Monday, February 28, 2011

ಸುಳ್ಳು ಸತ್ಯದ ನಡುವಿನಲ್ಲಿ, ಮಡಿದಿದೆ ಹೃದಯ ಮಡುವಿನಲ್ಲಿ!


ಸುಳ್ಳು ಸತ್ಯದ ನಡುವಿನಲ್ಲಿ, ಮಡಿದಿದೆ ಹೃದಯ ಮಡುವಿನಲ್ಲಿ!


ಅವಳು ಹೇಳುತ್ತಿದ್ದುದು ಬರೀ ಸುಳ್ಳುಗಳ ಕಂತೆ,

ಅದು ತೋರಿಕೆಗೆ ಮಾತ್ರ ನಿಜವಾದ ಸತ್ಯದ ಸಂತೆ.
ಅವಳ ರಾಶಿ ರಾಶಿ ಸುಳ್ಳನ್ನೇ ನಂಬಿ ನಾನು ಖುಷಿಯಾಗಿರುತ್ತಿದ್ದೆ ದಿನವೂ..
ಆದರೆ ಈಗ ಅದೇ ಸುಳ್ಳು ಮುಳ್ಳಾಗಿ ಅಳುತ್ತಿದ್ದೇನೆ ಪ್ರತೀ ಕ್ಷಣವೂ...

ಅವಳಿಗೆ ಪದೇ ಪದೇ ಮನಸ್ಸಾದರೂ ಹೇಗೆ ಬಂತು?

ಸುಳ್ಳನ್ನೇ ಸತ್ಯದ ತರಹ ಹೇಳಲು ಎದುರಿಗೇ ನಿಂತು?
ಅದೇ ಸಿಹಿಯಾದ  ಸುಳ್ಳು ನನ್ನ ಕಣ್ಣಲ್ಲಿ ನೀರನ್ನು ತಂತು..
ಅವಳಿಂದಾಗಿಯೇ ಈ ಹೃದಯ ಸಾಯಲಿದೆ ಈಗ ನಿಂತು-ನಿಂತು..

ಆ ಮನಸ್ಸಿನಲ್ಲಿ, ಹೊಟ್ಟೆಯಲ್ಲಿ ಇನ್ನೆಷ್ಟು ರಹಸ್ಯಗಳಿವೆಯೋ?

ಹೇಳಿರದ ಇನ್ನೆಷ್ಟು ಕಥೆಗಳು, ಘಟನೆಗಳಿವೆಯೋ?
ನೀನು ನಿಜವಾಗಿ  ಹೇಳುವುದು ಯಾವಾಗ ಅವನ್ನೆಲ್ಲ?
ನಾನು ಬದುಕುವೆನಾ ಕೇಳಿಯೂ ಅವನ್ನು ಇನ್ನು ಮುಂದೆಲ್ಲಾ....??

Wednesday, February 23, 2011

ಆ ಎಲ್ಲ ನೆನಪುಗಳನ್ನೇ ಮರೆಯೋಣವೆಂದು ಬಹಳಷ್ಟು ಪ್ರಯತ್ನಪಟ್ಟೆ..

ಹೃದಯದಿಂದ ರಕ್ತ!

ಸುಮ್ಮನೇ ಕುಳಿತಿದ್ದೆ, ಕೊರಳ ಸೆರೆ ಉಬ್ಬಿ ಬಂತು..
ಚೆನ್ನಾಗಿದ್ದ ಹೃದಯದಿಂದ ರಕ್ತವೇ ಹರಿದು ಬಂತು..
ಹೊಳೆಯುತ್ತಿದ್ದ ಕಣ್ಣುಗಳಲ್ಲಿ ಧಾರಾಕಾರ ನೀರು..
ಚೆನ್ನಾಗಿದ್ದ ಮನಸು, ಕನಸು  ಈಗ ಬರೀ ಕೆಸರು...

ನೆನಪುಗಳು ಸುಮ್ಮ ಸುಮ್ಮನೇ ಒಟ್ಟೊಟ್ಟಿಗೇ ಬಂದು ಸತಾಯಿಸುತ್ತಿವೆ..

ಬೇಡವೆಂದರೂ ಬಂದು ಬಂದು ಹಳೆಯ ಬೇಡದ ನೆನಪನ್ನೇ ಕೆದಕುತ್ತಿವೆ...
ಸಿಹಿಯಾದದ್ದೋ, ಕಹಿಯಾದದ್ದೋ, ಎಲ್ಲರ ಎಲ್ಲ ನೆನಪುಗಳೇ ಹಾಗೆ...
ಸುಮ್ಮನೇ ಬಂದು ಚೂಪಾದ ಚೂರಿಯ ತರಹ ಇರಿಯುತ್ತಿರುತ್ತವೆ ಹೀಗೆ...

ಆ ಎಲ್ಲ ನೆನಪುಗಳನ್ನೇ ಮರೆಯೋಣವೆಂದು ಬಹಳಷ್ಟು ಪ್ರಯತ್ನಪಟ್ಟೆ..

ಆಗದೇ ಸೋತು ಸುಮ್ಮನೇ ಕೈ ಕಟ್ಟಿ ಮಂಕಾಗಿ ಕುಳಿತುಬಿಟ್ಟೆ...
ಅವಳನ್ನೇ ಮಾತನಾಡಿಸೋಣವೆಂದು ಕೂತಲ್ಲಿಂದ  ಎದ್ದು ಹೊರಟೇಬಿಟ್ಟೆ...
ಏತಕ್ಕೆ ಎಲ್ಲಿ ಹೇಗೆ ಏನು ಮಾಡುತ್ತಿದ್ದೇನೆ ಎಂಬುದನ್ನೇ ಮರೆತುಬಿಟ್ಟೆ.....!!:(

Tuesday, February 22, 2011

ಅಳುವೇ ಜೀವನದ ಮುಖವಾ? ಜೀವನದಲ್ಲಿ ಅಳುವೇ ಸುಖವಾ?

Broken Heart:(
 
ಹುಟ್ಟುವಾಗ ಅಮ್ಮನನ್ನು ಅಳಿಸಿ,
ಹುಟ್ಟಿದಮೇಲೆ ನಾವೂ ಅತ್ತು,
ಬದುಕಿ ಮುಗಿದಮೇಲೆ ನಾವೂ ಸತ್ತು,
ಹೋಗುತ್ತೇವೆ ಮತ್ತೊಮ್ಮೆ ಎಲ್ಲರನ್ನೂ ಅಳಿಸಿ..

ಅಳುವೇ ಜೀವನದ ಮುಖವಾ?
ಜೀವನದಲ್ಲಿ ಅಳುವೇ ಸುಖವಾ?
ಭೂಮಿ ಮೇಲಂತೂ ಇಷ್ಟು ದಿನ ಬದುಕಿದ್ದಾಗ ಬರೀ ದುಃಖದ ಕಣ್ಣೀರು,
ಸತ್ತ ಮೇಲಾದರೂ ಗೋರಿಯಲ್ಲಿ ಸಿಗಬಹುದಾ ಸಂತೋಷದ ಪನ್ನೀರು?

ದಿನವಿಡೀ, ವರ್ಷವಿಡೀ, ಜೀವನ ಕಂಡಿದೆ ಬರೀ ಕಷ್ಟ, ದುಃಖ, ಕಣ್ಣೀರನ್ನ,
ಸತ್ತ ಮೇಲಾದರೂ ಜನ ಕಾಣುವರಾ ನನ್ನ ನಗು ಮೊಗವನ್ನ..........??

Monday, February 21, 2011

ಆಲಸಿಯಾಗಿ ಬಿದ್ದುಕೊಂಡಿರುವೆ, ಕಲ್ಲಾಗಿ, ರಸ್ತೆ ಬದಿಯ ಯಾವತ್ತೂ ಕಸವಾಗಿ....

JePee BhAt;)

ಸೂರ್ಯ ಚಂದ್ರರಿಬ್ಬರೂ ಒಂದೊಂದು ಸಲ ಒಟ್ಟಿಗೇ ಆಕಾಶದಲ್ಲಿ ಬರುವಂತೆ,
ಚೆನ್ನಾಗಿರುವ ದಿನವೇ ಗುಡುಗು, ಸಿಡಿಲುಮಳೆ, ಒಟ್ಟಿಗೇ ಬರುವಂತೆ..
ನೆಟ್ಟಗೆ ಚೆನ್ನಾಗಿ ನಿಂತಿರುವ ಮನೆಗೆ ಭೂಕಂಪ ಬಂದು ಬಡಿದಂತೆ,
ಎಲ್ಲರೂ ನಗುತ್ತಾ ಚೆನ್ನಾಗಿ ಬಾಳುತ್ತಿದ್ದಾಗ ಒಮ್ಮೆಲೇ ಸುನಾಮಿ ಬಂದಂತೆ....

ಆಕಾಶವನ್ನೇ
ಹಾಳೆಯಾಗಿಸಿ, ಅಲ್ಲಿರುವ ನಕ್ಷತ್ರವನ್ನೇ ಲೇಖನಿಯಾಗಿಸಿ,
ರಸ್ತೆಯನ್ನೇ ಮಂಚವಾಗಿಸಿ, ಮಂಜಿನ ಹನಿಗಳನ್ನೇ ಅದರ ಮೇಲೆ ಮಲಗಿಸಿ..
ಹೂವಿನ ಗಿಡಗಳನ್ನೇ ರೆಕ್ಕೆಯಾಗಿಸಿ, ದುಂಬಿಗಳ ಹತ್ತಿರ ಜೋಗುಳ ಹಾಡಿಸಿ,
ಆಲಸಿಯಾಗಿ ಬಿದ್ದುಕೊಂಡಿರುವೆ, ಕಲ್ಲಾಗಿ, ರಸ್ತೆ ಬದಿಯ ಯಾವತ್ತೂ ಕಸವಾಗಿ....

ಒಬ್ಬಂಟಿಯಾಗಿದ್ದಾಗ
ಒಮ್ಮೊಮ್ಮೆ ತೀರಾ ಹೀಗೆನ್ನಿಸಿಬಿಡುತ್ತೆ,....
ಯಾಕೋ ಮನಸ್ಸು ಸುಮ್ಮ ಸುಮ್ಮನೆ ತೊಳಲಾಟದಲ್ಲಿ ಮಿಂದೇಳುತ್ತೆ...
ಹೃದಯ ತೀರಾ ಚಿಕ್ಕ ಮಗು ಥರ ಅಳುತ್ತೆ....
ಮನಸ್ಸು ಮತ್ತೆ ಅದೇ ಸಮಾಧಾನಗೊಳ್ಳುತ್ತೆ...

ಇಷ್ಟೆಲ್ಲಾ
ಆದರೂ ಹೀಗೆನ್ನಿಸುವುದು ಸುಳ್ಳಲ್ಲ.
ಹೀಗೆಲ್ಲಾ ಆದರೂ ಇದು ಕಹಿಯಲ್ಲ...
ಜೀವನವೆಂದರೆ ಬರೀ ಸಿಹಿಯಲ್ಲ..
ಜಗತ್ತಿನಲ್ಲಿ ಎಲ್ಲವೂ ಇದೆಯಲ್ಲ..!!:):)

Thursday, February 17, 2011

ಈಗಲೂ ನೀ ಹೇಳುವೆ ನನ್ನೇ ಪ್ರೀತಿಸುವೆ ಎಂದು, ನಾ ಅದನ್ನು ನಂಬಬೇಕೆ ಇನ್ನು ಮುಂದೂ..?

Jepee BHAT:):)

ಸುಮ್ಮನೆ ನಾನು ಕುಳಿತಿದ್ದೆ ಬಾಳಿನಲ್ಲಿ ಒಂಟಿಯಾಗಿ,
ನೀನು ನನಗೇ ಗೊತ್ತಾಗದಂತೆ ಬಂದು ಕುಳಿತೆ ಜಂಟಿಯಾಗಿ..
ಅದು ಬೆಳೆಯುತ್ತಾ ಹೋಯಿತು ನಮ್ಮ ಸ್ನೇಹದ ತಂತಿಯಾಗಿ,
ಈಗ ಕಾರಣ ಹೇಳದೇ ಹೋದೆ ನನ್ನ ಮಾಡಿ ಒಬ್ಬಂಟಿಯಾಗಿ..

ನೀನು ಆ ದಿನ ನನ್ನ ನೋಡಿದ ರೀತಿ,

ಅದು ನನ್ನೆಡೆಗೆ ಇರದ ಪ್ರೀತಿ..
ಈಗಲೂ ನೀ ಹೇಳುವೆ ನನ್ನೇ ಪ್ರೀತಿಸುವೆ ಎಂದು,
ನಾ ಅದನ್ನು ನಂಬಬೇಕೆ ಇನ್ನು ಮುಂದೂ..?

ನಿನ್ನ ಪ್ರೀತಿ,ಮಾತನಾಡುವ ಆ ರೀತಿ ಕಂಡು ದಂಗಾಗಿದ್ದೆ ಆ ದಿನ,

ನೀ ಇಂದು ಮಾಡುತ್ತಿರುವ ರೂಪ ನೋಡಿ ಅಳುತ್ತಿದ್ದೇನೆ ಈ ದಿನ..
ಬೇಡ ಬೇಡವೆಂದರೂ ಯಾಕೆ ನೆನಪಾಗುತ್ತಿದ್ದೀಯಾ...?
ಈಗ ನನಗನ್ನಿಸುತ್ತಿದೆ ನೀನು ನಿಜವಾಗಲೂ ನನ್ನ ಬಿಟ್ಟು ಹೋಗಿದ್ದೀಯಾ..??

Thursday, February 10, 2011

ಎಲ್ಲರ ಬದುಕಲ್ಲಿ ಇರುವಂತೆ ಕಷ್ಟ ಸುಖದ ಹೂರಣ, ಎಲ್ಲರ ಬಾಳಿನಲ್ಲಿ ಒಮ್ಮೆಯಾದರೂ ಬರದೇ ಇದ್ದೀತೆ ಆಶಾಕಿರಣ??

Life cried loudly!

ಖುಷಿಯಿಂದ ಆಚೀಚೆ ಓಲಾಡಿ  ನಿಂತಿರುವ ಮರಗಳಂತೆ,
ಎಲ್ಲರಿಗೂ ಎಲ್ಲೆಡೆ ಅವಶ್ಯವಾದ  ತಂಪಾದ ಜೀವಜಲ ನೀಡುವ ನದಿಯಂತೆ,
ಎಲ್ಲರನ್ನೂ ಉಸಿರಾಡಿಸಿ ಬದುಕಿಸುತ್ತಿರುವ ಶುದ್ಧ ಗಾಳಿಯಂತೆ,
ಪುಣ್ಯವಂತರನ್ನೂ,ಪಾಪಿಗಳನ್ನೂ ತನ್ನ ಮಡಿಲಲ್ಲಿ ಹೊತ್ತು ನಿಂತಿರುವ ಮಹಾತಾಯಿ ಭೂಮಾತೆಯಂತೆ..

ನೋವುಗಳಿವೆ ಯಾವಾಗಲೂ ಎಲ್ಲರಲ್ಲಿಯೂ,
ಅದರಲ್ಲಿ ನೀನು ಬದುಕು ಹುಡುಕಿ ಖುಷಿಯನ್ನು,
ಈ ಜಗತ್ತಿನಲ್ಲಿ ಯಾರೂ ಪರಮ ಸುಖಿಗಳಲ್ಲ,
ಆದ್ದರಿಂದ ಖುಷಿಯಾಗಿರಿಸು ಯಾವಾಗಲೂ ನಿನ್ನ ಮನವನ್ನು..

ಅವರವರ ಕಷ್ಟ-ಸುಖ ಅವರಿಗೆ ಇದ್ದೇ ಇರುತ್ತೆ,
ನೋವಲ್ಲೂ ಖುಷಿ ಒಮ್ಮೊಮ್ಮೆ ಎದ್ದು ಬರುತ್ತೆ!
ಎಲ್ಲರೊಂದಿಗೂ ನಗುನಗುತ್ತಾ ಬಾಳು ಒಂದಾಗಿ,
ಆಗ ಬದುಕು ಸಾಗುತ್ತೆ ನೀ ಅಂದುಕೊಂಡಂತೆ ಚೆಂದಾಗಿ!

ಎಲ್ಲರ ಬದುಕಲ್ಲಿ ಇರುವಂತೆ ಕಷ್ಟ ಸುಖದ ಹೂರಣ,
ಎಲ್ಲರ ಬಾಳಿನಲ್ಲಿ ಒಮ್ಮೆಯಾದರೂ ಬರದೇ ಇದ್ದೀತೆ ಆಶಾಕಿರಣ??

Tuesday, February 08, 2011

"ಪ್ರೇಮಿಗಳ ಪ್ರೀತಿಯ ದಿನ"---- ನಾನು ಅವಳು ಮತ್ತು ಈ ಜಗತ್ತು, ನಮಗಾಗಿ ಎಷ್ಟು ಹೊತ್ತು ....??


nanDu1.
"ಪ್ರೇಮಿಗಳ ಪ್ರೀತಿಯ ದಿನ"

ಅವಳ ಹೆಸರೇ ಅಷ್ಟು ಚೆನ್ನ, ಚಿನ್ನ. ನನ್ನ ಕಲ್ಪನೆಯ ಕೂಸು, ಎಂದೋ ಮನದಲ್ಲಿ ಮಾಡಿದ ಕನಸು! ಎಂದೋ ಬಿತ್ತಿದ ಬೀಜ ಇಂದು ಮರವಾಗಿ, ಕಾಯಾಗಿ, ಹಣ್ಣಾಗಿ, ಹೆಣ್ಣಾಗಿ ನಿಂತಿದೆ.. ಯಾವಾಗ ಏನಾಗುವುದೋ ಗೊತ್ತಿಲ್ಲ:(


nanDu2!

ಪ್ರೇಮಿಗಳಿಗೆ ಪ್ರೀತಿ ಮಾಡೋಕೆ ಇಂಥಾ ದಿನಾನೇ ಆಗ್ಬೇಕಾ? ನನ್ ಪ್ರಕಾರ ಹಂಗೇನೂ ಇಲ್ಲ.. ಯಾಕೆಂದ್ರೆ ಅವರು ನಿಜವಾದ ಪ್ರೇಮಿಗಳೇ ಆಗಿದ್ದಲ್ಲಿ, ವರ್ಷವೆಲ್ಲಾ, ದಿನವೆಲ್ಲಾ, ತಿಂಗಳೆಲ್ಲಾ, ಪ್ರತೀ ಸೆಕೆಂಡುಗಳಲ್ಲಿಯೂ, ಮೈ-ಮನಗಳಲ್ಲಿಯೂ, ಕಣ್ಣಿನಲ್ಲಿ ಮತ್ತು ಹೃದಯದಲ್ಲಿ, ದೇಹದ ಪ್ರತೀ ಜೀವಕೋಶದಲ್ಲಿಯೂ ಪ್ರೀತಿಯನ್ನು ತುಂಬಿಕೊಂಡೇ ಇರುತ್ತಾರೆ ಮತ್ತು ಅದೇ ಪ್ರೀತಿಯನ್ನು ಹಾಗೇ ಅಷ್ಟೇ ಚೆನ್ನಾಗಿ ಸಿಹಿಯಾಗಿ ಹಂಚಿಕೊಂಡು ಬದುಕಿರ್ತಾರೆ, ಬದುಕನ್ನು ನಡೆಸಿಕೊಂಡು ಹೋಗ್ತಿರ್ತಾರೆ..! ಫೆಬ್ರವರಿ 14  ಪ್ರೇಮಿಗಳ ದಿನ, ಎಲ್ಲರಿಗೂ ಏನೋ ಒಂಥರಾ ಕುತೂಹಲ, ಆಕರ್ಷಣೆ, ಆಸಕ್ತಿ. ಹುಡುಗಿಯರಿಗೆ ಎಷ್ಟೋ ಪ್ರಪೋಸಲ್ಗಳು ಬರುವ ಸಂಭವ, ಹುಡುಗರಿಗೆ ಇನ್ನೆಷ್ಟೋ! ಎಷ್ಟೋ ದಿನದಿಂದ ಪ್ರೀತಿಸುತ್ತಿರುವ ಆದರೆ ಹೇಳಲಾಗದೇ ಮನದಲ್ಲೇ ಒದ್ದಾಡುತ್ತಿರುವ ಭಾವನೆಯನ್ನು ಹೊರಹಾಕಲು ಸಿಗುವ ಸಂಧರ್ಭ, ಇದೊಂದು ರೀತಿಯ ಅಮೃತ ಘಳಿಗೆ, ಎಲ್ಲ ಪ್ರೇಮಿಗಳ ಪಾಲಿಗೆ!

nanDu3!

ಈ ದಿನವೇ ಹಾಗೆ..
ಹುಡುಗಿಯರಿಗೆ ಅವನನ್ನು ತಿರಸ್ಕರಿಸಿದ ಜಂಭ ಒಂದೆಡೆಯಾದರೆ, ಎಲ್ಲರೂ ತನ್ನನ್ನೇ ನೋಡುತ್ತಿದ್ದಾರೆ ಮತ್ತು ಮತ್ತೂ ನೋಡಲಿ ಎಂಬ ಅಹಂ ಇನ್ನೊಂದೆಡೆ.. ಇತ್ತ ತಿರಸ್ಕೃತಗೊಂಡ ಹುಡುಗನೋ ಪಾಪ ಅತ್ತು ಅತ್ತು ಸಾಕಾಗಿ ಕಣ್ಣೀರೆಲ್ಲ ಬತ್ತು ಹೋಗಿ ಬಚ್ಚಲು ಮನೆಯ ಅಡ್ಡ ಚಿಕ್ಕ ಗೋಡೆಯೋ, ಹಿತ್ತಲ ಸಂದಿಯೋ, ನೀರೇ ಇಲ್ಲದ ಬಾವಿ ಕಟ್ಟೆಯ ಮೇಲೋ ಕುಳಿತು ತನ್ನ ಫ್ರೆಂಡಿಗೆ ಅತ್ತು ಅತ್ತು ಅದನ್ನೇ ನಗುವಿನ ರೀತಿಯಲ್ಲಿ ಹೇಳುತ್ತಿರುತ್ತಾನೆ.. ಆದ್ರೆ ಆಲ್ಲಿ ಆ ಹುಡುಗಿ ದುಡ್ಡಿದ್ದೋನ ಜೊತೆ ಪಾರ್ಟಿ ಮೋಜು ಮಸ್ತಿ, ಅವನು ಕೊಟ್ಟ ಗಿಫ್ಟ್ ಅನ್ನು ನೋಡುವುದರಲ್ಲಿ ಬಹಳ ಬ್ಯುಸಿ...:(:( ಇವನ ನಿಜವಾದ ಪ್ರೀತಿಯನ್ನು ಕಣ್ಣಿದ್ದೂ ನೋಡಲಾರದೆ ಕುರುಡಾದ ನತದೃಷ್ಟ ಹುಡುಗಿ, ಕಣ್ಣಿದ್ದೂ ಅತ್ತು ಅತ್ತು ಕಣ್ಣೇ ಕಿತ್ತು ಬರುವಂತೆ ಅಳುತ್ತಿರುವ ಬಡಪಾಯಿ ಹುಡುಗ!
ಇನ್ನೊಂದೆಡೆ  ಈತ ತನ್ನ ಲವ್ ಸಿಕ್ಕಿದುದರ ಖುಷಿಯಲ್ಲಿ ಅದಕ್ಕೆ ಕಾರಣರಾದ ತನ್ನ ಸ್ನೇಹಿತರನ್ನೂ ಮರೆತು ಅವಳಿಗೆ I Love You ಅಂತ ಮೆಸೇಜ್ ಮಾಡುವುದರಲ್ಲಿ ಬಹಳ ತಲ್ಲೀನ. ಅವಳೂ ಖುಷ್, ಇವನೂ ಖುಷ್.. ಆದ್ರೆ ಅದ್ಕೆ ಕಾರಣರಾದೋರು ಮಾತ್ರ, ಅವರನ್ನು, ಅವರ ಸ್ಥಿತಿಯನ್ನು ಕೇಳೋರ್ ಮಾತ್ರ ಯಾರೂ ಇಲ್ಲ ಇಲ್ಲಿ...
ಈ ದಿನವೇ ಹಾಗೆ, ಪ್ರೀತಿ ಮುತ್ತುಗಳ, ಶುಭಾಶಯಗಳ, ಚಾಕೊಲೇಟ್ ಗಳ, ಗ್ರೀಟಿಂಗ್ಸ್ ಗಳ, ಮತ್ತು ತರ ಥರಹದ ಗಿಫ್ಟ್ ಗಳ ಮಹಾಪೂರದ ದಿನ.. ಪ್ರೀತಿಯ ಹಸಿ ಬಿಸಿ ಅಪ್ಪುಗೆಗಳ, ಪ್ರೇಮ ನಿವೇದನೆಗಳ, ರಾಶಿ ರಾಶಿ ಕೆಂಗುಲಾಬಿಗಳ, ಮತ್ತು ತುಂಬಿ ತುಳುಕುತ್ತಿರುವ ಹೋಟೆಲ್, ಕಾಫೀ ಡೇ, ಸಿನೇಮಾ ಹಾಲ್ ಗಳ, ಮತ್ತು ಪಾರ್ಕ್ ನ ಬೆಂಚುಗಳ ದಿನ:)


nanDu4.

ಪ್ರೀತಿಯ ಮಾಯೆಯೇ ಹಾಗೆ, ಯಾರನ್ನೂ ಬಿಟ್ಟಿಲ್ಲ.. ಯಾರನ್ನೂ ಬಿಡುವುದೂ ಇಲ್ಲ, ಎಲ್ಲಿ ಯಾರಿಗೆ ಹೇಗೆ ಯಾವ ರೂಪದಲ್ಲಿ, ಯಾರ ರೂಪದಲ್ಲಿ ಪ್ರೀತಿ ಸಿಗುತ್ತದೆ ಎಂಬುದನ್ನು ಆ ದೇವರೇ ಬಲ್ಲ..! ಇದರಲ್ಲಿ ಯಾರೂ ಬೀಳದವರಿಲ್ಲ ನನ್ನ ಹೊರತಾಗಿಯೂ... ನಾನೂ ಬಿದ್ದಿದ್ದೇನೆ, ಎದ್ದಿದ್ದೇನೆ, ನಗುತ್ತಿದ್ದೇನೆ, ಅಳುತ್ತಿದ್ದೇನೆ, ಮತ್ತು ಏನೇನನ್ನೋ ಹೇಳುತ್ತಿದ್ದೇನೆ, ಎಲ್ಲೆಲ್ಲೂ ಯಾವಾಗಲೂ ಅವಳನ್ನೇ ಹುಡುಕುತ್ತಿದ್ದೇನೆ..

ಅವಳ ಹೆಸರೇ 'ಮಾಯಾ'... . . .

ಕಲ್ಪನೆಯ ಮಾಯಾ ಲೋಕದಲ್ಲಿ ತೇಲುತ್ತಿದ್ದಾಗ ಮಾಯದಂತೆ ಬಂದು ಮಾಯವಾದ ಮಿಂಚಿನ ಹುಡುಗಿ.. ಈಗಲೂ ಬಂದು ಆಗಾಗ ಕಚಗುಳಿ ಇಡುತ್ತಿರುತ್ತಾಳೆ.. ನಾನೂ ಒಳಗೊಳಗೇ ನಗುತ್ತಿರುತ್ತೇನೆ.. ಎಲ್ಲಿದ್ದರೂ, ಯಾವುದೇ ಸಂಧರ್ಭವಾದರೂ, ಯಾರು ಏನೇ ತಿಳಿದುಕೊಂಡರೂ! ಅವಳನ್ನು ಹೇಗೆಲ್ಲಾ, ಎಷ್ಟೆಲ್ಲಾ ಪ್ರೀತಿಸಿದೆ, ಹೇಳಿದೆ,.. ಆದರೂ ಅವಳು ಕೇಳಲಿಲ್ಲ, ಆದರೆ ನಾನು ಅವಳು ಹೇಳಿದಂತೆ ಕೇಳಿದೆ. ನಾನೇ ಬದಲಾದೆ. ಆಮೇಲೆ ಅವಳೇ ಬದಲಾಗಿ ನನಗೆ ಸಿಗುವ ಬದಲು ನನಗೇ ಕೈ ಕೊಟ್ಟು, ನೀನು ನಾನು ಹೇಳಿದ ಬದಲಾಗಿ ಹೇಗೇಗೋ ಬದಲಾದೆ ಅಂತ  ಹೇಳಿ ಮತ್ತೆ ಮಾಯವಾದಳು..:( ಪ್ರತೀ ದಿನವೂ, ಅನು-ತನುವಿನಲ್ಲಿಯೂ, ಪ್ರತೀ ಪ್ರೇಮಿಗಳ ದಿನದಂದೂ ಅವಳಿಗೆ ಹೇಳುತ್ತಿದ್ದೆ.
ನಾನಂದೆ, ನಾನು ನಿನ್ನ ಪ್ರೀತಿಸುತ್ತೇನೆ-ಬಿಟ್ಟಿರಲಾರದಷ್ಟು,
ಅವಳೆಂದಳು, ನಾನು ನಿನ್ನ ದ್ವೇಷಿಸುತ್ತೇನೆ-ಹೇಳಲಾರದಷ್ಟು!:

ಅವಳೂ ಕೇಳುತ್ತಿದ್ದಳು, ಆದರೆ ಕೇಳಿ ಹಾಗೇ ಅದರ ಮುಂದಿನ ನಿಮಿಷಕ್ಕೆ ಮರೆಯುತ್ತಿದ್ದಳು ಎಂದು ನನಗೆ ಈಗ ಗೊತ್ತಾಗಿದೆ.
ಅಲ್ಲಿಗೇ ಮುರಿದು ಬಿತ್ತು ಕನಸು. . . . . . .    ..         .. . . 


nanDu5.
  
ಆ ದಿನವೇ ಅಂದುಕೊಂಡೆ ಮುರಿದ ಮನಸು, ಹಾಳಾದ ಕನಸು..
ಅವಳು ಮಾಡುತ್ತಿದ್ದ ಪ್ರತಿಯೊಂದು ಚೇಷ್ಟೆಯನ್ನೂ ಸಹಿಸಿಕೊಂಡೆ, ಸ್ಮರಿಸಿಕೊಂಡೆ.. ಅವಳ ಪ್ರತಿಯೊಂದು ಮಾತನ್ನೂ ಅರಗಿಸಿಕೊಂಡೆ, ಪ್ರತೀ ನೋವನ್ನೂ, ಅವಮಾನವನ್ನೂ, ಹತಾಷೆಯನ್ನೂ, ಕೋಪವನ್ನೂ, ಅಸಹನೆಯನ್ನೂ, ಅಷ್ಟೇ ಏಕೆ ಅವಳಿಗಾಗಿ ನನ್ನ ಹಸಿವನ್ನೂ ನುಂಗಿಕೊಂಡೆ, ಆದರೆ ನಿನಗೆ ಅದು ಯಾವುದೂ ಎಂದಿಗೂ ಕಂಡೇ ಇಲ್ಲ, ಕಾಣುವುದೂ ಬೇಡ ಬಿಡು. ಇಷ್ಟೆಲ್ಲಾ ಆದರೂ ನಾನು ಸುಮ್ಮನೇ ನಕ್ಕೆ. ಆದರೂ ಅವಳು ಇಂದಿಗೂ ಸಿಗಲಿಲ್ಲ.. ಸಿಗಲಿಲ್ಲವೆಂದು ಬಹಳ ಬೇಜಾರಾಗಿದ್ದು ಅವಳಿಗೆ ಇಂದಿಗೂ ಗೊತ್ತಾಗಲೇ ಇಲ್ಲ!


nandu..

ಈ ಪ್ರೀತಿಯ ಪ್ರೇಮಿಗಳ ದಿನದಂದು ಎಲ್ಲರಿಗೂ ಶುಭಾಶಯ ಕೋರುತ್ತಾ, ನಿಮ್ಮ ನಿಮ್ಮ ಪ್ರೀತಿ ಪ್ರೇಮ ಚೆನ್ನಾಗಿರಲೆಂದು ಹಾರೈಸುತ್ತಾ, ಇನ್ನಷ್ಟು ಹೊಸ ಹೊಸ ಪ್ರೀತಿ ಹುಟ್ಟಲಿ ಮತ್ತು ಹುಟ್ಟಿದ ಪ್ರೀತಿ ಆಕಾಶದ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತಾ, ನನ್ನ ಪ್ರೀತಿಯ 'ಮಾಯಾ' ಳಿಗೂ ಪ್ರೇಮಿಗಳ ದಿನಾಚರಣೆಯ ಶುಭಾಷಯ ಕೋರುತ್ತಾ, ಪ್ರೀತಿಯಿಂದ ಪ್ರೀತಿಸಿದವಳಿಗೆ ಪ್ರೀತಿಯ ಪ್ರೇಮದ ಕಾಣಿಕೆಯಾಗಿ ಈ ಪುಟ್ಟ ಪತ್ರವನ್ನು ಒಂದೇ ಒಂದು ಸಿಹಿ ಹೂ ಮುತ್ತಿನೊಂದಿಗೆ ಮತ್ತು ಈ 'ತಿಳಿ ಹಳದಿ ಗುಲಾಬಿ' ಮತ್ತು ಶುಭ್ರ ಶ್ವೇತ ಬಣ್ಣದ ಗರಿ ಗರಿಯಾದ ಈ ಕರವಸ್ತ್ರದೊಂದಿಗೆ ಎಲ್ಲವನ್ನೂ ನಿನ್ನ ಮೃದುವಾದ ಪುಟ್ಟ ಕೈ ಒಳಗೆ ಇಡುತ್ತಿದ್ದೇನೆ. ತೆಗೆದುಕೊಳ್ಳುವುದು, ಬಿಡುವುದು, ಬಿಸಾಕುವುದು, ಅಥವಾ ನಿನ್ನೊಂದಿಗೇ  ಇಟ್ಟುಕೊಳ್ಳುವುದು, 'ಎಲ್ಲವನ್ನೂ' ನಿನಗೆ ಬಿಡುತ್ತಿದ್ದೇನೆ........(ತೀರಾ ಮೊದಲಿನ  ಹಾಗೆಯೇ)...!!


???????????????
 
ಇಂತಿ ನಿನ್ನ, ಇನ್ನೂ ನಿನ್ನ ಪ್ರೀತಿಸುತ್ತಿರುವ,
'ನನ್ನ ಹೆಸ್ರಾದ್ರೂ ನೆನ್ಪಿದ್ಯೇನೆ ' ??:(

ಗೆಳತೀ, ನಿನಗೆ ನನ್ನ ಕಣ್ಣಿನಲ್ಲಿ ಯಾವಾಗಲೂ ನೀರನ್ನೇ ನೋಡುವ ಬಯಕೆ,... ನನ್ನ ನಗು ಮೊಗವನ್ನು ಒಂದು ಸಲವಾದರೂ ನಿನ್ನ ಕಣ್ಣಿನಲ್ಲಿ ನೋಡುವ ಆಸೆ ನನ್ನ ಮನಕೆ!

Everywer, Everytime-> BROKEN HEART Jp!:(

ಅವಳನ್ನು ನಾನು ಎಷ್ಟೆಲ್ಲಾ ಹೇಗೆಲ್ಲಾ ಪ್ರೀತಿಸಿದೆ,
ಅವಳು ನನ್ನ ಯಾವಾಗಲೂ ದೂರವೇ ಇಟ್ಟಳು..
ನಾನು ಮಾತ್ರ ಅವಳನ್ನೇ ನೆನೆದು ಇಟ್ಟೆ,
ನಾನು ಬಹುಷಃ ನೆನೆದು ನೆನೆದೇ ಕೆಟ್ಟೆ..!

ಈ ಪ್ರೀತಿಯೇ ಹಾಗೆ ದುಡ್ಡಿದ್ದೋರ ಪಾಲಿಗೆ,

ಏನೂ ಇಲ್ಲದೇ ಇದ್ದರೂ ಬೀಳುವುದು ಅವರ ಕಾಲಿಗೆ,
ನನ್ನ ಹೃದಯ ಮಾತ್ರ ಯಾವಾಗಲೂ ಖಾಲಿಯೇ..!

ಹೀಗೆ ಯಾಕೆಂದು ಮತ್ತೆ ಮತ್ತೆ ಕೇಳಿದರೆ ಮೌನಳಾದಳು,

ಬಿಡಿಸಿ ಹೇಳು ಎಂದರೆ ಏನೂ ಹೇಳದೆ ಮೂಕಳಾದಳು...!

ಗೆಳತೀ, ನಿನಗೆ ನನ್ನ ಕಣ್ಣಿನಲ್ಲಿ ಯಾವಾಗಲೂ ನೀರನ್ನೇ ನೋಡುವ ಬಯಕೆ,
...
ನನ್ನ ನಗು ಮೊಗವನ್ನು ಒಂದು ಸಲವಾದರೂ ನಿನ್ನ ಕಣ್ಣಿನಲ್ಲಿ ನೋಡುವ ಆಸೆ ನನ್ನ ಮನಕೆ!

Saturday, February 05, 2011

ಕಾಣದ ಕಣ್ಣುಗಳೇ ಹಾಗೆ, ಎಲ್ಲವನ್ನೂ ತಿಳಿಯುವ ತವಕ.. ಬಯಸಿದ್ದು ಏನೂ ಸಿಗದೇ ಇದ್ದಾಗ, ಲೋಕದಲ್ಲಿ ಎಲ್ಲರ ಕುಹಕ...!

Smiling iDioT;)
 
ಎಲ್ಲಿಯೋ ಏನನ್ನೋ ಹುಡುಕುತ್ತಿದ್ದೆ,
ಅದು ಸಿಗಲಾರದ ಜಾಗದಲ್ಲಿ..
ಮತ್ತೆ ಮತ್ತೆ ಕೆದಕಿ ತೆಗೆದೆ..
ಬಾರದಿದ್ದರೂ ಮತ್ತೆ ಮೇಲೆ..

ಜೀವನವೇ ಎಲ್ಲರಲ್ಲಿಯೂ ಹೀಗೆ,
ನಾವು ತಿಳಿದಂತಲ್ಲ..
ನಾವು ಬಯಸುವುದೇ ಹಾಗೆ,
ಅನಿಸಿದಂತೆ ಒಂದೂ ಆಗುವುದಿಲ್ಲ..

ಯಾವಾಗಲೂ ಬೇಡವೆಂದರೂ ಮತ್ತೆ ಮತ್ತೆ,
ಕನಸು ಕಾಣುತ್ತೇನೆ..
ಅವು ಎಷ್ಟು ಸತ್ಯವೋ ಸುಳ್ಳೋ,
ಹಾಗೆಯೇ ಎಂದಿನಂತೆ ಕಾಣುತ್ತಲೇ ಇರುತ್ತೇನೆ..

ಕಾಣದ ಕಣ್ಣುಗಳೇ ಹಾಗೆ,
ಎಲ್ಲವನ್ನೂ ತಿಳಿಯುವ ತವಕ..
ಬಯಸಿದ್ದು ಏನೂ ಸಿಗದೇ ಇದ್ದಾಗ,
ಲೋಕದಲ್ಲಿ ಎಲ್ಲರ ಕುಹಕ...!

Wednesday, February 02, 2011

ಬದುಕು ಬೇಡುತ್ತಿದೆ ಹನಿ ಹನಿ ಖುಷಿಯನ್ನು.. ಆದರೆ ದೇಹ ಉಣ್ಣುತ್ತಿದೆ ಬರೀ ನೋವನ್ನು....!!

She hurted me todaY..y?

ಕಣ್ಣೀರ ಹನಿಯೊಂದು ಕೆನ್ನೆ ಮೇಲೆ  ಬಂದು,
ಹಳೆಯ ನೆನಪುಗಳನ್ನೆಲ್ಲ ಒಟ್ಟೊಟ್ಟಿಗೆ ತಂದು,
ನಿಲ್ಲಿಸಿ ಹೃದಯವನ್ನು ಕೊಂದು,
ಇವೆಲ್ಲ ಬಾಳಿನಲ್ಲಿ ಸರಿಯಾಗುವುದು ಎಂದು?

ಬಾಳಲ್ಲಿ ನೀ ಬಂದೆ ಮಳೆಯಂತೆ,

ಬಾನಲ್ಲಿ ಮಿಂಚು ಮಿಂಚಿ ಮರೆಯಾದಂತೆ,
ಸಾಗರದಲ್ಲಿ ಹಾಯಿದೋಣಿ ತೇಲಿದಂತೆ,
ಸುನಾಮಿಗೆ ಸಿಕ್ಕು ಸತ್ತ ಜನರಂತೆ..

ಬದುಕು ಬೇಡುತ್ತಿದೆ ಹನಿ ಹನಿ ಖುಷಿಯನ್ನು..

ಆದರೆ ದೇಹ ಉಣ್ಣುತ್ತಿದೆ ಬರೀ ನೋವನ್ನು....!!

Tuesday, February 01, 2011

ಎಲ್ಲಿಯೂ ಯಾವಾಗಲೂ ಯಾರೊಂದಿಗೂ ಬೇಡ ಮುನಿಸಿನ ಶಪಥ, ಆಗ ನೀನೇ ಬೇಡವೆಂದರೂ ಆಗುವುದು ನಿನ್ನ ಬದುಕು ಚಿನ್ನದ ರಥ..!!

My Doll., My Love !:)

ಪ್ರೀತಿಯೂ ನಿನದೆ,
ಕೋಪವೂ ನಿನದೇ,
ಮುಗಿಯದಿರಲಿ ಬದುಕು..

ಸ್ನೇಹವೂ ನಿನದೆ,

ದ್ವೇಷವೂ ನಿನದೇ,
ಆರದಿರಲಿ ಸ್ನೇಹದ ಬೆಳಕು..

ಮನೆಯೂ ನಿನದೆ,

ಜಗವೂ ನಿನದೇ,
ಇರದಿರಲಿ ಮುನಿಸು..

ಅವರೂ ನಿನ್ನವರೆ,

ಇವರೂ ನಿನ್ನವರೇ,
ಕಾಣು ಎಲ್ಲರಲ್ಲಿಯೂ ಸೊಗಸು..

ಎಲ್ಲಿಯೂ ಯಾವಾಗಲೂ ಯಾರೊಂದಿಗೂ ಬೇಡ ಮುನಿಸಿನ ಶಪಥ,

ಆಗ ನೀನೇ ಬೇಡವೆಂದರೂ ಆಗುವುದು ನಿನ್ನ ಬದುಕು ಚಿನ್ನದ ರಥ..!!