![]() |
ಸುಳ್ಳು ಸತ್ಯದ ನಡುವಿನಲ್ಲಿ, ಮಡಿದಿದೆ ಹೃದಯ ಮಡುವಿನಲ್ಲಿ! |
ಅವಳು ಹೇಳುತ್ತಿದ್ದುದು ಬರೀ ಸುಳ್ಳುಗಳ ಕಂತೆ,
ಅದು ತೋರಿಕೆಗೆ ಮಾತ್ರ ನಿಜವಾದ ಸತ್ಯದ ಸಂತೆ.
ಅವಳ ರಾಶಿ ರಾಶಿ ಸುಳ್ಳನ್ನೇ ನಂಬಿ ನಾನು ಖುಷಿಯಾಗಿರುತ್ತಿದ್ದೆ ದಿನವೂ..
ಆದರೆ ಈಗ ಅದೇ ಸುಳ್ಳು ಮುಳ್ಳಾಗಿ ಅಳುತ್ತಿದ್ದೇನೆ ಪ್ರತೀ ಕ್ಷಣವೂ...
ಅವಳಿಗೆ ಪದೇ ಪದೇ ಮನಸ್ಸಾದರೂ ಹೇಗೆ ಬಂತು?
ಸುಳ್ಳನ್ನೇ ಸತ್ಯದ ತರಹ ಹೇಳಲು ಎದುರಿಗೇ ನಿಂತು?
ಅದೇ ಸಿಹಿಯಾದ ಸುಳ್ಳು ನನ್ನ ಕಣ್ಣಲ್ಲಿ ನೀರನ್ನು ತಂತು..
ಅವಳಿಂದಾಗಿಯೇ ಈ ಹೃದಯ ಸಾಯಲಿದೆ ಈಗ ನಿಂತು-ನಿಂತು..
ಆ ಮನಸ್ಸಿನಲ್ಲಿ, ಹೊಟ್ಟೆಯಲ್ಲಿ ಇನ್ನೆಷ್ಟು ರಹಸ್ಯಗಳಿವೆಯೋ?
ಹೇಳಿರದ ಇನ್ನೆಷ್ಟು ಕಥೆಗಳು, ಘಟನೆಗಳಿವೆಯೋ?
ನೀನು ನಿಜವಾಗಿ ಹೇಳುವುದು ಯಾವಾಗ ಅವನ್ನೆಲ್ಲ?
ನಾನು ಬದುಕುವೆನಾ ಕೇಳಿಯೂ ಅವನ್ನು ಇನ್ನು ಮುಂದೆಲ್ಲಾ....??