Monday, March 07, 2011

ದಿನವೂ ಅವಳಿಗಾಗಿಯೇ ಕಣ್ಣೀರಲ್ಲೇ ಜಳಕ, ಆದರೂ ಮೈ ತುಂಬಾ ಅವಳದೇ ಪುಳಕ....!

TO HER!

ನಿದ್ದೆಯನ್ನೇ ಧಾರೆ ಎರೆದು,
ನಡುರಾತ್ರಿಯ ಕನಸನ್ನೇ ತೊರೆದು,
ಮೈ ಮನಸ್ಸನ್ನು ಕೊರೆದು,
ಉಸಿರು ಮತ್ತು ಕನಸನ್ನೇ ಹರಿದು..........

ಮಧ್ಯಾನ್ನದ ನಿದ್ದೆಯಲ್ಲೂ ಕಾಡಿ,

ಜೀವನದ ಲೆಕ್ಕಗಳನ್ನೇ ಕಳೆದು, ಕೂಡಿ,
ಅಳುವನ್ನೂ ನಗುವನ್ನೂ ರಾಗವಾಗಿ ಹಾಡಿ,
ನಿಂತಲ್ಲಿಯೇ ಎಲ್ಲವನ್ನೂ ಮಾತಾಡಿ.....

ಎಲ್ಲಿ ಹೋದರೂ ಕಾಡುವ ಅವಳು,

ಬರುವಳು ನನ್ನ ಹಿಂದೆಯೇ ಯಾವಾಗಲೂ..
ದಿನವೂ ಅವಳಿಗಾಗಿಯೇ ಕಣ್ಣೀರಲ್ಲೇ ಜಳಕ,
ಆದರೂ ಮೈ ತುಂಬಾ ಅವಳದೇ ಪುಳಕ....!

10 comments:

ಡಾ. ಚಂದ್ರಿಕಾ ಹೆಗಡೆ said...

ನಗುವ .... ನಗಿಸುವ ಸಮಯ ನಿಮ್ಮದಾಗಲಿ!

ಚಿತ್ರಾ said...

cholo iddo JP ! keep it up !!

pavi said...

ಮನಸ್ಸಿನ್ಯಾಗಿನ ಮಾತು....

ಮಾತು ಮಾತಾಗಿ,
ಮಾತೇ ಮೌನವಾಗಿ,
ಮೌನವೆ ಕಣ್ಣಿರಾಗಿ,
ಕಣ್ಣಿರೆ ಕವನವಾಗಿ,
ಕವನವೇ ಮನಸ್ಸಿನ ಮಾತಾಗಿದೆ.

ಅನು. said...

ಇಸ್ಟೊಂದಾಯಿತೇ..ಅವಳಿಂದ ಜಳಕ ಪುಳಕ..
ಆದರೂ ಬಡಲಿಲ್ಲ..ನೀನವಳ ಬಗ್ಗೆ ಮರುಕ..
ಹರಿ ಹಾಯುವ ಮನಸ್ಸಿಗೆ ಮುದಸಿಗುವ ತನಕ..
ನಿನಗ್ಯಾಕೆ ಬೇಕು ಅವಳೊಂದಿಗಿರುವ ತವಕ..?

HegdeG said...

Nice one JP..

ಜೇಪೀ ಭಟ್ ! said...

ಡಾ|| ಚಂದ್ರಿಕಾ: ನಿಮ್ಮ ಆಶಯ ನಿಜವಾಗಲಿ :):) ಧನ್ಯವಾದಗಳು..............

ಜೇಪೀ ಭಟ್ ! said...

ಚಿತ್ರಾ: ಧನ್ಯವಾದಗಳು..............

ಜೇಪೀ ಭಟ್ ! said...

ಪವಿ: ಹ್ಮ್ಮ್, ಥ್ಯಾಂಕ್ಸ್..

ಜೇಪೀ ಭಟ್ ! said...

ಅನು: ಬಿಟ್ಟೇನೆಂದರೂ ಬಿಡದೀ ಪುಳಕ, ಅಲ್ಲಿಯತನಕ ಅವಳದೇ ತವಕ...!! :):) ಧನ್ಯವಾದಗಳು..

ಜೇಪೀ ಭಟ್ ! said...

HegdeG::):) ಧನ್ಯವಾದಗಳು.....