Thursday, January 20, 2011

ಜೀವನವೇ ಇಷ್ಟು., ಕಟ್ಟಿಟ್ಟಷ್ಟು... ನಮ್ಮ ಪಾಲಿಗೆ ಬಂದಷ್ಟು....!

JEPEE.

ಒಮ್ಮೊಮ್ಮೆ ಹಾಗೇ, ಏನೂ ಇಲ್ಲದೇ,
ಸುಮ್ಮ ಸುಮ್ಮನೆ ಏನನ್ನೋ ನೆನೆಸಿಕೊಂಡು ನಗುತ್ತಿರುತ್ತೇನೆ..
ಇನ್ನೊಮ್ಮೆ ಮತ್ತೆ ಎಲ್ಲವೂ ಇದ್ದು,
ಮತ್ತೇನೋ ನೆನಪಾಗಿ ನಿಲ್ಲಿಸಲಾರದಷ್ಟು ಅಳುತ್ತಿರುತ್ತೇನೆ..

''ಬದುಕು'' ಅಂದ್ರೆ ಇಷ್ಟೇ..
ಅಪ್ಪ, ಅಣ್ಣ, ತಮ್ಮ, ತಂಗಿ, ಅಮ್ಮ,
ಬಂಧು, ಬಳಗ, ಸಂಬಂಧಿಕರು, ಇನ್ಯಾರೋ..
ಸ್ನೇಹಿತರು, ಹಿತೈಷಿಗಳು, ಪರಿಚಯದವರು, ಮತ್ಯಾರೋ...

ಯಾವ ಕಡೆಯಿಂದ ನೋಡಿದರೂ ಇಲ್ಲಿಗೆ ಬಂದು ನಿಲ್ಲುವ,
ಎಲ್ಲೇ ಇಣುಕಿದರೂ ಮನಸಿಗೇ ಪ್ರಶ್ನೆ ಕೇಳುವ,
ಪುಟ್ಟ ಕಂಗಳು ಈ  ಹೃದಯದಿಂದ ಜಗತ್ತನ್ನೇ ನೋಡುವ,
ಕೈಗಳಿಂದ, ಮನಸಿನಿಂದ ಏನೇನೋ ಕೆಲಸವನ್ನು ಹುಡುಕುವ..

ಜೀವನವೇ ಇಷ್ಟು., ಕಟ್ಟಿಟ್ಟಷ್ಟು...
ನಮ್ಮ ಪಾಲಿಗೆ ಬಂದಷ್ಟು....!