Tuesday, February 22, 2011

ಅಳುವೇ ಜೀವನದ ಮುಖವಾ? ಜೀವನದಲ್ಲಿ ಅಳುವೇ ಸುಖವಾ?

Broken Heart:(
 
ಹುಟ್ಟುವಾಗ ಅಮ್ಮನನ್ನು ಅಳಿಸಿ,
ಹುಟ್ಟಿದಮೇಲೆ ನಾವೂ ಅತ್ತು,
ಬದುಕಿ ಮುಗಿದಮೇಲೆ ನಾವೂ ಸತ್ತು,
ಹೋಗುತ್ತೇವೆ ಮತ್ತೊಮ್ಮೆ ಎಲ್ಲರನ್ನೂ ಅಳಿಸಿ..

ಅಳುವೇ ಜೀವನದ ಮುಖವಾ?
ಜೀವನದಲ್ಲಿ ಅಳುವೇ ಸುಖವಾ?
ಭೂಮಿ ಮೇಲಂತೂ ಇಷ್ಟು ದಿನ ಬದುಕಿದ್ದಾಗ ಬರೀ ದುಃಖದ ಕಣ್ಣೀರು,
ಸತ್ತ ಮೇಲಾದರೂ ಗೋರಿಯಲ್ಲಿ ಸಿಗಬಹುದಾ ಸಂತೋಷದ ಪನ್ನೀರು?

ದಿನವಿಡೀ, ವರ್ಷವಿಡೀ, ಜೀವನ ಕಂಡಿದೆ ಬರೀ ಕಷ್ಟ, ದುಃಖ, ಕಣ್ಣೀರನ್ನ,
ಸತ್ತ ಮೇಲಾದರೂ ಜನ ಕಾಣುವರಾ ನನ್ನ ನಗು ಮೊಗವನ್ನ..........??

2 comments:

ಅನು. said...

ಸತ್ತ ಮೇಲೆ ಏನುಂಟು,ಏನಿಲ್ಲ,ಕಂಡವರು ಯಾರಿಲ್ಲಾ...
ಇರುವಾಗ,ಸತ್ತಂತಿರದೆ..ಜೀವಿಸಬೇಕು ನುಂಗಿ ನೋವೆಲ್ಲಾ..
ಸಾರ್ಥಕತೆಯಲಿ ಅಡಗಿದೆ ಜೀವನದ ಗುಟ್ಟೆಲ್ಲಾ...
ಆಗಲಾದರೂ ಸಿಗಬಹುದು ನೆಮ್ಮದಿಯ ಬದುಕು ನಮಗೆಲ್ಲಾ..

ಜೇಪೀ ಭಟ್ ! said...

Anu:............??!
THANKS:)