Thursday, March 17, 2011

ಎಲ್ಲರೊಡನೆ ಕಲೆತು, ಬೆರೆತು, ನಲಿದರಲ್ಲವೇ ಜೀವನ?

#JP!

ನನಗೆ ಯಾವುದರ ಮೇಲೆಯೂ ಮೋಹವಿಲ್ಲ,
ಆದರೆ ಎಲ್ಲರ ಮೇಲೆಯೂ, ಎಲ್ಲದರಲ್ಲಿಯೂ ಪ್ರೀತಿಯಿದೆ..
ಮೋಹವೆಂದರೆ ಪ್ರೀತಿಗೂ ಮೀರಿದ್ದು,
ಬರೀ ಮೋಹ ತುಂಬಾ ಕೆಟ್ಟದ್ದು..

ಯಾವುದರಲ್ಲಿಯೂ ನೀನು, ತಾನು ಎನ್ನಬೇಡ,

ಯಾರೊಂದಿಗೂ ಕಿತ್ತಾಟ, ಜಗಳ, ಹೊಡೆದಾಟ ಬೇಡ..
ಸಂಘ ಜೀವಿ, ಸಂಘಟನೆಯಲ್ಲಿ ಖುಷಿ ನೋಡು,
ನಿನ್ನಲ್ಲಿರುವ ಶಕ್ತಿ, ಸಂತೋಷವನ್ನು ಹಂಚಿ ಕೊಡು..

ಎಲ್ಲರೊಡನೆ ಕಲೆತು, ಬೆರೆತು, ನಲಿದರಲ್ಲವೇ ಜೀವನ?

ಸಮಾಜದಲ್ಲಿ ಎಲ್ಲರ ಸಹಾಯ ಸಿಕ್ಕರಲ್ಲವೇ ಜೀವನ ಪಾವನ...??

9 comments:

ಕನಸು ಕಂಗಳ ಹುಡುಗ said...

ಹೂಂ. ಕವನ ಚನ್ನಾಗಿದೆ.

ಕಲೆತು ಬೆರೆತು ನಡೆದರೇನೇ ಜೀವನದ ಸ್ವಾದ ಸಿಗೋದು...

ಅನು. said...

ಪ್ರೀತಿ ಶಾಶ್ವತವಾಗಿರಬೇಕು...
ಮೋಹ ಹಿಡಿತದಲ್ಲಿರಬೇಕು...
ಜಗತ್ತಿಗೆ ಸಂದೇಶ ಕೊಡುತ್ತಿರಬೇಕು...
ನಿನ್ನ ಜೀವನ ಉಜ್ವಲವಾಗಿರಬೇಕು.

ಜೇಪೀ ಭಟ್ ! said...

ಕನಸು: ಧನ್ಯವಾದಗಳು.. ಹೀಗೆ ಓದಿ ಕಾಮೆಂಟ್ ಮಾಡ್ತಾ ಇರಿ:):)

ಜೇಪೀ ಭಟ್ ! said...

ಅನು: ನಿಮ್ಮ ಹಾರೈಕೆಗೆ ಧನ್ಯವಾದಗಳು..
ಧನ್ಯವಾದಗಳು.. ಹೀಗೆ ಓದಿ ಕಾಮೆಂಟ್ ಮಾಡ್ತಾ ಇರಿ:):)

ವೆಂಕಟೇಶ್ ಹೆಗಡೆ said...

ಮೋಹವೆಂದರೆ ಪ್ರೀತಿಗೂ ಮೀರಿದ್ದು,
ಬರೀ ಮೋಹ ತುಂಬಾ ಕೆಟ್ಟದ್ದು.. nice jeepee

ಜೇಪೀ ಭಟ್ ! said...

Nannolagina kanasu:
Thanks venkanna... heege odi comment maadta iri.:)

Unknown said...

supb...

ಜೇಪೀ ಭಟ್ ! said...

ಗೀತಾ: ಥ್ಯಾಂಕ್ಸ್!

Unknown said...

Well said JP :)