Saturday, January 22, 2011

ಬದುಕಲು ಇನ್ನೇನು ಬೇಕು.......? ನಮ್ಮ ಪ್ರೀತಿ ಪಾತ್ರರ ಆಶಯವೇ ಸಾಕು..

Jepee Happy:)

ನನ್ನೊಳಗಿದ್ದ ನಾನು ಎದ್ದಿದ್ದೇನೆ.
ಏನನ್ನೋ ಮಾಡಲು ಹೊರಟಿದ್ದೇನೆ.
ಜೀವನದ ಅಳು ನಿಂತಿದೆ.
ಸತ್ತ ನಗು ಮತ್ತೆ ಅರಳಿದೆ.

ಎಲ್ಲೆಲ್ಲೂ ಹಕ್ಕಿಯ ಕೂಗು,

ದೇವಸ್ಥಾನದಲ್ಲಿ ಘಂಟೆಯ ಮೊಳಗು,
ನದಿಯ ಜುಳು ಜುಳು, ಕಾಡಿನ ಕಂಪು,
ರವಿಯ ಬೆಳಗು, ಮೈ ಮನವೆಲ್ಲ ತಂಪು .

ಎಲ್ಲರಿಗೂ ಸಂತೋಷ ಇರಲಿ ಹೀಗೆಯೇ ಎಂದೂ,

ಯಾರಿಗೂ ಕಷ್ಟಗಳು ಬಾರದಿರಲಿ ಮುಂದೆಂದೂ,
ಬದುಕಲು ಇನ್ನೇನು ಬೇಕು.......?
ನಮ್ಮ ಪ್ರೀತಿ ಪಾತ್ರರ ಆಶಯವೇ ಸಾಕು..

4 comments:

anu said...

ಜೇಪೀ..ನಂಗೇ ಮಾತೇ ಬಾರದಸ್ಟು ಖುಶಿ ಆಗ್ತಾ ಇದ್ದು.ನಿನ್ನ ಫ್ರೆಂಡ್ ಮಾಡಿಕೊಂಡಿದ್ದಕ್ಕೆ ಇಂದು ಸಾರ್ಥಕ ಆತು.ವಾವ್..ಕಮಾನ್ ಜೇಪೀ...ಹಿಂಗೇ ಬರಿ.ಇನ್ನೆಂದೂ ಶೋಕದ ಗೀತೆ ಬ್ಯಾಡ...

ಮನಮುಕ್ತಾ said...

nice lines..!

ಜೇಪೀ ಭಟ್ ! said...

ಅನು: ನಿಜವಾಗಲೂ ....?

ಜೇಪೀ ಭಟ್ ! said...

ಮನಮುಕ್ತಾ : ಧನ್ಯವಾದಗಳು........