![]() |
JP --power of youth--* |
ಇನ್ನೂ ಮುಗಿದಿಲ್ಲ ಕಷ್ಟದ ಕಲ್ಲು-ಮುಳ್ಳುಗಳ ಹಾದಿ,
ಎಲ್ಲಿ ನೋಡಿದರೂ ನನ್ನ ಕಡೆಯೇ ನಗುವ ಜನರ ಬೀದಿ..
ಅವರಿಗಿನ್ನೂ ಗೊತ್ತಿದ್ದಂತಿಲ್ಲ ಎಲ್ಲರ ಸಾವು-ನೋವು,
ತಿಳಿಯಲಿಲ್ಲ ಇನ್ನೂ ಎಲ್ಲರ ಬದುಕೂ ಇಷ್ಟಿಷ್ಟು ಬೇವು-ಬೆಲ್ಲ..
ಎಲ್ಲ ಕಡೆಯೂ ಎಲ್ಲರದ್ದೂ ನಾನಾ ವಿಧದ ಕಷ್ಟಗಳದ್ದೇ ಸಾಲು ಸಾಲು ಸಂತೆ,
ಮತ್ತೆ ಅವರಿಗೆ ಗೊತ್ತಿದ್ದಂತಿಲ್ಲ ಕಷ್ಟದ ತೆರೆಗೆ ಪರಿಹಾರ ನೋಟಿನ ಕಂತೆ ಕಂತೆ..
ಎಲ್ಲಿ ನೋಡಿದರಲ್ಲಿ ಅಪಹಾಸ್ಯ, ಕೊಲೆ, ಭ್ರಷ್ಟಾಚಾರ..
ತಿಳಿಯಲಿಲ್ಲ ಇನ್ನೂ ಈಗಾದರೂ ಸ್ವಲ್ಪ ಕಲಿಯಲು ಶಿಷ್ಟಾಚಾರ..
ಎಲ್ಲ ಕಡೆ ಎಲ್ಲರ ಜೋರಾದ ತೋರ್ಪಡಿಕೆಯ ಭರ್ಜರಿ ಕಾರು ಬಾರು..
ಜನಸಾಮಾನ್ಯರಿಗೆ ಇದೆಯಲ್ಲ ಮೊದಲಿನ ಹಳೆಯದೇ ''ಕಾರು''-''ಬಾರು''
ಇನ್ನಾದರೂ ನಿಲ್ಲಿಸಿ ದುಡ್ಡಿನ, ಕುಡಿತದ ಆಸೆಯ, ಬಟ್ಟೆಯ ಸಲುವಾಗಿ ವೋಟು,
ತಿಳಿಯಲಿ ಇನ್ನಾದರೂ, ಬರಲಿ ಓದಿದವರ ಹೊಸ ಬುದ್ಧಿವಂತ ತರುಣರ ಕೋಟು...!
4 comments:
ಚೆನ್ನಾಗಿದ್ದೋ ಜೇಪಿ.. ಎಲ್ಲಿಗೋದ್ಯಾ ಪುಣ್ಯಾತ್ಮ .. ? ? ಬರೀತಿರೋ..
ಪ್ರಶಸ್ತಿ:
ಥ್ಯಾಂಕ್ಸ್..
ಬರೀತಾ ಇರ್ತಿ. ಬರ್ದಿದ್ನಾ ಟೈಪ್ ಮಾಡಿ ಹಾಕಲೇ ಟೈಮ್ ಇಲ್ಲೇ:(:(
ಪ್ರೋತ್ಸಾಹಕ್ಕೆ ಧನ್ಯವಾದಗಳು.
ಜೇಪಿ....ಚನ್ನಾಗಿದೆ...ಸಮಾಜದ ತೋರಿಕೆ ಆಡಂಬರ..ಮೋಸ ವಂಚನೆ ..ಎಲ್ಲಾ, ಹೌದು ಇವುಗಳ ಭಾವ ಮನದಿಂದ ಹೊರದೂಡಿ ಸಕಾರಾತ್ಮಕ ಮನಸ್ಥಿತಿಯಿಂದ ಮುನ್ನಡೆಯೋಣ...ದಾರಿ ಖಂಡಿತಾ ಕಾಣುತ್ತೆ...ನಿಮ್ಮ ಬ್ಲಾಗ್ ಬರಹಗಳಿಗೆ ಶುಭವಾಗಲಿ.
ಜಲನಯನ :: ಖಂಡಿತಾ :)
ಎಲ್ರೂ ಪ್ರಯತ್ನ ಪಟ್ರೆ ಈ ಜಗತ್ತಲ್ಲಿ ಆಗ್ದೆ ಇರೋದು ಯಾವ್ದ್ ಇದೆ ಹೇಳಿ ??
ನೋಡಿ ಓದಿ ಕಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು :)
Post a Comment