Friday, May 06, 2011

ನೆನಪೇ ನೆಪವಾದಾಗ!

Jepee Bhat


ನೆನಪಲ್ಲೇ ನೆನಪಾಗಿ ಬಂದ ಅವಳು,

ತಣ್ಣನೆಯ ಮಳೆಯ ಹನಿಯಲ್ಲಿ ಕಂಡ ಅವಳು,
ಖುಷಿಯ ಕಣ್ಣೀರಲ್ಲೇ ನಾಚಿ ನೀರಾಗಿದ್ದ ಅವಳು,
ಈಗ ನನ್ನ ದುಃಖದ ಕಣ್ಣೀರಿಗೂ ಕಾರಣಳಾದವಳು ಅವಳು..

ನಗುವನ್ನೇ ನಾಚಿಸುವಂತೆ ನಗುತ್ತಿದ್ದ ಅವಳು,

ನೆಪಕ್ಕೆ ನೆನಪಾಗಿ ಬಂದ ಅವಳು,
ನಗಿಸುವ ಬದಲು ಅಳಿಸಿ ಮಾಯವಾದಳು,
ಈಗ ಮತ್ತೆ ಮತ್ತೆ ನೆನಪಾಗುತ್ತಿದ್ದಾಳೆ ಅವಳು....

ಆಗ ಕಂಡಿದ್ದೆಲ್ಲ ಬರೀ ನಿನ್ನ ಕಣ್ಣ ಹೊಳಪು,

ಈಗ ಮಾತ್ರ ಅದು ಬರೀ ನನ್ನ ನಿನ್ನ ನೆನಪು..
ಬರೀ ಕನಸಲ್ಲಿ ಮಾತ್ರ ಅದು ಸೊಗಸು...
ಈಗ ಅದೆಲ್ಲ ಆಗಿ ತೋರುತ್ತಿದೆ ಬರೀ ಕಪ್ಪು-ಬಿಳುಪು....

4 comments:

ಅನು. said...

ದು:ಖ ದುಮ್ಮಾನಗಳ ನಡುವೆಯೂ..
ದಿನವೂ ನೆನಪಿಸಿ ಕೊರಗುವೆಯಾ..
ಮರೆವಲ್ಲೆ ಮರೆತುಬಿಡು ಅವಳನ್ನೂ..
ಮತ್ತೆ ಬಾರದಂತೆ ಮನಸಿನೊಳಗೆ ಇನ್ನೇನೂ..

ಜೀವನದಿ ಸಹಜವಿದು ಈ ತರದ ನೆನಪು..
ಮೊದಲು ಕಂಡದ್ದೆಲ್ಲಾ ಬರೀ ಕಪ್ಪು,ಬಿಳುಪು..
ಈಗ ತುಂಬಿಕೋ ಬಣ್ಣ,ಬಣ್ಣದ ನೆನಪು..
ಆಗ ಸಿಗುವುದು ಮನಸಿಗೆಲ್ಲಾ ಹೊಳಪು..
Anu..

Nanda Kishor B said...

ಹ್ಮ್ಮ್ಮ್ಮ್...!!!
ಬರಹದ ಧಾಟಿ ಚೆನ್ನಾಗಿದೆ..
ಮುಂದುವರೆಸಿ ಬರವಣಿಗೆ..

ಅಂತೆಯೇ,
ದಯವಿಟ್ಟು ನಿಮ್ಮ comment ಮಾಡುವ option ಬದಲಿಸಿ ಅದನ್ನು ಬೇರೆಯೇ ಪುಟಕ್ಕೆ ಬರುವಂತೆ ಮಾಡಿದರೆ ನಮಗೂ ನಿಮ್ಮ ಪ್ರತಿ ಪ್ರತಿಕ್ರಿಯೆಯನ್ನು ತಿಳಿಯಲು ಸಹಾಯವಾಗುತ್ತದೆ...
ದಯವಿಟ್ಟು ಹೀಗೆ ಮಾಡಿ -> dashboard-> settings-> comments-> comment form placement : full page..

ಜೇಪೀ ಭಟ್ ! said...

kavana : :)
Heege Oduttaa comment maadta iri:)

ಜೇಪೀ ಭಟ್ ! said...

Nanda Kishor B:
Thanks!!
Tips kottiddakke:)
Neewu helida haageye maadiddene!!
Preeti sadaa heegeye irali!!:)
Bheti kottu Pratikriye needuttiri:):)