Wednesday, February 23, 2011

ಆ ಎಲ್ಲ ನೆನಪುಗಳನ್ನೇ ಮರೆಯೋಣವೆಂದು ಬಹಳಷ್ಟು ಪ್ರಯತ್ನಪಟ್ಟೆ..

ಹೃದಯದಿಂದ ರಕ್ತ!

ಸುಮ್ಮನೇ ಕುಳಿತಿದ್ದೆ, ಕೊರಳ ಸೆರೆ ಉಬ್ಬಿ ಬಂತು..
ಚೆನ್ನಾಗಿದ್ದ ಹೃದಯದಿಂದ ರಕ್ತವೇ ಹರಿದು ಬಂತು..
ಹೊಳೆಯುತ್ತಿದ್ದ ಕಣ್ಣುಗಳಲ್ಲಿ ಧಾರಾಕಾರ ನೀರು..
ಚೆನ್ನಾಗಿದ್ದ ಮನಸು, ಕನಸು  ಈಗ ಬರೀ ಕೆಸರು...

ನೆನಪುಗಳು ಸುಮ್ಮ ಸುಮ್ಮನೇ ಒಟ್ಟೊಟ್ಟಿಗೇ ಬಂದು ಸತಾಯಿಸುತ್ತಿವೆ..

ಬೇಡವೆಂದರೂ ಬಂದು ಬಂದು ಹಳೆಯ ಬೇಡದ ನೆನಪನ್ನೇ ಕೆದಕುತ್ತಿವೆ...
ಸಿಹಿಯಾದದ್ದೋ, ಕಹಿಯಾದದ್ದೋ, ಎಲ್ಲರ ಎಲ್ಲ ನೆನಪುಗಳೇ ಹಾಗೆ...
ಸುಮ್ಮನೇ ಬಂದು ಚೂಪಾದ ಚೂರಿಯ ತರಹ ಇರಿಯುತ್ತಿರುತ್ತವೆ ಹೀಗೆ...

ಆ ಎಲ್ಲ ನೆನಪುಗಳನ್ನೇ ಮರೆಯೋಣವೆಂದು ಬಹಳಷ್ಟು ಪ್ರಯತ್ನಪಟ್ಟೆ..

ಆಗದೇ ಸೋತು ಸುಮ್ಮನೇ ಕೈ ಕಟ್ಟಿ ಮಂಕಾಗಿ ಕುಳಿತುಬಿಟ್ಟೆ...
ಅವಳನ್ನೇ ಮಾತನಾಡಿಸೋಣವೆಂದು ಕೂತಲ್ಲಿಂದ  ಎದ್ದು ಹೊರಟೇಬಿಟ್ಟೆ...
ಏತಕ್ಕೆ ಎಲ್ಲಿ ಹೇಗೆ ಏನು ಮಾಡುತ್ತಿದ್ದೇನೆ ಎಂಬುದನ್ನೇ ಮರೆತುಬಿಟ್ಟೆ.....!!:(

2 comments:

ಅನು. said...

ಬೇಡವೆಂದರೂ ಹಠಮಾಡಿ ಬರುತ್ತವೆ ಈ ನೆನಪುಗಳು..
ಕೆಲವೊಮ್ಮೆ ಸಿಹಿಯನ್ನೂ,ಮಗದೊಮ್ಮೆ ಕಹಿಯನ್ನು ಕೊಡುವಂತವುಗಳು..
ಸಿಹಿಯಾದರೆ ನಮಗೆ ಇನ್ನೂ ಬೇಕೆನಿಸುವಂತವುಗಳು..
ಕಹಿಯಾದರೆ ಜೀವನವೇ ಬೇಡವೆನಿಸುವಂತವುಗಳು..
ಅವುಗಳನ್ನು ಇರಿದಾಗ ಮಾಸುವುದೇ..ನೆನಪುಗಳು..
ರಕ್ತಗಟ್ಟಿಯಾಗಿ,ಹೃದಯಗಟ್ಟಿಯಾದಾಗ ಎಲ್ಲಾ ಸರಮಾಲೆಗಳು..
ಏನಿಲ್ಲವೆಂದರೂ..ಜೀವನದಿ ಇವೆ ಈ ಎಲ್ಲಾ ಸೋಜಿಗಗಳು..

ಜೇಪೀ ಭಟ್ ! said...

Anu: Ur right...:)