Tuesday, May 24, 2011

ನೀರೇ ಇಲ್ಲದೆ ಸಾಯುತ್ತಿರುವ ಮೀನಿನಂತೆ, ಎಲ್ಲವೂ ಇದ್ದು ನೀನೇ ಇಲ್ಲದೆ ಕಣ್ಣೀರಿಡುವ ನನ್ನಂತೆ!

Jepee BHAT:)

ಪ್ರೀತಿಯ ನೀನೇ ಇಲ್ಲದ ನನ್ನ ಬಾಳು,
ಮೂಕ ಬಡವನ ಹಸಿದ ಹೊಟ್ಟೆಯ ಗೋಳು..
ಸೂರ್ಯನೇ ಇಲ್ಲದ ಪೂರ್ತಿ ದಿನದಂತೆ,
ಚಂದಿರನೇ ಇಲ್ಲದ ಹುಣ್ಣಿಮೆಯ ದಿನದಂತೆ..

ಹುಣ್ಣಿಮೆಯ ಕಾಣದ ನವ ವಧು-ವರರ ಜೋಡಿಯಂತೆ,

ಮಳೆಯೇ ಕಾಣದ ಮಲೆನಾಡಿನ ರೈತರಂತೆ..
ನೀರೇ ಇಲ್ಲದೆ ಸಾಯುತ್ತಿರುವ ಮೀನಿನಂತೆ,
ಎಲ್ಲವೂ ಇದ್ದು ನೀನೇ ಇಲ್ಲದೆ ಕಣ್ಣೀರಿಡುವ ನನ್ನಂತೆ!

ನನ್ನ ಮಾತನ್ನು ಕೇಳುವವರಿಲ್ಲ ಇಲ್ಲಿ ಯಾರೂ,

ನಿನಗೂ ಬೇಡವಾದೆನಾ ನಾನು ಒಂದು ಚೂರೂ?
ಇನ್ನಾದರೂ ದಯಮಾಡಿ ಸ್ವಲ್ಪ ತಿರುಗಿ ನೋಡು,
ನನ್ನೆದೆಯ ನೋವ ಕಿಂಚಿತ್ತಾದರೂ ಕಡಿಮೆ ಮಾಡು..

2 comments:

Sahana Rao said...

Abba! Adenta novide ee kavanadalli..

ಜೇಪೀ ಭಟ್ ! said...

ಸ್ಪಯ್ಸಿ ಸ್ವೀಟ್:
ಹ್ಮ್ಮ್, ನಿಮಗೆ ಬರೀ ನೋವು ಕಂಡಿತಾ?
ಹೀಗೆ ಓದುತ್ತಾ ಕಾಮೆಂಟ್ ಮಾಡಿ:)