![]() |
Jepee BHAT* |
ಕಣ್ಣೀರಿನ ಕೊಳಕ್ಕೇ ಕಲ್ಲೆಸೆದವರು ಯಾರು?
ನಗುತ್ತಿದ್ದ ಮೊಗಕೆ ಅಳುವನ್ನು ತಂದೋರು ಯಾರು?
ಹಾರಾಡಿಕೊಂಡಿದ್ದ ಮನಸಿಗೆ ಬೇಲಿ ಹಾಕಿದವರು ಯಾರು?
ಆರೋಗ್ಯದಿಂದ ಇದ್ದ ದೇಹವನ್ನು ಸತ್ತಂತೆ ಮಾಡಿದವರು ಯಾರು?
ಇದ್ದಕ್ಕಿದ್ದಂತೆ ಮನಸೇ ಅತ್ತಿದ್ದು, ಮನಸೇ ಸತ್ತಿದ್ದು, ಆಮೇಲೆ ನಕ್ಕಿದ್ದು..
ಆಮೇಲೆ ಸುಮ್ಮನೇ ಸಮಾಧಾನ ಮಾಡಿದ್ದು ಗೊತ್ತಿದ್ದು ಗೊತ್ತಿದ್ದೂ...
ಏನೋ ಮಾಡಲು ಹೋಗಿ ನಾನೇ ಆದೆ ಮೋಡಿ..
ಹರಿಯುತ್ತಿದೆ ಈಗ ದೇಹದಲ್ಲಿ ಕಣ್ಣೀರಿನ ಕೋಡಿ..
ಕನಸು ಕಂಡಿದ್ದು ಏನೇನೋ..ಆಗಿದ್ದು ಮತ್ತಿನ್ನೇನೋ...
ಯಾವಾಗಲೂ ಹೀಗೆಯೇ, ಜೀವನವೇ ಹೀಗೇನೋ?
ಗೊಂದಲದ ಗೂಡಲ್ಲಿ, ನನ್ನ ಹುಚ್ಚು ಮನಸು ಭಾವನೆಗಳ ಕಡಲ ಕವಲಲ್ಲಿ,
ಕತ್ತಲಲ್ಲಿ ಹುಡುಕುತ್ತಿವೆ ಸಂತೈಸುವ ಕೈಗಳನ್ನು ಅವು ಸಿಗಲಾರದ ಜಾಗದಲ್ಲಿ...

13 comments:
kavana chennagiddu "jp"
ಕಣ್ಣಿರ ಕೊಳಕ್ಕೆ ಕಲ್ಲೆಸೆದುಕೊಳ್ಳೋರೂ ನಾವೇ....
ಮೊಗದ ತುಂಬೆಲ್ಲಾ ನಗುವನ್ನು ತುಂಬಿ ನಲಿವೋರೂ ನಾವೇ....
ನಮ್ಮಲ್ಲೇ ಇದೆ ಎಲ್ಲದರ ಭಾವ....
ಚನ್ನಾಗಿದೆ ಕವನ...
kavangalu chennagive,,,
kanasu kangala huduga... ninvu heliddu 100kke 100 sastya.. elladakku naave kaaranibhotaru...
kavana chenagide jepee....
ಕವನ ಚೆನ್ನಾಗಿದೆ. ಪ್ರತಿ ಕವಿತೆಯೂ ವಿರಹದ ಒಂದೊಂದು ಮಜಲುಗಳಂತೆ ತೋರುತ್ತಿದೆ.
ನೀವು ಈ ವಿರಹದಿಂದ ಹೊರಬಂದು ಜೀವಂತಿಕೆಯ, ಉಲ್ಲಾಸದ ಕವನಗಳನ್ನು ಬರೆಯುವ ದಿನಗಳನ್ನು ಎದಿರು ನೋಡುತ್ತಿರುವೆ.
ವಿಜು: ಧನ್ಯವಾದಗಳು...
ಹೀಗೆ ಭೇಟಿ ಕೊಟ್ಟು ಪ್ರತಿಕ್ರಿಯೆ ನೀಡಿ.
ಕನಸು ಕಂಗಳ ಹುಡುಗ : ಧನ್ಯವಾದಗಳು...
ಜೀವನವನ್ನು ಬದಲಿಸಲು ನಾವು ಯಾರು ಅಲ್ವೇ ?
ಹೀಗೆ ಭೇಟಿ ಕೊಟ್ಟು ಪ್ರತಿಕ್ರಿಯೆ ನೀಡಿ.
ಕೀರ್ತಿ : ಧನ್ಯವಾದಗಳು...
ಹೀಗೆ ಭೇಟಿ ಕೊಟ್ಟು ಪ್ರತಿಕ್ರಿಯೆ ನೀಡಿ.
ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ:):)
ಪವಿ: ಧನ್ಯವಾದಗಳು...
ಹೀಗೆ ಭೇಟಿ ಕೊಟ್ಟು ಪ್ರತಿಕ್ರಿಯೆ ನೀಡಿ.
ಕಂಗಳು ಹುಡುಗ ಹೇಳಿದ್ದೂ ಸರಿಯೇ!
ಶಾಲ್ಮಲಿ: ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..
ನಿಮಗೆ ಎಲ್ಲ ಬರಹಗಳೂ ಹಾಗೇ ತೋರಿವೆಯಾ???
ಖಂಡಿತ ನೀವು ಹೇಳಿದ ಹಾಗೆ ಬರೆಯಲು ಪ್ರಯತ್ನಿಸುವೆ...:):)
ಕತ್ತಲಲ್ಲಿ ಹುಡುಕುತ್ತಿವೆ ಸಂತೈಸುವ ಕೈಗಳನ್ನು ಅವು ಸಿಗಲಾರದ ಜಾಗದಲ್ಲಿ...
ಎಲ್ಲರೂ ಹಾಗೇ
ಎಲ್ಲವನ್ನೂ ಹುಡುಕುವುದು ಸಿಗಲಾರದ ಜಾಗದಲ್ಲೇ...
ಅದೇ ಬದುಕಿನ ವಿಪರ್ಯಾಸ...
ಚೆನ್ನಾಗಿದೆ...
ಭಾವಗಳ ಗೊಂಚಲು : ಹೌದು, ಜೀವನವೇ ಹಾಗೆ!!
ಧನ್ಯವಾದಗಳು, ಹೀಗೆ ಭೇಟಿ ಕೊಟ್ಟು ಪ್ರತಿಕ್ರಿಯೆ ನೀಡುತ್ತಿರಿ:):)
ಕದಡಿದ ಮನಕೆ ಸಂತೈಸಲು ಇರುವರುಕೆಲವು
ಹಾಗೆ ಮತ್ತೆ ಮತ್ತೆ ಕದಡಿಸಲು ಇದೇ jeevanapayana
Post a Comment