Tuesday, February 08, 2011

"ಪ್ರೇಮಿಗಳ ಪ್ರೀತಿಯ ದಿನ"---- ನಾನು ಅವಳು ಮತ್ತು ಈ ಜಗತ್ತು, ನಮಗಾಗಿ ಎಷ್ಟು ಹೊತ್ತು ....??


nanDu1.
"ಪ್ರೇಮಿಗಳ ಪ್ರೀತಿಯ ದಿನ"

ಅವಳ ಹೆಸರೇ ಅಷ್ಟು ಚೆನ್ನ, ಚಿನ್ನ. ನನ್ನ ಕಲ್ಪನೆಯ ಕೂಸು, ಎಂದೋ ಮನದಲ್ಲಿ ಮಾಡಿದ ಕನಸು! ಎಂದೋ ಬಿತ್ತಿದ ಬೀಜ ಇಂದು ಮರವಾಗಿ, ಕಾಯಾಗಿ, ಹಣ್ಣಾಗಿ, ಹೆಣ್ಣಾಗಿ ನಿಂತಿದೆ.. ಯಾವಾಗ ಏನಾಗುವುದೋ ಗೊತ್ತಿಲ್ಲ:(


nanDu2!

ಪ್ರೇಮಿಗಳಿಗೆ ಪ್ರೀತಿ ಮಾಡೋಕೆ ಇಂಥಾ ದಿನಾನೇ ಆಗ್ಬೇಕಾ? ನನ್ ಪ್ರಕಾರ ಹಂಗೇನೂ ಇಲ್ಲ.. ಯಾಕೆಂದ್ರೆ ಅವರು ನಿಜವಾದ ಪ್ರೇಮಿಗಳೇ ಆಗಿದ್ದಲ್ಲಿ, ವರ್ಷವೆಲ್ಲಾ, ದಿನವೆಲ್ಲಾ, ತಿಂಗಳೆಲ್ಲಾ, ಪ್ರತೀ ಸೆಕೆಂಡುಗಳಲ್ಲಿಯೂ, ಮೈ-ಮನಗಳಲ್ಲಿಯೂ, ಕಣ್ಣಿನಲ್ಲಿ ಮತ್ತು ಹೃದಯದಲ್ಲಿ, ದೇಹದ ಪ್ರತೀ ಜೀವಕೋಶದಲ್ಲಿಯೂ ಪ್ರೀತಿಯನ್ನು ತುಂಬಿಕೊಂಡೇ ಇರುತ್ತಾರೆ ಮತ್ತು ಅದೇ ಪ್ರೀತಿಯನ್ನು ಹಾಗೇ ಅಷ್ಟೇ ಚೆನ್ನಾಗಿ ಸಿಹಿಯಾಗಿ ಹಂಚಿಕೊಂಡು ಬದುಕಿರ್ತಾರೆ, ಬದುಕನ್ನು ನಡೆಸಿಕೊಂಡು ಹೋಗ್ತಿರ್ತಾರೆ..! ಫೆಬ್ರವರಿ 14  ಪ್ರೇಮಿಗಳ ದಿನ, ಎಲ್ಲರಿಗೂ ಏನೋ ಒಂಥರಾ ಕುತೂಹಲ, ಆಕರ್ಷಣೆ, ಆಸಕ್ತಿ. ಹುಡುಗಿಯರಿಗೆ ಎಷ್ಟೋ ಪ್ರಪೋಸಲ್ಗಳು ಬರುವ ಸಂಭವ, ಹುಡುಗರಿಗೆ ಇನ್ನೆಷ್ಟೋ! ಎಷ್ಟೋ ದಿನದಿಂದ ಪ್ರೀತಿಸುತ್ತಿರುವ ಆದರೆ ಹೇಳಲಾಗದೇ ಮನದಲ್ಲೇ ಒದ್ದಾಡುತ್ತಿರುವ ಭಾವನೆಯನ್ನು ಹೊರಹಾಕಲು ಸಿಗುವ ಸಂಧರ್ಭ, ಇದೊಂದು ರೀತಿಯ ಅಮೃತ ಘಳಿಗೆ, ಎಲ್ಲ ಪ್ರೇಮಿಗಳ ಪಾಲಿಗೆ!

nanDu3!

ಈ ದಿನವೇ ಹಾಗೆ..
ಹುಡುಗಿಯರಿಗೆ ಅವನನ್ನು ತಿರಸ್ಕರಿಸಿದ ಜಂಭ ಒಂದೆಡೆಯಾದರೆ, ಎಲ್ಲರೂ ತನ್ನನ್ನೇ ನೋಡುತ್ತಿದ್ದಾರೆ ಮತ್ತು ಮತ್ತೂ ನೋಡಲಿ ಎಂಬ ಅಹಂ ಇನ್ನೊಂದೆಡೆ.. ಇತ್ತ ತಿರಸ್ಕೃತಗೊಂಡ ಹುಡುಗನೋ ಪಾಪ ಅತ್ತು ಅತ್ತು ಸಾಕಾಗಿ ಕಣ್ಣೀರೆಲ್ಲ ಬತ್ತು ಹೋಗಿ ಬಚ್ಚಲು ಮನೆಯ ಅಡ್ಡ ಚಿಕ್ಕ ಗೋಡೆಯೋ, ಹಿತ್ತಲ ಸಂದಿಯೋ, ನೀರೇ ಇಲ್ಲದ ಬಾವಿ ಕಟ್ಟೆಯ ಮೇಲೋ ಕುಳಿತು ತನ್ನ ಫ್ರೆಂಡಿಗೆ ಅತ್ತು ಅತ್ತು ಅದನ್ನೇ ನಗುವಿನ ರೀತಿಯಲ್ಲಿ ಹೇಳುತ್ತಿರುತ್ತಾನೆ.. ಆದ್ರೆ ಆಲ್ಲಿ ಆ ಹುಡುಗಿ ದುಡ್ಡಿದ್ದೋನ ಜೊತೆ ಪಾರ್ಟಿ ಮೋಜು ಮಸ್ತಿ, ಅವನು ಕೊಟ್ಟ ಗಿಫ್ಟ್ ಅನ್ನು ನೋಡುವುದರಲ್ಲಿ ಬಹಳ ಬ್ಯುಸಿ...:(:( ಇವನ ನಿಜವಾದ ಪ್ರೀತಿಯನ್ನು ಕಣ್ಣಿದ್ದೂ ನೋಡಲಾರದೆ ಕುರುಡಾದ ನತದೃಷ್ಟ ಹುಡುಗಿ, ಕಣ್ಣಿದ್ದೂ ಅತ್ತು ಅತ್ತು ಕಣ್ಣೇ ಕಿತ್ತು ಬರುವಂತೆ ಅಳುತ್ತಿರುವ ಬಡಪಾಯಿ ಹುಡುಗ!
ಇನ್ನೊಂದೆಡೆ  ಈತ ತನ್ನ ಲವ್ ಸಿಕ್ಕಿದುದರ ಖುಷಿಯಲ್ಲಿ ಅದಕ್ಕೆ ಕಾರಣರಾದ ತನ್ನ ಸ್ನೇಹಿತರನ್ನೂ ಮರೆತು ಅವಳಿಗೆ I Love You ಅಂತ ಮೆಸೇಜ್ ಮಾಡುವುದರಲ್ಲಿ ಬಹಳ ತಲ್ಲೀನ. ಅವಳೂ ಖುಷ್, ಇವನೂ ಖುಷ್.. ಆದ್ರೆ ಅದ್ಕೆ ಕಾರಣರಾದೋರು ಮಾತ್ರ, ಅವರನ್ನು, ಅವರ ಸ್ಥಿತಿಯನ್ನು ಕೇಳೋರ್ ಮಾತ್ರ ಯಾರೂ ಇಲ್ಲ ಇಲ್ಲಿ...
ಈ ದಿನವೇ ಹಾಗೆ, ಪ್ರೀತಿ ಮುತ್ತುಗಳ, ಶುಭಾಶಯಗಳ, ಚಾಕೊಲೇಟ್ ಗಳ, ಗ್ರೀಟಿಂಗ್ಸ್ ಗಳ, ಮತ್ತು ತರ ಥರಹದ ಗಿಫ್ಟ್ ಗಳ ಮಹಾಪೂರದ ದಿನ.. ಪ್ರೀತಿಯ ಹಸಿ ಬಿಸಿ ಅಪ್ಪುಗೆಗಳ, ಪ್ರೇಮ ನಿವೇದನೆಗಳ, ರಾಶಿ ರಾಶಿ ಕೆಂಗುಲಾಬಿಗಳ, ಮತ್ತು ತುಂಬಿ ತುಳುಕುತ್ತಿರುವ ಹೋಟೆಲ್, ಕಾಫೀ ಡೇ, ಸಿನೇಮಾ ಹಾಲ್ ಗಳ, ಮತ್ತು ಪಾರ್ಕ್ ನ ಬೆಂಚುಗಳ ದಿನ:)


nanDu4.

ಪ್ರೀತಿಯ ಮಾಯೆಯೇ ಹಾಗೆ, ಯಾರನ್ನೂ ಬಿಟ್ಟಿಲ್ಲ.. ಯಾರನ್ನೂ ಬಿಡುವುದೂ ಇಲ್ಲ, ಎಲ್ಲಿ ಯಾರಿಗೆ ಹೇಗೆ ಯಾವ ರೂಪದಲ್ಲಿ, ಯಾರ ರೂಪದಲ್ಲಿ ಪ್ರೀತಿ ಸಿಗುತ್ತದೆ ಎಂಬುದನ್ನು ಆ ದೇವರೇ ಬಲ್ಲ..! ಇದರಲ್ಲಿ ಯಾರೂ ಬೀಳದವರಿಲ್ಲ ನನ್ನ ಹೊರತಾಗಿಯೂ... ನಾನೂ ಬಿದ್ದಿದ್ದೇನೆ, ಎದ್ದಿದ್ದೇನೆ, ನಗುತ್ತಿದ್ದೇನೆ, ಅಳುತ್ತಿದ್ದೇನೆ, ಮತ್ತು ಏನೇನನ್ನೋ ಹೇಳುತ್ತಿದ್ದೇನೆ, ಎಲ್ಲೆಲ್ಲೂ ಯಾವಾಗಲೂ ಅವಳನ್ನೇ ಹುಡುಕುತ್ತಿದ್ದೇನೆ..

ಅವಳ ಹೆಸರೇ 'ಮಾಯಾ'... . . .

ಕಲ್ಪನೆಯ ಮಾಯಾ ಲೋಕದಲ್ಲಿ ತೇಲುತ್ತಿದ್ದಾಗ ಮಾಯದಂತೆ ಬಂದು ಮಾಯವಾದ ಮಿಂಚಿನ ಹುಡುಗಿ.. ಈಗಲೂ ಬಂದು ಆಗಾಗ ಕಚಗುಳಿ ಇಡುತ್ತಿರುತ್ತಾಳೆ.. ನಾನೂ ಒಳಗೊಳಗೇ ನಗುತ್ತಿರುತ್ತೇನೆ.. ಎಲ್ಲಿದ್ದರೂ, ಯಾವುದೇ ಸಂಧರ್ಭವಾದರೂ, ಯಾರು ಏನೇ ತಿಳಿದುಕೊಂಡರೂ! ಅವಳನ್ನು ಹೇಗೆಲ್ಲಾ, ಎಷ್ಟೆಲ್ಲಾ ಪ್ರೀತಿಸಿದೆ, ಹೇಳಿದೆ,.. ಆದರೂ ಅವಳು ಕೇಳಲಿಲ್ಲ, ಆದರೆ ನಾನು ಅವಳು ಹೇಳಿದಂತೆ ಕೇಳಿದೆ. ನಾನೇ ಬದಲಾದೆ. ಆಮೇಲೆ ಅವಳೇ ಬದಲಾಗಿ ನನಗೆ ಸಿಗುವ ಬದಲು ನನಗೇ ಕೈ ಕೊಟ್ಟು, ನೀನು ನಾನು ಹೇಳಿದ ಬದಲಾಗಿ ಹೇಗೇಗೋ ಬದಲಾದೆ ಅಂತ  ಹೇಳಿ ಮತ್ತೆ ಮಾಯವಾದಳು..:( ಪ್ರತೀ ದಿನವೂ, ಅನು-ತನುವಿನಲ್ಲಿಯೂ, ಪ್ರತೀ ಪ್ರೇಮಿಗಳ ದಿನದಂದೂ ಅವಳಿಗೆ ಹೇಳುತ್ತಿದ್ದೆ.
ನಾನಂದೆ, ನಾನು ನಿನ್ನ ಪ್ರೀತಿಸುತ್ತೇನೆ-ಬಿಟ್ಟಿರಲಾರದಷ್ಟು,
ಅವಳೆಂದಳು, ನಾನು ನಿನ್ನ ದ್ವೇಷಿಸುತ್ತೇನೆ-ಹೇಳಲಾರದಷ್ಟು!:

ಅವಳೂ ಕೇಳುತ್ತಿದ್ದಳು, ಆದರೆ ಕೇಳಿ ಹಾಗೇ ಅದರ ಮುಂದಿನ ನಿಮಿಷಕ್ಕೆ ಮರೆಯುತ್ತಿದ್ದಳು ಎಂದು ನನಗೆ ಈಗ ಗೊತ್ತಾಗಿದೆ.
ಅಲ್ಲಿಗೇ ಮುರಿದು ಬಿತ್ತು ಕನಸು. . . . . . .    ..         .. . . 


nanDu5.
  
ಆ ದಿನವೇ ಅಂದುಕೊಂಡೆ ಮುರಿದ ಮನಸು, ಹಾಳಾದ ಕನಸು..
ಅವಳು ಮಾಡುತ್ತಿದ್ದ ಪ್ರತಿಯೊಂದು ಚೇಷ್ಟೆಯನ್ನೂ ಸಹಿಸಿಕೊಂಡೆ, ಸ್ಮರಿಸಿಕೊಂಡೆ.. ಅವಳ ಪ್ರತಿಯೊಂದು ಮಾತನ್ನೂ ಅರಗಿಸಿಕೊಂಡೆ, ಪ್ರತೀ ನೋವನ್ನೂ, ಅವಮಾನವನ್ನೂ, ಹತಾಷೆಯನ್ನೂ, ಕೋಪವನ್ನೂ, ಅಸಹನೆಯನ್ನೂ, ಅಷ್ಟೇ ಏಕೆ ಅವಳಿಗಾಗಿ ನನ್ನ ಹಸಿವನ್ನೂ ನುಂಗಿಕೊಂಡೆ, ಆದರೆ ನಿನಗೆ ಅದು ಯಾವುದೂ ಎಂದಿಗೂ ಕಂಡೇ ಇಲ್ಲ, ಕಾಣುವುದೂ ಬೇಡ ಬಿಡು. ಇಷ್ಟೆಲ್ಲಾ ಆದರೂ ನಾನು ಸುಮ್ಮನೇ ನಕ್ಕೆ. ಆದರೂ ಅವಳು ಇಂದಿಗೂ ಸಿಗಲಿಲ್ಲ.. ಸಿಗಲಿಲ್ಲವೆಂದು ಬಹಳ ಬೇಜಾರಾಗಿದ್ದು ಅವಳಿಗೆ ಇಂದಿಗೂ ಗೊತ್ತಾಗಲೇ ಇಲ್ಲ!


nandu..

ಈ ಪ್ರೀತಿಯ ಪ್ರೇಮಿಗಳ ದಿನದಂದು ಎಲ್ಲರಿಗೂ ಶುಭಾಶಯ ಕೋರುತ್ತಾ, ನಿಮ್ಮ ನಿಮ್ಮ ಪ್ರೀತಿ ಪ್ರೇಮ ಚೆನ್ನಾಗಿರಲೆಂದು ಹಾರೈಸುತ್ತಾ, ಇನ್ನಷ್ಟು ಹೊಸ ಹೊಸ ಪ್ರೀತಿ ಹುಟ್ಟಲಿ ಮತ್ತು ಹುಟ್ಟಿದ ಪ್ರೀತಿ ಆಕಾಶದ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತಾ, ನನ್ನ ಪ್ರೀತಿಯ 'ಮಾಯಾ' ಳಿಗೂ ಪ್ರೇಮಿಗಳ ದಿನಾಚರಣೆಯ ಶುಭಾಷಯ ಕೋರುತ್ತಾ, ಪ್ರೀತಿಯಿಂದ ಪ್ರೀತಿಸಿದವಳಿಗೆ ಪ್ರೀತಿಯ ಪ್ರೇಮದ ಕಾಣಿಕೆಯಾಗಿ ಈ ಪುಟ್ಟ ಪತ್ರವನ್ನು ಒಂದೇ ಒಂದು ಸಿಹಿ ಹೂ ಮುತ್ತಿನೊಂದಿಗೆ ಮತ್ತು ಈ 'ತಿಳಿ ಹಳದಿ ಗುಲಾಬಿ' ಮತ್ತು ಶುಭ್ರ ಶ್ವೇತ ಬಣ್ಣದ ಗರಿ ಗರಿಯಾದ ಈ ಕರವಸ್ತ್ರದೊಂದಿಗೆ ಎಲ್ಲವನ್ನೂ ನಿನ್ನ ಮೃದುವಾದ ಪುಟ್ಟ ಕೈ ಒಳಗೆ ಇಡುತ್ತಿದ್ದೇನೆ. ತೆಗೆದುಕೊಳ್ಳುವುದು, ಬಿಡುವುದು, ಬಿಸಾಕುವುದು, ಅಥವಾ ನಿನ್ನೊಂದಿಗೇ  ಇಟ್ಟುಕೊಳ್ಳುವುದು, 'ಎಲ್ಲವನ್ನೂ' ನಿನಗೆ ಬಿಡುತ್ತಿದ್ದೇನೆ........(ತೀರಾ ಮೊದಲಿನ  ಹಾಗೆಯೇ)...!!


???????????????
 
ಇಂತಿ ನಿನ್ನ, ಇನ್ನೂ ನಿನ್ನ ಪ್ರೀತಿಸುತ್ತಿರುವ,
'ನನ್ನ ಹೆಸ್ರಾದ್ರೂ ನೆನ್ಪಿದ್ಯೇನೆ ' ??:(

10 comments:

ಪ್ರಜ್ವಲ ಭಟ್ said...

post the next part soon.....

anu said...

ನೀ ಕೊಟ್ಟ ಗರಿ,ಗರಿ,ಕರವಸ್ತ್ರದಲ್ಲಿ ಏನಿದೆಯೆಂದು ತಿಳಿದುಕೊಳ್ಳುವ ಕುತೂಹಲವನ್ನೂ ತೋರದ,
ಅವಳಿಗೆ ನೀ ಗುಲಾಬಿ ಕೊಟ್ಟೇನು ಪ್ರಯೋಜನ..?
ನಿನ್ನ ಹೆಸರನ್ನೂ..ನೆನಪಿರಿಸಿಕೊಳ್ಳುವ ಸೌಜನ್ಯವಿದೆ
ಎಂದುಕೊಂಡೆಯಲ್ಲಾ..ಅದು ನಿನ್ನ... 'ಮಾಯೆ'....
ಕನಸುಗಳೆಲ್ಲಾ ನನಸಾಗ ಬೇಕೆಂದೇನೂ ಇಲ್ಲ..
ಮತ್ಯಾಕೆ ಯಾರಿಂದಲೋ ಮನಸು ಕೆಡಿಸಿಕೊಳ್ಳಬೇಕು..?
ನಿನ್ನ ಪ್ರೀತಿಗೆ ಅವಳೊಬ್ಬಳೇ ಹಕ್ಕುದಾರಳೇನಲ್ಲ..
ಮನಸ್ಸಿಂದ ಮಾಯೆಯನ್ನು ಹೊರಹಾಕುವುದು ಕಸ್ಟವೇನಲ್ಲ..
ಶುದ್ದವಾದ ಪ್ರೀತಿ ತಿಳಿ ನೀರಿನ ಹಾಗೆ..
ನೀ ಹೇಳದಿದ್ದರೂ..ಅರ್ಥವಾಗುವುದು ಹಾಗೆ..
ನಿನ್ನ ಪ್ರೀತಿಯ ಗುಲಾಬಿ ನಿನ್ನೊಳಗೆ ಇರಲಿ..
ಬೇಕೆಂದಾಗ ತೆಗೆದುಕೊಳ್ಳುವಳು,ನಿನ್ನ ಅರಸಿ.

ಜೇಪೀ ಭಟ್ ! said...

Prajwal: I've posted next part too, U can read:)

ಜೇಪೀ ಭಟ್ ! said...

Anu: Thanks....!!! But these all are not practical or can't possible in real life I think!!
Thanks 4 ur FEEDBACK!!!-----

ADARSH said...

kavana bittu kate bariyale start madadya???

ಜೇಪೀ ಭಟ್ ! said...

ಆದರ್ಶ್: ಏನ್ ಮಾಡೋದು? ಜೀವನ!!
ಧನ್ಯವಾದಗಳು.. ಹೀಗೆ ಓದಿ ಕಾಮೆಂಟ್ ಮಾಡ್ತಾ ಇರಿ:):)

Geeta said...

anu is 100% rite...i agree with her.. navu preetisuvavariginta, nammanu preetisuvavrige jasti mannane needi... ildidre life nalli kushi padule chance eh irtille.

pavi said...

yake possible ille real life nalli..? jepee.. ellanu sadya iddu... en bekadru aglakku annodakke nidarshana iddu..

ಜೇಪೀ ಭಟ್ ! said...

ಗೀತಾ : :(:(

ಜೇಪೀ ಭಟ್ ! said...

ಪವಿ: ಅದು ಕೆಲವೊಮ್ಮೆ ಮಾತ್ರಾ............ ಎಲ್ಲ ಸಂದರ್ಭದಲ್ಲೂ ಅಲ್ಲಾ ಅಲ್ದಾ?