Happy New Year-2014! Jepee Bhat |
ಅಮಾವಾಸ್ಯೆಯಂದು ಮತ್ತೆ ಅವಳ ನಗು,
ಸುಮ್ಮನೆ ಬೆಳಕಿನಾಟವೆಂದು ತಿಳಿಯಲೋ?
ಅಥವಾ ಕತ್ತಲಿನ ಶುದ್ಧ ಮೂರ್ಖತನವೋ?
ಹುಣ್ಣಿಮೆಯಂದು ಮತ್ತವಳದೇ ಅಳುವಿಗೆ,
ಬೆಳಕಿನ ಪ್ರೀತಿಯ ಸಾಂತ್ವನವೋ?
ಕತ್ತಲಿನ ಮೌನ ಮುಗುಳ್ನಗೆಯೋ?!!
----------------------------------------------------------
ಕಸ್ತೂರಿ ಘಮಕ್ಕೆ ಮನಸೋತ ಪ್ರಬುದ್ಧ ಮನಸೋ?
ತಾಳ-ಮೇಳವಿಲ್ಲದೆ ಜೀಕುತ್ತಿರುವ ಹೃದಯದ ಮುನಿಸೋ?
ಮೌನ-ಮಾತಿಗೆ, ಪ್ರೀತಿ-ದ್ವೇಷಕ್ಕೆ, ಕಾರಣಗಳೇ ಬೇಕಿಲ್ಲ..
ಇರುವ, ಭಯದಿಂದ ಕಂಗೆಟ್ಟಿರುವ ಶರೀರಕ್ಕೆ ಸಮಾಧಾನವೇ ಸಾಕಲ್ಲ..

ಮತ್ತದೇ ಕೋಪ, ಕಾರಣವಿಲ್ಲದ ಜಗಳ, ದೊಡ್ಡ ಗೋಡೆಯನ್ನು ಕಟ್ಟದಿರಲಿ..
ಹೊಸ ವರುಷವನ್ನು ಬಾಚಿ ತಬ್ಬೋಣ, ಮುಖದ ಮೇಲಿನ ನಗೆಯು ಎಂದಿಗೂ ಮಾಸದಿರಲಿ..

ಬೀಸುವ ಗಾಳಿ, ಹರಿಯುವ ನೀರು, ನಿನ್ನ ಕಣ್ಣಿನ ಕಪ್ಪು ಎಲ್ಲದರಲ್ಲೂ ನಿನದೇ ನೆನಪು..
ಈ ಬರುತ್ತಿರುವ ವರ್ಷವಾದರೂ ಆರಿಸದಿರಲಿ ಮನೆ ದೀಪದ ನಲಿಯುವ ಒಲವಿನ ಒನಪು!! :)
-----------------------------------------------------------
''ಇನ್ನೇನು ಮುಗಿಯಲಿರುವ ಈ ವರ್ಷದ ಕೊನೆಗೆ, ತಾನೂ ಸಹ ಮುಗಿಯುತ್ತೇನೆಂದು ಗೊತ್ತಿದ್ದೂ ಸಹ ಈಗ ಏಳಲಿರುವ ಹೊಸ ವರ್ಷದ ಸ್ವಾಗತಕ್ಕೆ ನನ್ನ ಕೊನೆಯ ಮತ್ತು ಮೊದಲ ಕೆಲವು ಸಾಲುಗಳು''
❤❤''ಅಂತ್ಯ'' ಆರಂಭವೂ ಹೌದು, ಕೊನೆಯೂ ಹೌದು!❤❤
ಎಲ್ಲರಿಗೂ ಹೊಸ ವರ್ಷ ಶುಭವನ್ನೇ ಉಂಟುಮಾಡಲಿ :) :) ಹೊಸ ವರ್ಷ ೨೦೧೪ ರ ಹಾರ್ದಿಕ ಶುಭಾಶಯಗಳು :) :)
-- ಜೇಪೀ ಭಟ್ :)

4 comments:
ಹೊಸ ವರ್ಷ ಶುಭವನ್ನೇ ಉಂಟುಮಾಡಲಿ ಎಂಬ ಹಾರೈಕೆಯೊಂದಿಗೆ ಬಂದ ನಿಮ್ಮ ಹನಿಗಳ ಮೇಳ ನೆಚ್ಚಿಗೆಯಾದವು.
ಬದರೀನಾಥ್ ಪಲವಳ್ಳಿ:
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು :) :)
ಹೀಗೆಯೇ ಯಾವಾಗಲೂ ಮೆಚ್ಚಿಗೆಯೊಂದಿಗೆ ನೆಚ್ಚಿನ ಮಾತುಗಳನ್ನು ಆಡುತ್ತಿರಿ :)
ನಿಮಗೆ ಹೊಸ ವರ್ಷದ ಶುಭಾಶಯಗಳು ಮತ್ತೊಮ್ಮೆ !!
Idu antya kaanada aarambhavaagali JP.
Happy New Year..
Sandhya:
Kaadu nodona enu aagutte antaa.. Protsaahakke dhanyawaadagalu, Happy new year :)
Post a Comment