Friday, March 25, 2011

ಹೃದಯದ ನೋವನ್ನು ನಾನೇ ಯಾವಾಗಲೂ ಕಂಡೆ.. ಹೃದಯದ ಕರೆಗೆ ಮತ್ತೆ ಅವಳಿಗಾಗಿಯೇ ಓಡೋಡಿ ಬಂದೆ!

Jepee bhat's.

ಹಣೆಯ ಮೇಲಿನ ಆತಂಕದ ಗೆರೆ,
ಹೆಚ್ಚಿಸಿತು ನನ್ನ ತಲೆಯ ಮೇಲಿನ ಹೊರೆ..
ಚಿಂತಿಸಿದಾಗ ತಿಳಿಯಿತು, ಅದು ಮನಸ್ಸಿಗೆ ಬಿದ್ದ ಬರೆ,
ಆಗ ನನ್ನಲ್ಲೇ, ನನಗೆ ನಾನೇ ಆದೆ ಸೆರೆ..

ಕೆಲವೊಮ್ಮೆ ಮನಸ್ಸು ನಿಂತೇ ಬಿಡುತ್ತದೆ..

ಏನೂ ಮಾಡದೆ, ಮಾತೂ ಆಡದೇ...
ಹೃದಯ ಮಾತ್ರ ಬಡಿದುಕೊಳ್ಳುತ್ತದೆ ತನ್ನ ಪಾಡಿಗೆ,
ಆದರೆ ಕಣ್ಣಲ್ಲಿ ಮಾತ್ರ ನೀರು ಯಾರಿಗೂ ಹೇಳದೇ...

ಸತ್ತ ಹೃದಯ ಅವಳಿಗಾಗಿಯೇ ಬದುಕಿದೆ..

ಇದ್ದ ಹೃದಯದ ಬಡಿತ ಎಂದೋ ನಿಂತಿದೆ..
ಹೃದಯದ ನೋವನ್ನು ನಾನೇ ಯಾವಾಗಲೂ ಕಂಡೆ..
ಹೃದಯದ ಕರೆಗೆ ಮತ್ತೆ ಅವಳಿಗಾಗಿಯೇ ಓಡೋಡಿ ಬಂದೆ!

8 comments:

Deepak bhat said...

suuper

ಜೇಪೀ ಭಟ್ ! said...

Deeps: :) thanks!!

ಕನಸು ಕಂಗಳ ಹುಡುಗ said...

ಓಹೋ ಏನೇ ಇದ್ದರೂ ಅವಳಿಒಗೊಂದು thanks...
ಅವಳು ಕರೆದದ್ದಕ್ಕೆ ತಾನೆ ಜೇಪೀ ಇಂದು ನಮ್ಮ ಮುಂದೆ...

ಚನ್ನಾಗಿದೆ ಕವನ,,,...

ಅನು. said...

ಜೇಡರ ಬಲೆಯಲಿ ನೀ ಸಿಲುಕಿದೆ..
ಹೃದಯದ ಬಡಿತ ಅವಳಿಗೆ ತಿಳಿಯದೆ..
ನಿನ್ನಸ್ಟಕ್ಕೆ ನೀ ಕೊರಗಿದೆ,ಸೊರಗಿದೆ..
ಆದರೂ ಮತ್ತೇಕೆ ಓಡೋಡಿ ಬಂದೆ..?

Unknown said...
This comment has been removed by the author.
ಜೇಪೀ ಭಟ್ ! said...
This comment has been removed by the author.
ಜೇಪೀ ಭಟ್ ! said...

ಕನಸು ಕಂಗಳ ಹುಡುಗ: ಹ್ಹಾ ಹ್ಹಾ..... ನಿಮ್ ಥ್ಯಾಂಕ್ಸ್ ಅವಳಿಗೆ ನಾ ತಿಳಿಸುವೆ...
ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು:
ಹೀಗೆ ಓದಿ ಕಾಮೆಂಟ್ ಮಾಡಿ...

ಜೇಪೀ ಭಟ್ ! said...

ಕವನ :
ಸೆಳೆತವೇ ಹಾಗೆ...
ಮೋಡಿಯೇ ಹೀಗೆ,,,!!
ಅದಕ್ಕೆ ಓಡೋಡಿ ಬಂದೆ...
ಅದನ್ನ ನೀ ಕಂಡೆ!!