಹೊಡೆಯಬೇಡ ನನ್ನ...
ಇವನ ಮಾತೇ ಅವಳಿಗೆ ಅರ್ಥವಾಗದು..
ಇವನ ಮನಸು ಅವಳಿಗೆ ಮೊದಲೇ ತಿಳಿಯದು..

ಯಾರು ಏನೇ ಹೇಳಿದರೂ ಕೇಳಳು ಅವಳು..

ಪಾಪ ಏನು ಮಾಡಿಯಾನು ಅವನು?
ಇವರ ಕಥೆ ಏನಾಗುವುದೋ ದೇವರಿಗೇ ಗೊತ್ತು...
ನಮಗೆ ಇಷ್ಟು ಸಾಕು ಈ ಹೊತ್ತು....!!

ಆಕಾಶದಷ್ಟು ಪ್ರೀತಿಸುವೆ ನಾ ನಿನ್ನ,ಮಳೆ ಹನಿಯಷ್ಟಾದರೂ ಪ್ರೀತಿಸುವೆಯಾ ನನ್ನ?

My LOVE!

ಆಕಾಶದಷ್ಟು ಪ್ರೀತಿಸುವೆ ನಾ ನಿನ್ನ,
ಮಳೆ ಹನಿಯಷ್ಟಾದರೂ ನೀ ಪ್ರೀತಿಸುವೆಯಾ ನನ್ನ?

ನೀ ನಗುವುದಾದರೆ ಈಗಲೇ ನಕ್ಕು ಬಿಡು..

ಅತ್ತರೂ ಪ್ರಯೋಜನವಿಲ್ಲ ನಾ ಸತ್ತ ಮೇಲೆ...

ಪ್ರೀತಿಸುವುದೇ ಆದರೆ ಈಗಲೇ ಪ್ರೀತಿಸು..

ದ್ವೇಶಿಸುವುದೇ ಆದರೆ ನಾ ಸತ್ತ ಮೇಲೆ ದ್ವೇಷಿಸು..

ಬದುಕಿದ್ದಾಗ ಒಮ್ಮೆಯೂ ಅವಮಾನಿಸದಿರು..

ಸತ್ತ ಮೇಲೆ ತಿರುಗಿ ಮರುಗಿಯೂ ಪ್ರೀತಿಸದಿರು...

ಮನದಲ್ಲಿ ಏನಿದೆಯೋ ಈಗಲೇ ಹೇಳಿಬಿಡು...

ನಿನ್ನ ಪ್ರತಿಷ್ಠೆ, ಅಹಂ ಅನ್ನು ಈಗಲಾದರೂ ಬಿಡು......

Sunday, January 09, 2011

ನನಗೇ ಯಾಕೆ ಹೀಗೆ ? ಅವಳಿಲ್ಲವಾ ನನ್ನ ಬದುಕಿಗೆ...??

My M!:)

ನನಗೆ ಮಾತ್ರ ಅವಳೇ ಬೇಕಿತ್ತು,
ಅವಳಿಗೆ ನಾನು ಯಾವಾಗಲೋ ಬೇಡವಾಗಿದ್ದೆ..

ನಾನು ಅವಳದೇ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದೆ..

ಅವಳು ಮಾತ್ರ ಇನ್ಯಾರನ್ನೋ ಅವಳದೇ ಲೋಕದಲ್ಲಿ ಅರಸುತಿದ್ದಳು..

ನನಗೇ ಯಾಕೆ ಹೀಗೆ ?

ಅವಳಿಲ್ಲವಾ ನನ್ನ ಬದುಕಿಗೆ...??

ಬೇಗ ಹೇಳು ದೇವ..

ಕಾಯುತ್ತಿರುವೆ ನಾನು ಈಗ..!!

Saturday, January 08, 2011

ಕಾಯಿಸಬೇಡ ಹೀಗೆ ನನ್ನನ್ನು., ಬಂದು ಬಿಡು ನನ್ನ ಮನಕಿನ್ನು.......

nanDu**

ಅವಳ ಕಣ್ಣಲ್ಲೇ ಇರುವ ಕಿಚ್ಚು,
ನನ್ನಲ್ಲಿ ಹೆಚ್ಚಿಸಿದೆ ಹುಚ್ಚು..
ಅವಳನ್ನು ಹೆಚ್ಚು ಹೆಚ್ಚು ಹಚ್ಚಿಕೊಂಡು ನಾನಾದೆ ಮತ್ತೂ ಹುಚ್ಹ,
ಅವಳು ಮಾತ್ರ ನನ್ನನ್ನು ನೆನೆಸಿಕೊಂಡು ಯಾವಾಗಲೂ ಆಗಲೇ ಇಲ್ಲ ಹುಚ್ಚಿ...
ಯಾಕೆ ನನ್ನಲ್ಲಿ ಹೀಗಾಗುತ್ತಿದೆ?
ಅದು ನನಗೂ ಗೊತ್ತಾಗದೆ..
ಹೇಳಲು ಯಾರೂ ಇಲ್ಲ..
ಕೇಳಲು ಅವಳೇ  ಇಲ್ಲ..
ಅವಳು ಆಡಿದ ಒಂದೊಂದು ಮಾತೂ ಕೂಡ
ಇದೆ ನನ್ನಲ್ಲಿ ಮುತ್ತಿನ ತರಹ,
ಅವಳ ಅಂದ ಕಂಡು ಆಕಾಶವೂ ಕೆಂಪಾಯಿತು.,
ಅವಳ ಚಂದ ಕಂಡು ನಾನು ಮಾತ್ರ ಕಪ್ಪಾದೆ!
ಅವಳ ಕೂದಲೋ ರೇಶಿಮೆ,
ಮೊಗವಂತೂ ಹುಣ್ಣಿಮೆ..
ಅವಳ ಚಂದ ಕಣ್ತುಂಬಿಕೊಳ್ಳಲು ಎರಡೂ ಕಣ್ಣು ಕಡಿಮೆ..
ಕಾಯಿಸಬೇಡ ಹೀಗೆ ನನ್ನನ್ನು.,
ಬಂದು ಬಿಡು ನನ್ನ ಮನಕಿನ್ನು.......

Friday, January 07, 2011

ನಾನೂ ಸಾಧ್ಯವಾದರೆ ಹಿಂದಿರುಗಿಸುವೆ ನಿನ್ನ ಹೃದಯವನ್ನು..........

nanDu.
ನನಗೆ ಈಗೀಗ ರಾತ್ರಿಯೆಲ್ಲ ಬರುತ್ತಿಲ್ಲ ನಿದ್ದೆ,
ಅವನ್ನೆಲ್ಲ ನೀ ಯಾಕೆ ಕದ್ದೆ?
ನಿನಗೂ ಹೀಗೆಲ್ಲಾ ಆಗುತ್ತಿದೆಯಾ,
ಅಥವಾ ಇದು ಬರೀ ನನ್ನ ಭ್ರಮೆಯಾ?

ಮನಸು ನನ್ನ ಹಿಡಿತಕ್ಕೇ ಸಿಗುತ್ತಿಲ್ಲ,
ಕನಸುಗಳು ಹೃದಯದ ತುಂಬೆಲ್ಲ..
ಕಣ್ಣಲ್ಲಿ ಯಾಕೋ ಧಾರಾಕಾರ ನೀರು,
ಹುಡುಕುತ್ತಿವೆ ಅವು ಅದಕ್ಕೆ ಕಾರಣವಾದವರು ಯಾರು?

ಮನವೇ ಖುಷಿಯಿಂದ ತಯಾರಾಗಿ ನಿಂತಿದೆ ಜಿಗಿಯಲು ಹಾರಿ,
ಆದರೆ ಯಾಕೋ ಆಗುತ್ತಿಲ್ಲ, ಅದಕ್ಕೂ ನೀನೇ ನೆನಪಾಗಿ ಈ ಬಾರಿ...
ಸಾಕಿನ್ನು ಮರಳಿ ಕೊಟ್ಟುಬಿಡು ನನ್ನ ನಿದ್ದೆಯನ್ನು,
ನಾನೂ ಸಾಧ್ಯವಾದರೆ ಹಿಂದಿರುಗಿಸುವೆ ನಿನ್ನ ಹೃದಯವನ್ನು...!!

ಹುಡ್ಗೀರ್ನ ಅರ್ಥ ಮಾಡ್ಕೊಳ್ಳೋದು ತುಂಬಾ ಕಷ್ಟ... ಅಪ್ಪಿ ತಪ್ಪಿ ಅರ್ಥ ಮಾಡ್ಕೊಂಡು ಇಷ್ಟಾ ಪಟ್ರೆ, ನಿಮಗೇ ನಷ್ಟ....!!!

nanDu!

ಹುಡ್ಗೀರೆ ಹೀಗೇನಾ ?
ಲವ್ ಅಂದ್ರೆ ಅಂದ್ಕೋತಾರೆ,
ಹಾಕ್ಬೇಕು ಹುಡ್ಗಾ Branded ಶೂ, ಶರ್ಟು ..
ಬಯಸೋದೆ ಇಲ್ವಾ ಯಾರೂ ಇರ್ಬೇಕು ಅವನಿಗೆ Standard ಹಾರ್ಟು ..??


ಹುಡ್ಗೀರ್ಗೆ ಬೇಕು..ಎಲ್ಲಾ ...
ಹುಡ್ಗನ್ ಹತ್ರಾ ಇರ್ಬೇಕು Imported ಬೈಕು , ಗ್ಲಾಸು..
ಯಾರೂ ನೋಡೋದೇ ಇಲ್ವಾ Inside ಇರೋ ಲವ್ ಮಾಡೋ ಮನ್ಸು..?
ದಿನಾ ಹುಡುಗ್ರು ಬೇಕು ಶಾಪಿಂಗ್ ಮಾಡ್ಸೋಕೆ, ಪಾನಿ ಪುರಿ ಕೊಡ್ಸೋಕೆ...
ಊರ್ ಸುತ್ಸೋಕೆ, ಮೂವಿ ತೋರ್ಸೋಕೆ....


ಪಾರ್ಕ್ ಗೂ ಅವ್ರೆ ಬೇಕು... ಹೋಟೆಲ್ ಬಿಲ್ ಕೊಡೋಕೆ ಮೊದ್ಲು ಅವ್ರೇ ಬೇಕು ...
ಹುಡ್ಗೀರೇ ಒಂಥರಾ ...
ಎಲ್ಲಾ ಹೇಳೋದ್ ಹೇಳ್ಬಿಟ್ಟು,  ಮಾಡೋದ್ ಮಾಡ್ಬಿಟ್ಟು ...
ಆಮೇಲ್ ಅಂತಾರೆ ಹುಡ್ಗಾನೇ ಸರಿ ಇಲ್ಲಾ ಕೈಕೊಟ್ಟು....


ಅಂದ್ಕೋತಾರೆ ಯಾರಿಗೆ ಏನೇ ಎಲ್ಲೇ ಒಳ್ಳೆದಾದ್ರೂ ಅದು ಹುಡ್ಗೀರಿಂದಾ..
ಯಾರಿಗೆ ಏನೇ ಎಲ್ಲೇ ಕೆಟ್ಟದ್ ಆದರೂ ಅದು ಹುಡುಗ್ರಿಂದಾ...
ಯಾಕ್ ಹುಡ್ಗೀರೆ ಹೀಗಾ ??
ಅದ್ಕೆ ಅನ್ನೋದು ಹುಡ್ಗೀರ್ನ, ಅರ್ಥ ಮಾಡ್ಕೊಳ್ಳೋದು ತುಂಬಾ ಕಷ್ಟ...
ಅಪ್ಪಿ ತಪ್ಪಿ ಅರ್ಥ ಮಾಡ್ಕೊಂಡು ಇಷ್ಟಾ ಪಟ್ರೆ, ನಿಮಗೇ ನಷ್ಟ....!!!

Wednesday, January 05, 2011

ನನ್ನ ಮನಸ್ಸು ಹೇಳಿದ್ದನ್ನು ಮಾಡದೆಯೇ ಬಿಡುವುದಿಲ್ಲ..

~nanDu*

ಕೆಲವರು ನನಗೆ ತಿಳಿಯದಂತೆ ಅಂದರು ನೀನು ಬರೆಯಬೇಡ ಎಂದು,
ಅದಕ್ಕೆ ಅವರಿಗೆ ತಿಳಿಸಿಯೇ ಹೇಳುವೆ, ನಾನು ಯಾವುದಕ್ಕೂ ಕುಗ್ಗುವುದಿಲ್ಲ ಎಂದೂ,
ಅವರು ನನಗೆ ಹೇರಿದರು ಒಂದು ವಾರದ ನಿಷೇಧ,
ಅದಕ್ಕೆ ನನಗೆ ಆಗಲಿಲ್ಲ ಒಂಚೂರೂ ವಿಷಾದ..


ಅವರು ಏನನ್ನೇ ಹೇಳಿದರೂ ನಾನು ಕೇಳುವುದಿಲ್ಲ,
ನನ್ನ ಮನಸ್ಸು ಹೇಳಿದ್ದನ್ನು ಮಾಡದೆಯೇ ಬಿಡುವುದಿಲ್ಲ..
ಅವರು ಹೊರಗಿನಿಂದ ಏನನ್ನೋ ಹೇಳಿದರು,
ನಾನು ಒಳಗಿನಿಂದ ಎಲ್ಲವನ್ನೂ ಕೇಳಿದೆ..


ಅವರು ಏನೇ ಹೇಳಿದರೂ ಪ್ರೀತಿಯಿಂದಲೇ ಹೇಳುವರು,
ಯಾಕೆಂದರೆ ನನಗೆ ಗೊತ್ತು ಎಲ್ಲರೂ ಒಂದೇ ಕುಟುಂಬದವರು..!

ನೀ ನನ್ನ ಬಾಳಿಗೆ ಬಂದ ಮೇಲೆಯೇ ಎಲ್ಲ................!!!

mmmmmm ...?! ;)

ನನ್ನ ಕವನಗಳಿಗೆ ಅವಳೇ ಸ್ಪೂರ್ತಿ,
ನನ್ನ ಕನಸುಗಳಿಗೆ ಅವಳೇ ಶಕ್ತಿ..
ಬಿಟ್ಟೇನೆಂದರೂ  ಬಿಡದೀ ಮಾಯೆ,
ಎಲ್ಲಿ ಹೋದರೂ ಅವಳದೇ ಛಾಯೆ ...


ಬಂದು ನಗುವಳು ನಾನು ಎಲ್ಲಿದ್ದರೂ,
ನನಗೇ ತಿಳಿಯದಂತೆ ಹಿಂಬಾಲಿಸುವೆ, ಅವಳು ಎಲ್ಲಿ ಹೋದರೂ..
ನನಗೇ ಯಾವಾಗಲೂ ಹೀಗೆಲ್ಲ ಆಗಿಯೇ ಇಲ್ಲ,
ನೀ ನನ್ನ ಬಾಳಿಗೆ ಬಂದ ಮೇಲೆಯೇ ಎಲ್ಲ ....................!!

Tuesday, January 04, 2011

ನೀ ಹೀಗೆ ಮಾಡಲು ಕಾರಣವಾದರೂ ಏನು?

Guess HER!

ಬೆಪ್ಪನಂತೆ ನಿನ್ನ ಮುತ್ತಿಗಾಗೇ ಕಾಯುತ್ತಿರುವ ನಾನು,
ಯಾರಿಗೋ ಕೇಳದೆಯೇ ಮುತ್ತು ಕೊಡುವ ನೀನು..
ನೀ ಹೀಗೆ ಮಾಡಲು ಕಾರಣವಾದರೂ ಏನು.,
ನಾನು ಮಾಡಿದ ತಪ್ಪಾದರೂ ಏನು ?


ನೀನು ಹೀಗೆ ಮಾಡುವುದು ಸರಿಯೇ,
ನಿನಗೆ ಅದು ಸರಿ ಎನಿಸಿದರೆ ಅದು ಸರಿಯೇ ತಾನೇ ?
ನಿನಗೆ ಹೇಳಲು ನಾನು ಯಾರು.,
ನಾನು ಹೇಳಿದ್ದೇ ಕೇಳಲು ನೀನು ಯಾರು ?


ನಿನಗೆ ಸರಿ ಅನ್ನಿಸಿದ್ದು ನೀನು ಮಾಡು.,
ನನಗೆ ಸರಿ ಅನ್ನಿಸಿದ್ದು ನಾನು ಮಾಡುವೆ ...
ಅದುವೇ.,.........
ನಾ ನಿನ್ನ ಸದಾ ನೆನೆಯುವೆ....!!

ಗೆಳತೀ, ಹೇಳಿಬಿಡು ಈಗಲಾದರೂ ಇದು ಪ್ರೇಮವಾ, ಬರೀ ಸ್ನೇಹವಾ?

nanDu
ನನ್ನ ಹೃದಯ ಒಡೆದು ನುಚ್ಚು ನೂರಾಗುವ ವೇದನೆ,
ನಿನಗೆ ಇನ್ನೆಲ್ಲೋ ನಿನ್ನದೇ ರೋದನೆ..
ಮಾಡಬೇಡ ಈ ತರಹ ಇನ್ನೆಂದೂ,
ಬಾಳೋಣ ನಗುನಗುತ ಎಂದೆಂದೂ..

ಗೆಳತೀ, ಹೇಳಿಬಿಡು ಈಗಲಾದರೂ ಇದು ಪ್ರೇಮವಾ, ಬರೀ ಸ್ನೇಹವಾ ??

ಇದು ಯಾವ ರೀತಿಯ ಹುಚ್ಚೋ ನಾನಂತೂ ಕಾಣೆ,
ಮೊದಲೇ ನೀನು ಏನನ್ನೂ ಹೇಳುವುದಿಲ್ಲ, ನೀನೋ ಮಹಾ ಜಾಣೆ..
ಮೊದಮೊದಲಿದ್ದ ಆ ಪ್ರೀತಿ,
ಅದು ಜಾರಿದ ಆ ರೀತಿ..

ಗೆಳತೀ, ಹೇಳಿಬಿಡು ಈಗಲಾದರೂ ಇದು ಪ್ರೇಮವಾ, ಬರೀ ಸ್ನೇಹವಾ ??

ಆ ಪ್ರೀತಿ ಮಾಯವಾಯಿತೋ ಹೇಗೆ ಗೊತ್ತಿಲ್ಲ,
ಅದನ್ನು ಹೇಳಬಲ್ಲ ದೇವರೂ ಇನ್ನೆಲ್ಲಿ ಸಿಗುವನೋ, ಮೊದಲೇ ತಿಳಿದಿಲ್ಲ..
ಮನೆಯಲ್ಲೂ ನೀನೆ , ಮನದಲ್ಲೂ ನೀನೆ ..
ಎದುರಲ್ಲೂ ನೀನೆ , ಮನಸಲ್ಲೂ ನೀನೆ..
ಕನಸಲ್ಲೂ ನೀನೆ , ಮನಸಲ್ಲೂ ನೀನೆ ..
ಎಲ್ಲೆಲ್ಲೂ ನೀನೆ ....
ನಾನ್ಯಾಕಾದೆ ಹೀಗೆ, ನಾನೇ ಕಾಣೆ ........

ಗೆಳತೀ, ಹೇಳಿಬಿಡು ಈಗಲಾದರೂ ಇದು ಪ್ರೇಮವಾ, ಬರೀ ಸ್ನೇಹವಾ ??

ಯಾಕೆ ಹೀಗೆ ಕಾಡುವೆ ನನ್ನ,
ನೀನು ನನಗೆ ಮಾಡಿರುವುದಾದರೂ ಏನು ಚಿನ್ನ?
ಯಾಕೆ ಯಾವಾಗಲೂ ಈ ತರಹದ ಆಟ.,
ನನ್ನನ್ನು ಪಡೆಯಲು ನೀನು ಮಾಡಿರುವೆಯೋ ಏನಾದರೂ ಮಾಟ?

ಗೆಳತೀ, ಹೇಳಿಬಿಡು ಈಗಲಾದರೂ ಇದು ಪ್ರೇಮವಾ, ಬರೀ ಸ್ನೇಹವಾ ??

ಸಾಕು ಮಾಡಿನ್ನು ಕಣ್ಣಲ್ಲೇ ಕಥೆ ಹೇಳುವ ಭಾಷೆಯನ್ನು.,
ನನ್ನ ಹೃದಯದಲಿ ಬರೆದು ಬಿಡು ನಿನ್ನ ಮನಸಿನ ಭಾವನೆಯನ್ನು ...
ನನ್ನ ಹೃದಯದ ಬಡಿತವನ್ನು ತಾಳಲಾರೆನು ನಾನು ಇನ್ನು.,,.,
ನಿನಗೂ ಇದು ಆಗಿರಲಿಕ್ಕೂ ಸಾಕು, ತಡಮಾಡಬೇಡ ನೀನೂ ಇನ್ನು .....!!

ಗೆಳತೀ, ಹೇಳಿಬಿಡು ಈಗಲಾದರೂ ಇದು ಪ್ರೇಮವಾ, ಬರೀ ಸ್ನೇಹವಾ ???


Monday, January 03, 2011

ಒಮ್ಮೆಯಾದರೂ ನಕ್ಕು ಬಿಡು , ಸಾಕದು ನನಗೆ ಜೀವಮಾನವಿಡಿ...

Jepee Bhat.
ನೀ ಅಪರೂಪಕ್ಕೆ ದೂರದಿಂದಲೇ ಮಾಡುವ ಮೋಡಿ,
ಇಡುವುದು ನನ್ನ ಯಾವಾಗಲೂ ಕಾಡಿ ಕಾಡಿ ..
ನೀನಿರಲು ನನ್ನ ಸನಿಹ,
ತೇಲುವುದು ಖುಷಿಯಿಂದ ನನ್ನ ಮನ ..

ಒಮ್ಮೆಯಾದರೂ ನಕ್ಕು ಬಿಡು , ಸಾಕದು ನನಗೆ ಜೀವಮಾನವಿಡಿ ...

ನೀನು ಮಾತನಾಡುವುದೇ ಚೆನ್ನ ,
ಆಗ ನನ್ನ ಲೋಕವಾಗುವುದು ಚಿನ್ನ..
ಬರಸೆಳೆದು ಅಪ್ಪಿಕೋ ನನ್ನ ,
ಆಗ ನಾ ನೋಡುವೆ ಕನಸಲ್ಲೂ ನಿನ್ನ ...

ಒಮ್ಮೆಯಾದರೂ ನಕ್ಕು ಬಿಡು , ಸಾಕದು ನನಗೆ ಜೀವಮಾನವಿಡಿ ...

ಅಲ್ಲಿಂದಲೇ ನಿನ್ನಲ್ಲೇ ನೀನು ಪಿಸುಗುಟ್ಟು ಏನಾದರೂ ಮೆತ್ತಗೆ,
ನನಗೆ ಖುಷಿ ಆಗುವುದು ಇಲ್ಲಿಂದಲೇ ಆ ಹೊತ್ತಿಗೆ...
ನಿಜದಲ್ಲೂ, ಕನಸಲ್ಲೂ, ಯಾವಾಗಲೂ ನಿನ್ನ ಜೊತೆಗೇ ಇರಲು ಬಯಸುವೆ ನಾನು,
ಹಗಲಲ್ಲೂ, ಇರುಳಲ್ಲೂ, ಎಲ್ಲೆಲ್ಲೂ, ಬೇರೆಯವರನ್ನೇ ಚಿಂತಿಸುವೆ ನೀನು ....

ಒಮ್ಮೆಯಾದರೂ ನಕ್ಕು ಬಿಡು , ಸಾಕದು ನನಗೆ ಜೀವಮಾನವಿಡಿ ...


ಯಾತಕೀ ಯಾರೂ ಮಾಡದ ತಪ್ಪಿಗೆ ಹೃದಯಕೆ ಪರಿಧಿ ?
ಇನ್ನಾದರೂ ನೀನು ಕಡಿಮೆ ಮಾಡು ನನ್ನ ಹೃದಯದ ನೋವಿನ ಅವಧಿ ....

ಒಮ್ಮೆಯಾದರೂ ನಕ್ಕು ಬಿಡು , ಸಾಕದು ನನಗೆ ಜೀವಮಾನವಿಡಿ ...!!