Saturday, October 27, 2012

ನಿನ್ನದೇ ನೆನಪಿನ ಕರಿ ನೆರಳಾಗಿ ಯಾವತ್ತೂ ನನ್ನನ್ನೇ ಬೆಂಬತ್ತಲಿ..

Jp Bhat..


ಎಂದೆಂದಿಗೂ ಕಂಡೂ ಕಾಣದ ನಿನ್ನ ಕರಿ ನೆರಳು,
ಬಿಸಿಲ ಶಾಖಕ್ಕೆ ಸತ್ತು ಹೋಗಬಾರದೇಕೆ?
ಇರುವ ಮತ್ತೇರುವ ನಿನ್ನ ಪ್ರೀತಿಯ ಗುಂಗಲ್ಲೇ,
ಬದುಕಿದ್ದೂ ನನ್ನ ಪ್ರೀತಿ ಸಾಯಬಾರದೇಕೆ?

ಈಗಿರುವ ನನ್ನ ಜೀವನದ ಪ್ರೀತಿಯಷ್ಟನ್ನೂ ಬಸಿದು ಹೊಸೆದು,
ನಿನಗೆ ಕೊಟ್ಟಿರುವೆ ನನ್ನ ಅರ್ಧ ಜೀವವನ್ನೇ.
ಬರುವ ಮತ್ತಿನ್ಯಾರೋ ಹುಡುಗಿಗೆ ಕೊಂಚವಾದರೂ,
ಮನಸು ದೇಹವನ್ನು ಉಳಿಸಬಾರದೇಕೆ ಇನ್ನು ನನ್ನ ಜೀವನಕ್ಕೆ?

ಇದ್ದ ಅವೆಷ್ಟೋ ಅಷ್ಟೂ ನೆನಪುಗಳು ಸಿಹಿ ಕಹಿಗಳಲ್ಲಿ,
ಇನ್ನಾದರೂ ಬೆಳಕಿನಿಂದ ಕತ್ತಲೆಗೆ ಸರಿಯಲಿ..
ಇರುವ ನಿನ್ನ ಮೇಲಿನ ಭಾವನೆಗಳೆಲ್ಲ ನೀರಾಗಿ ಹರಿದು ಆರಿ,
ಮತ್ತೆ ನಿನ್ನದೇ ನೆನಪಿನ ಕರಿ ನೆರಳಾಗಿ ಯಾವತ್ತೂ ನನ್ನನ್ನೇ ಬೆಂಬತ್ತಲಿ..

Wednesday, June 13, 2012

''ಮರೆತರೂ ನೆನಪಾಗುವ ಮುನ್ನ''

JP bhat...



ಭಾವಗಳ ಬಂಧನದಲ್ಲಿ ಕೊರಗಿ ಸೊರಗಿದೆ ಚಿಂತನೆ,
ತಣಿಯಲು ಬೇಕು ಚೈತನ್ಯದ ನವಜೀವನ..
ಮುಸುಕಲ್ಲೇ ನಸುಕ ತರಿಸುವ ತಿಳಿಯಾದ ಕಿರಣ,
ಬಯಸಿದೆ ಕಂಪ ಸೂಸುವ ಈಗಿನ ಹೊಸ ಸುಮ...

ಬದುಕೆಂದರೆ ಏನೇನೋ ಅಂದರು ತಿಳಿದ ಪ್ರಬುದ್ಧರು,
ತಿಳಿಯದ ನಾವು ಏನೆಂದುಕೊಂಡರೂ ಸಣ್ಣವರು..
ಮಾಡಿದ್ದೊಂದೇ ತಪ್ಪು, ತಿಳಿಯದೇ ನೋಡಿದ ಅವಳ ಕಣ್ಣು,
ಆಮೆಲೇನಾಯಿತೋ ಗೊತ್ತಿಲ್ಲ, ಆದದ್ದೆಲ್ಲ ವಿಸ್ಮಯ..!!

ಮತ್ತೆ ಬದುಕಲ್ಲಿ ಪುಟಿದು ಮೇಲೆದ್ದೇಳುವ ಕನಸಿನ ಆಶಯ,
ಹೊಸದಾಗಿ ಹಸಿರಾಗಿ ಚಿಗುರಲು ಬಿಡುವಳೋ ಅವಳು..?
ಒಂದೇ ಒಂದು ಸಲಕ್ಕೆ ಅನಾಮತ್ತಾಗಿ ಸೇರಿದ ತೆಕ್ಕೆ, ಮುತ್ತು...
ಇನ್ನೆಲ್ಲಿ ಈ ಪುಟ್ಟ ಸತ್ತ ಮನಕ್ಕೆ ಶಾಂತಿ ಮತ್ತು ನೆಮ್ಮದಿ.........??!