Tuesday, March 11, 2014

ಹಿಂಗೆಲ್ಲಾ ಆಗತ್ತೆ ಅಂತಾ ಗೊತ್ತಿದ್ರೆ ನಾನ್ ದೊಡ್ಡೋನ್ ಆಗ್ತಾನೇ ಇರ್ಲಿಲ್ಲಾ!!


Jepee bhat


ಹಿಂಗೆಲ್ಲಾ ಆಗತ್ತೆ ಅಂತಾ ಗೊತ್ತಿದ್ರೆ ನಾನ್ ದೊಡ್ಡೋನ್ ಆಗ್ತಾನೇ ಇರ್ಲಿಲ್ಲಾ!!

ಆಗ ತುಂಬಾ ಹಿಂದೆ, ಹುಟ್ದಾಗ ಏನ್ ಮಜಾ ಇತ್ತು,
ಅತ್ತು-ಕರ್ದು ಮಾಡಿದ್ರೆ ಪುಕ್ಸಟ್ಟೆ ಕಷ್ಟಾ ಪಡ್ದೇ ಹೊಟ್ಟೆ ತುಂಬಾ ಊಟ,
ಕೂತಲ್ಲೇ ಆಟ, ತಣ್ಣಗೆ ತೊಟ್ಲಲ್ಲಿ ಸೊಂಪಾದ್ ನಿದ್ದೆ,
ಆಚೆ ಕಡೆಗೆ ಏನಕ್ಕೂ ಎದ್ದು ಹೋಗ್ದೆ ಕೂತಲ್ಲೇ ಚಡ್ಡಿ ಎಲ್ಲಾ ಒದ್ದೆ!
ಮಲ್ಗೋಕೂ ಅಳು, ಹಸಿದ್ರೂ ಅಳು, ಯಾರ್ ಎತ್ಕೊಂಡ್ರೂ ಅಳು, ಬರೀ ಅಳು ಅಳು ಅಳು,
ಯಾರಾದ್ರೂ ನಮಗೆ ಬೇಕಾದವ್ರ್ ಎತ್ಕೊಂಡ್ ಮುದ್ ಮಾಡಿ ಒಂದ್ ಪಪ್ಪಿ ಕೊಟ್ರೆ,
ಬೊಚ್ ಬಾಯ್ ತುಂಬಾ ಹಲ್ಲಿಲ್ದೆ ಎಂಜಲ್ ಸುರಿಸ್ತಾ ಬರೀ ನಗುವೇ ನಗು!!
ಬೇಜಾರ್ ಬಂದಾಗಾ ಬಾಯಲ್ ಹಾಕೋಕೆ ಬೆಲ್ಲಾ, ಚಾಕ್ಲೇಟ್, ಸಕ್ಕರೆ,
ಇಲ್ದಿದ್ರೆ ನಮ್ ಬೆರಳೇ ಅವ್ರ್ ನಮ್ ಬಾಯಿಂದಾ ತೆಗೀದೇ ಇದ್ರೆ ಅದೇ ನಮಗೆ ಅಕ್ಕರೆ!!

ಹಿಂಗೆಲ್ಲಾ ಆಗತ್ತೆ ಅಂತಾ ಗೊತ್ತಿದ್ರೆ ನಾನ್ ದೊಡ್ಡೋನ್ ಆಗ್ತಾನೇ ಇರ್ಲಿಲ್ಲಾ!!

ಬೆಳೀತಾ ಬೆಳೀತಾ ಬೇಡಾ ಅಂದ್ರೂ ಚಿಕ್ ಅಂಗಿ-ಚಡ್ಡಿ ಹಾಕ್ಸಿ ಸ್ಕೂಲ್ ಗೆ ಸೇರ್ಸೇ ಬಿಟ್ರು,
ಆಗ್ಲಿಂದಾನೇ ನಮ್ಗೆ ಟೆನ್ಶನ್ ಸ್ಟಾರ್ಟ್ ಆಗೇ ಹೋಯ್ತು,
ಅದೇ ಗುಂಗಲ್ಲಿ ಹೋಮ್ ವರ್ಕ್ ಮಾಡ್ದೇ ಟೀಚರ್ ಏಟ್ ನಾ ಕೊಟ್ಟೇ ಬಿಟ್ರು,
ಮಾರನೇ ದಿನದಿಂದ ಶಾಲೆಗೆ ಸುಳ್ಳೇ ನೆಪ, ಕಾರಣ,
ಅಮ್ಮನಿಗೆ ಬೇಜಾರು, ಅಪ್ಪನಿಗೆ ಕೆಂಪಾದ ಕಣ್ಣು,
ನಮಗೆ ಸುಳ್ಳಿನ ಕಥೆ ಸುಮ್ನೆ ಹೊಟ್ಟೆ ನೋವು, ಕಾಲ್ ನೋವು,
ಅಪ್ಪನಿಗೆ ಕೋಪ ಬಂದು ಸರ್ಯಾಗ್ ನಾಲ್ಕ್ ಏಟ್ ಬಿದ್ರೆ ನಮ್ಗೆ ಬರೀ ಕಣ್ಣೀರು!!

ಹಿಂಗೆಲ್ಲಾ ಆಗತ್ತೆ ಅಂತಾ ಗೊತ್ತಿದ್ರೆ ನಾನ್ ದೊಡ್ಡೋನ್ ಆಗ್ತಾನೇ ಇರ್ಲಿಲ್ಲಾ!!

ಆಮೇಲ್ ಬಂತು ಹೈಸ್ಕೂಲ್-ಕಾಲೇಜ್ ಲೈಫು,
ಎಲ್ರ್ ಥರಾನೂ ನಮ್ ಬಾಳಲ್ಲೂ ಫುಲ್ಲು ಕಲರ್ಸು, ಇಡೀ ಜನ್ಮಕ್ಕ್ ಸಾಕಾಗೋವಷ್ಟ್,
ಏನ್ ಹುಡುಗ್ರು-ಹುಡ್ಗೀರು, ಕಾರು ಬೈಕು,
ನೋಡ್ತಾ ಇದ್ರೆ ಎರಡೂ ಕಣ್ಣೂ ಕಡಿಮೇನೆ!
ಹೀಗೆ ಸಾಗ್ತಾ ಇತ್ತು ಜೀವ್ನಾ, ಏಳು-ಬೀಳು ಎಲ್ಲಾ,
ಎಲ್ಲಾ ಮುಗ್ದು ಇನ್ನೇನ್ ಕಾಲೇಜ್ ಮುಗೀತಪ್ಪಾ ಅಂದ್ಕೊಂಡ್ರೆ,
ಶುರುವಾಯ್ತು ಡಿಗ್ರೀನಲ್ಲೇ ಬಿದ್ದೆ ಪ್ರೀತಿ-ಪ್ರೇಮ-ಪ್ರಣಯ!
ಇನ್ನೇನ್ ಜೇಬಲ್ ಫುಲ್ಲು ಹಣ! ಲವ್ ಫೇಲಾದ್ರೆ ಮನೆ ಹಿತ್ಲಲ್ಲಿ ಡೈರೆಕ್ಟ್ ನಮ್ದೇ ಹೆಣ!!

ಹಿಂಗೆಲ್ಲಾ ಆಗತ್ತೆ ಅಂತಾ ಗೊತ್ತಿದ್ರೆ ನಾನ್ ದೊಡ್ಡೋನ್ ಆಗ್ತಾನೇ ಇರ್ಲಿಲ್ಲಾ!!

ಅಂತೂ ಇಂತೂ ಹೆಂಗೋ ಪ್ರೀತಿ-ಗೀತಿ-ಇತ್ಯಾದಿ ನಡೀತಾ ಇತ್ತು,
ಮನೆಯಲ್ಲಿ ಅಪ್ಪಾ ಅಮ್ಮನಿಗೆ ವಯಸ್ಸಾಗ್ತಾ ಇತ್ತು!
ಮಗಾ ಇನ್ನೇನ್ ಸಾಕೋ ಓದಿದ್ದು, ಇನ್ನು ಕೆಲ್ಸಾ ಹುಡ್ಕೋ, ಜಾಬ್ ಹುಡ್ಕು, ಮಾಡು!
ನಾವ್ ಹೆಣ್ಣು ಹುಡ್ಕಿ ಮದ್ವೆ ಮಾಡಿ ಮುಗಿಸ್ತೀವಿ ಜವಾಬ್ದಾರಿ,
ಅದ್ನ್ ಸೀದಾ ಕೇಳ್ದೋನೆ ನಾನ್ ಮನೆಯಿಂದಾ ಇಲ್ಲಿಗೆ ಪರಾರಿ!!
ಹಂಗೋ ಹಿಂಗೋ ಓದ್ ಅಂತೂ ಮುಗೀತು, ಹುಡ್ಕಿ-ಅಲ್ದು-ಅತ್ತು-ತಿರ್ಗಿ ಕೆಲ್ಸಾನೂ ಸಿಗ್ತು!
ಡಿಗ್ರೀಲ್ ಆಗಿದ್ ಪ್ರೀತಿ ಕ್ಯಾಂಟೀನ್ ನಲ್ಲೇ ನೆಗ್ದು ಬಿತ್ತು!!
ನಂಗೆ ಕಂಪನೀಲಿ ತುಂಬಾ ದಿನದಿಂದ ಕಾಯ್ತಾ ಇರೋ ಪ್ರಮೋಶನ್ ಲೆಟರ್ ಪ್ರಿಂಟಾಗಿ ಬರೋ ಕಥೆ,
ಮನೆಯಲ್ಲೀಗ ಊಟಕ್ಕೆ ಮುದ್ದಾಂ ಬನ್ನಿ, ತಮ್ಮ ಆಗಮನಾಭಿಲಾಷಿಗಳು ಅಂತಾ ಮದ್ವೆ ಕಾರ್ಡ್ನಲ್ಲಿ ಅವ್ರ್ ಹೆಸ್ರ್ ಪ್ರಿಂಟಾಕೋ ಚಿಂತೆ!!


ಹಿಂಗೆಲ್ಲಾ ಆಗತ್ತೆ ಅಂತಾ ಗೊತ್ತಿದ್ರೆ ನಾನ್ ದೊಡ್ಡೋನ್ ಆಗ್ತಾನೇ ಇರ್ಲಿಲ್ಲಾ!!

ನಡ್ಕೊಂಡೋ ಬೈಕ್ನಲ್ಲೋ ಕ್ಯಾಬಲ್ಲೋ ಎಷ್ಟೇ ದೂರಾ ಆದ್ರೂ ಓಕೆ,
ಮನೆ ಎಲ್ಲೋ, ಆಫೀಸ್ ಎಲ್ಲೋ, ಏನೇ ಆದ್ರೂ ಸತ್ತು ಬಿದ್ದು ಹೋಗ್ಬುಟ್ ಬಾ,
ಹೊಟ್ಟೆಗೆ ನೆಟ್ಗೆ ಊಟ ಇಲ್ಲಾ, ಕಣ್ಣಿಗೆ ನಿದ್ರೆ ಮೊದ್ಲೇ ಇಲ್ಲಾ,
ಹಗ್ಲೋ ರಾತ್ರೀನೋ ಯಾವ್ ಟೈಮಿಗಾದ್ರೂ ಕೆಲ್ಸಕ್ಕೆ ರೆಡಿ,
ಆಮೇಲ್ ಹೆಲ್ತ್ ಕೈ ಕೊಟ್ಟು, ಗ್ಯಾರಂಟೀ ಆಸ್ಪತ್ರೆಗೆ ನೆಡಿ!!
ಏನೇ ಎಷ್ಟ್ ಮಾಡ್ ದಬಾಕಿದ್ರೂ ಆಮೇಲ್ ಬರೋದೇ ಬೀಪೀ, ಷುಗರ್, ತಲೆನೋವು ಗ್ಯಾಸು,
ಕಂಪ್ಯೂಟರ್ ದಿನಾ ಎಲ್ಲಾ ನೋಡಿ ನೋಡಿ ಬ್ಯಾಡಾ ಅಂದ್ರೂ ಕಣ್ಣಿಗೊಂದು ದೊಡ್ಡ ಸೋಡಾ ಗ್ಲಾಸು!
ತಿಂಗ್ಳೆಲ್ಲಾ ಕಷ್ಟಾ ಪಟ್ಟು ದುಡಿ, ಮನೆ ಹೆಂಡ್ತೀ ಕಾರು ಮಕ್ಳು, ಒಳ್ಳೆ ಸ್ಕೂಲು ಬಟ್ಟೆ ಬಂಗಾರಾ ಸೈಟು ಮನೆ!
ಏನಾದ್ರೂ ಯಡವಟ್ಟಾಗಿ ಕಂಪನಿ ಮುಚ್ಚಿದ್ರೆ/ ಅವ್ರೇ ತೆಗದ್ ಹಾಕಿದ್ರೆ ಇದ್ದೇ ಇದ್ಯಲ್ಲಾ ನಮ್ ಅಪ್ಪಂದೇ ಆದ ಸ್ವಂತ ಹಳ್ಳೀ ಮನೆ!!


ಹಿಂಗೆಲ್ಲಾ ಆಗತ್ತೆ ಅಂತಾ ಗೊತ್ತಿದ್ರೆ ನಾನ್ ದೊಡ್ಡೋನ್ ಆಗ್ತಾನೇ ಇರ್ಲಿಲ್ಲಾ!!

ಬರೀ ದುಡ್ಡು ಅಮೇರಿಕಾ ಕನ್ಸು ಕಾಣೋದೇ ಸಾಕಾ?
ಇಷ್ಟೆಲ್ಲಾ ಆದ್ರೂ ಇದೇ ಜೀವ್ನಾ ಬೇಕಾ??
ಹಳ್ಳೀಲಿದ್ಕೊಂಡೇ ಇರುವಷ್ಟರಲ್ಲಿ ಸುಖಾ ಪಡೋದೇ ಮೇಲಲ್ವಾ?
ಕೊಟ್ಗೇಲೀ ನಮ್ದೇ ಮನೆ ಹಸೂದು ಸಗಣಿ ಬಾಚೋದು ಕೀಳ್ ಕೆಲ್ಸಾ ಏನ್ ಅಲ್ಲಾ ಅಲ್ವಾ?
ಎಲ್ಲಾರೂ ಎಲ್ಲಾನೂ ಮಾಡೋದು ಹೊಟ್ಟೆಗೆ ಬಟ್ಟೆಗೆ ಮನಃ ಶಾಂತಿಗೆ,
ಏನೇ ಮಾಡಿದ್ರೂ ಈಗಿನ್ ಫಾಸ್ಟ್ ದುನಿಯಾದಲ್ಲಿ ಅದೇ ಇಲ್ಲಾ ಅಂದ್ರೆ ಅದ್ನೆಲ್ಲಾ ಮಾಡೋದ್ 'ಯಾರಿಗೆ'??

ಹಿಂಗೆಲ್ಲಾ ಆಗತ್ತೆ ಅಂತಾ ಗೊತ್ತಿದ್ರೆ ನಾನ್ ದೊಡ್ಡೋನ್ ಆಗ್ತಾನೇ ಇರ್ಲಿಲ್ಲಾ!!

(ನೆಟ್ವರ್ಕ್ ಡೊಮೇನ್ ಐಡಿ ಹೆಂಗೋ ಕೈ ಕೊಟ್ಟು ವರ್ಕ್ ಆಗ್ದೇ, ಏನೂ ಮಾಡಕ್ ತೋಚ್ದೆ ಖಾಲಿ ಕೂತಾಗ ಧೈರ್ಯಾ ಮಾಡಿ ಮ್ಯಾನೇಜರ್ ಹತ್ರಾನೇ ಅವ್ರ್ ಪಿಂಕ್ ವ್ಯಾನಿಟಿ ಬ್ಯಾಗಿಂದಾ ಟಿಶ್ಯೂ ಪೇಪರ್ ಮತ್ತೆ ಪೆನ್ ತಗೊಂಡ್ ಅವ್ರ್ ಕ್ಯೂಬಿಕಲ್ ನಲ್ಲೇ ಕೂತು ಆಫೀಸ್ನಲ್ ಬರ್ದಿದ್ದು)!!
ಹಿಂಗೆಲ್ಲಾ ಮಾಡೋಕ್ ನನ್ನ್ ಬಿಟ್ ಅವ್ರಿಗೆ ನನ್ ದೊಡ್ಡದೊಂದು ಸ್ಮೈಲ್ :) :)
- ಜೇಪೀ ಭಟ್ । ಹತ್ತನೇ ಮಾರ್ಚ್ 2014 :)


4 comments:

ಚಿನ್ಮಯ ಭಟ್ said...

ಗುರುಗಳಿಗೆ ನಮಸ್ಕಾರಗಳು...
ಮೆದುಳು ಒಂದ್ಸಲ ಚೊಕ್ಕ ಆಯ್ತು,ಕೈ ಹಾಕಿ ಕಲಕಲ ಅಂದ್ಬಿಟ್ರೀ :D...
ಅಹ್ ಎಲ್ಲಾ ಹಂಗೆ ಅನ್ಸತ್ತೆ...
ಬಾಲ್ಯಾವಸ್ಥೆ ಕ್ರೀಡಾಸಕ್ತಃ,
ತರುಣಾವಸ್ಥೇ ತರುಣೀಸಕ್ತಃ,
ವೃದ್ಧಾವಸ್ಥೆ ಜ್ನಾಪನತಸ್ತಃ...

Badarinath Palavalli said...

ಶೀರ್ಷಿಕೆಗೆ ತಗೊಳ್ಳಿ <3 x 5

ಪಿಂಕ್ ವ್ಯಾನಿಟಿ ಬ್ಯಾಗು ಪಿಂಕ್ ಸ್ಲಿಪ್ಪು ಆದರೆ?
ಮದುವೆ ಅಮಂತ್ರಣ ಪತ್ರದ ಪ್ರವರ ನೂರಕ್ಕೆ ನೂರು ನಿಜ.

ಜೇಪೀ ಭಟ್ ! said...

ಚಿನ್ಮಯ:
ನಮಸ್ಕಾರಾ!!
ಹೌದಾ? ನಾನ್ ಉಪೇಂದ್ರಾ ಅಲ್ಲಾ, ಕೈ ಹಾಕಿ ಕಲಾ ಕಲಾ ಗಲಾ ಗಲಾ ಅನ್ಸೋಕೆ??!
ಧನ್ಯವಾದಗಳು!
ವಯಸ್ ಆದ್ಮೇಲೆ ಬಾಯಿ ಚಪಲ ಹೆಚ್ಚುತ್ತೆ ಗೊತ್ತಾ?!
ಅದನ್ನಾ ನೀನು ಮರ್ತೆ!

ಜೇಪೀ ಭಟ್ ! said...

ಬದರಿ ಅವರೇ,
ನಿಮ್ಮ ಪ್ರತಿಕ್ರಿಯೆಗೆ ನನ್ನ ವಂದನೆಗಳು!!
ಶೀರ್ಷಿಕೆ ಅಷ್ಟೊಂದು ಇಷ್ಟಾ ಆಯ್ತಾ??! ಧನ್ಯವಾದಗಳು :)
ಪಿಂಕ್ ಬ್ಯಾಗು ಸ್ಲಿಪ್ಪು ಆಗೋಕೆ ನಾವ್ ಯಾವಾಗಲೂ ಅದನ್ನೇ ಮಾಡೋಲ್ವಲ್ಲಾ!!
ಹುಣ್ಣಿಮೆಗೋ ಅಮಾವಾಸ್ಯೆಗೋ ಎಲ್ಲೋ ಒಂದ್ಸಲಾ ಅಲ್ಲಿ ಇಲ್ಲಿ ಆಫೀಸಲ್ಲಿ ಅಂತಾ ಕೆಲ್ಸಾ ಮಾಡೋದ್ ಅಷ್ಟೇ!!
ಬೇಡಾ ಅಂದ್ರೂ ಮನೆಯಲ್ಲಿ ಅವ್ರ್ ಖುಷಿಗೆ, ಅಪ್ಪಾ ಅಮ್ಮನ್ ಜವಾಬ್ದಾರಿಗೆ ಮದ್ವೆ ಮಾಡೇ ಮಾಡ್ತಾರಲ್ಲಾ!!
ನಾವ್ ಬಲೀ ಕಾ ಬಕ್ರಾ ಅಷ್ಟೇ!!