![]() |
JP --power of youth--* |
ಇನ್ನೂ ಮುಗಿದಿಲ್ಲ ಕಷ್ಟದ ಕಲ್ಲು-ಮುಳ್ಳುಗಳ ಹಾದಿ,
ಎಲ್ಲಿ ನೋಡಿದರೂ ನನ್ನ ಕಡೆಯೇ ನಗುವ ಜನರ ಬೀದಿ..
ಅವರಿಗಿನ್ನೂ ಗೊತ್ತಿದ್ದಂತಿಲ್ಲ ಎಲ್ಲರ ಸಾವು-ನೋವು,
ತಿಳಿಯಲಿಲ್ಲ ಇನ್ನೂ ಎಲ್ಲರ ಬದುಕೂ ಇಷ್ಟಿಷ್ಟು ಬೇವು-ಬೆಲ್ಲ..
ಎಲ್ಲ ಕಡೆಯೂ ಎಲ್ಲರದ್ದೂ ನಾನಾ ವಿಧದ ಕಷ್ಟಗಳದ್ದೇ ಸಾಲು ಸಾಲು ಸಂತೆ,
ಮತ್ತೆ ಅವರಿಗೆ ಗೊತ್ತಿದ್ದಂತಿಲ್ಲ ಕಷ್ಟದ ತೆರೆಗೆ ಪರಿಹಾರ ನೋಟಿನ ಕಂತೆ ಕಂತೆ..
ಎಲ್ಲಿ ನೋಡಿದರಲ್ಲಿ ಅಪಹಾಸ್ಯ, ಕೊಲೆ, ಭ್ರಷ್ಟಾಚಾರ..
ತಿಳಿಯಲಿಲ್ಲ ಇನ್ನೂ ಈಗಾದರೂ ಸ್ವಲ್ಪ ಕಲಿಯಲು ಶಿಷ್ಟಾಚಾರ..
ಎಲ್ಲ ಕಡೆ ಎಲ್ಲರ ಜೋರಾದ ತೋರ್ಪಡಿಕೆಯ ಭರ್ಜರಿ ಕಾರು ಬಾರು..
ಜನಸಾಮಾನ್ಯರಿಗೆ ಇದೆಯಲ್ಲ ಮೊದಲಿನ ಹಳೆಯದೇ ''ಕಾರು''-''ಬಾರು''
ಇನ್ನಾದರೂ ನಿಲ್ಲಿಸಿ ದುಡ್ಡಿನ, ಕುಡಿತದ ಆಸೆಯ, ಬಟ್ಟೆಯ ಸಲುವಾಗಿ ವೋಟು,
ತಿಳಿಯಲಿ ಇನ್ನಾದರೂ, ಬರಲಿ ಓದಿದವರ ಹೊಸ ಬುದ್ಧಿವಂತ ತರುಣರ ಕೋಟು...!