Thursday, January 13, 2011

ಹಾಗಿದ್ದ ನೀನು.., ಈಗ ಹೀಗಾದ ನೀನು? ನೀನು ನಿಜವಾಗಲೂ ನೀನೇನಾ??

"ಅನಿಸಿಕೆ - ಮನಸಿನ ಹೂಗುಚ್ಹ "- ಕಹಿ ಕಹಿ ನೆನಪುಗಳು :(

ಮುರಿದ ಮನಸು, ಹಾಳಾದ ಕನಸು :(

ಈ ಜೀವನ ಅನ್ನೋದೇ ಹೀಗೆ ಅನ್ಸತ್ತೆ ಅಲ್ವಾ?"
ಕೆಲವೊಂದು ಸಲ ತೀರಾ ಪರಿಚಿತ, ಇನ್ನೊಮ್ಮೆ ಅಪರಿಚಿತ.. ನಾವು ಯಾವುದೇ  ಮೂಲೆಯಿಂದ ಯಾವ ಕೋನದಲ್ಲಿ ಹೇಗೆಯೇ ನೋಡಿದರೂ, ನಮ್ಮ ಜೀವನವೇ ನಮಗೆ ತೀರಾ ವಿಚಿತ್ರವೆನ್ನಿಸತೊಡಗುತ್ತದೆ.. [ನನಗೆ ನನ್ನ ಜೀವನ..!]
ಹುಟ್ಟಿನಿಂದ ಚಿಕ್ಕಂದಿನಲ್ಲಿ ಅಪ್ಪ ಅಮ್ಮನ ಮಡಿಲಲ್ಲಿ ಬೆಳೆದ ನಮಗೆ ಪ್ರೀತಿ, ಹಸಿವು ಇವೆರಡನ್ನು ಬಿಟ್ಟು ಬೇರೆಯವರ ಬಗೆಗೂ ಜ್ಞಾನವಿಲ್ಲದಂತೆ ಕುರುಡು ಬದುಕನ್ನು ನಡೆಸಿರುತ್ತೇವೆ.. ಆಮೇಲೆ ನಿಧಾನವಾಗಿ ಶಾಲೆ, ಹೈ ಸ್ಕೂಲ್ , ಕಾಲೇಜ್ ,ಸ್ನೇಹಿತರು, ಪ್ರೀತಿ, ಇವೆಲ್ಲ ಬರುಬರುತ್ತಾ ನಮ್ಮನ್ನೇ ಅಪ್ಪ ಅಮ್ಮಂದಿರಿಗಿಂತ ಹೆಚ್ಚಾಗಿ ಆಕ್ರಮಿಸಿಕೊಂಡುಬಿಟ್ಟಿರುತ್ತವೆ .. ಮೊದಲಿಗೆ ಶಾಲೆಗೆ ಹೋಗಬೇಕಾದ ಸಂದರ್ಭದಲ್ಲಿ ತೀರಾ ಅಪ್ಪ ಅಮ್ಮನನ್ನೇ ನೆಚ್ಚಿಕೊಂಡಿರುವ ನಾವು ಎಲ್ಲದಕ್ಕೂ ಅವರನ್ನೇ ಅವಲಂಬಿಸಿರುತ್ತೇವೆ.. ಬರುಬರುತ್ತಾ ನಮಗೆ ಅವರೇ, ಅವರ ಮಾತೇ ಆಗುವುದಿಲ್ಲ...ಸುಮ್ಮ ಸುಮ್ಮನೆ ಮಾತು, ಜಗಳ , ಕೋಪ, ಹುಸಿ ಮುನಿಸು ಎಲ್ಲವೂ... ಮನೆಯಲ್ಲಿ ಮಾತ್ರ !! ಆದರೂ ಹುಟ್ಟಿದ ಮನೆ ಎಂದರೆ ಏನೋ ಸೆಳೆತ, ಆಕರ್ಷಣೆ , ಪ್ರೀತಿ...


ಜೀವನದ ಒಂದೊಂದೇ ಹಂತವನ್ನು ದಾಟುತ್ತಿರುವ, ದಾಟಿದ ನಮಗೆ ಯಾವುದೋ ಕಾಲಘಟ್ಟದಲ್ಲಿ ತೀರಾ ಪ್ರೇಮವೂ ಅಲ್ಲದ, ಆ ಕಡೆ ಸ್ನೇಹಿತ/ಸ್ನೇಹಿತೆಯೂ ಅಲ್ಲದ, ಅದಕ್ಕಿಂತ ಹೆಚ್ಚಿನವಾದ ಬೆಚ್ಚನೆಯ ಸಂಬಂಧವೊಂದು ಕೆಲವರಿಗೆ ಕೆಲವರ ಜೊತೆ ಬೆಳೆದು ಬಂದು ಬಿಟ್ಟಿರುತ್ತದೆ.. ಆ ಸಂಧರ್ಭದಲ್ಲಿ ಎಲ್ಲೋ ಕೇಳಿದ ಸಾಲುಗಳು ನೆನಪಿಗೆ ನಿಮಗೂ ಬಂದರೂ ಬರಬಹುದು...  "ಗೆಳತೀ ಎನ್ನಲು ಅದಕೂ ಎತ್ತರ, ಪ್ರೇಮಿ ಎನ್ನಲು ಅದಕೂ ಹತ್ತಿರ...".. ಹಾಗೆಯೇ ಆ ತರಹದ ಒಂದು ಚಿಕ್ಕ ಘಟನೆಯನ್ನು ನಾನು ಇಲ್ಲಿ ಹೇಳಲು ಹೊರಟಿರುವುದು.........


ಹ್ಮ್......., ಬಹಳ ಹಿಂದೇನಲ್ಲ ನಾನು ಮತ್ತು ಅವಳು  ಯಾವಾಗಲೂ ಒಟ್ಟೊಟ್ಟಿಗೆ ಇರುತ್ತಿದ್ದ ಕಾಲ ಅದು.. ಒಟ್ಟಿಗೆ ಇದ್ದಾಗಿನ ಆ ಸೊಬಗು, ಹರಟೆ ಹೊಡೆಯುತ್ತಿದ್ದ ಆ ರೀತಿ, ಕಿತ್ತಾಡುತ್ತಿದ್ದ ಆ ಪರಿ, ಎಲ್ಲದಕ್ಕೂ ಜಗಳ, ಹುಸಿ ಮುನಿಸು...ಇವೆಲ್ಲವೂ ಇನ್ನೂ ನನಗೆ ಕಣ್ಣಿಗೆ ಕಟ್ಟಿದ ರೀತಿ ಹಸಿರು ಪಾಚಿಯ ತರಹ ನನ್ನ ಮನದಲ್ಲೇ ಇದೆ...ಮತ್ತು ಯಾವಾಗಲೂ ಇರುತ್ತದೆ... ನಾವು ಕಿತ್ತಾಡದೇ ಇದ್ದ ದಿನವೇ ಇಲ್ಲ..ಪ್ರೀತಿ ಮಾಡಿಕೊಂಡು ರಾಜಿಯಾಗಿ ಮತ್ತದೇ ಶುಭ ಮುಂಜಾವು , ಸಿಹಿ ರಾತ್ರಿ ಹೇಳಿಕೊಳ್ಳದ ದಿನವೇ ಇಲ್ಲ ಎಂದರೆ ಸುಳ್ಳು...ಹಾಗೆ ದಿನ ಕಳೆದ ಉದಾಹರಣೆಯೇ ಇಲ್ಲ..........


ಎಲ್ಲೋ ಇದ್ದ ನಾನು, ಮತ್ತೆಲ್ಲೋ ಇದ್ದ ನೀನು..ಇಬ್ಬರ ಪರಿಚಯವೂ ತುಂಬಾ ಆಕಸ್ಮಿಕ..ನಿನಗೆ ನೆನಪಿರಬಹುದು ಎಲ್ಲಿ ಎಂದು??.. ಅದು ಒಂದು ಮದುವೆ ಮನೆಯ ಊಟದ ಪಂಕ್ತಿ.. ನಾನು ಮೊದಲು ನೋಡಿದ್ದು ನಿನ್ನ ಬೆನ್ನು! ನೀಲಿ ಚೂಡಿದಾರ್ ನಲ್ಲಿ ನೀನು ಫಳ ಫಳ ಮಿಂಚುತ್ತಿದ್ದೆ.. ನನ್ನ ಸ್ನೇಹಿತ ನಿನ್ನನ್ನು ತೋರಿಸಿ ಅಲ್ಲಿ ನೋಡೋ ಮಗಾ ಎಂದ. ನಾನು ಹಿಂಜರಿಯುತ್ತಲೇ ನಿನ್ನ ನೋಡಿದೆ.[ಯಾಕೆಂದರೆ ಮದುವೆಗೆ ನನ್ನ ಅಪ್ಪನೂ ಬಂದಿದ್ದ..ನಿನ್ನನ್ನು ದಿಟ್ಟಿಸಿ ನೋಡಿದ್ದರೆ ನಾನು ಮನೆಯಲ್ಲಿ ಅಪ್ಪನ ಕೆಂಗಣ್ಣಿನ ನೋಟಕ್ಕೆ ಬಲಿಯಾಗಿ ನಿಮ್ಮ ಮನೆ ಅಂಗಳದಲ್ಲೇ ಆ ದಿನ ರಾತ್ರಿಯೇ ಬಿದ್ದಿರುತ್ತಿದ್ದೆ..] ನೀನೂ ನನ್ನನ್ನು ಆಗಲೇ ನೋಡಿದ್ದೆಯಾ?  ಗೊತ್ತಿಲ್ಲ.. ಆಗಲೇ ದೇವರಿಗೆ ಗೊತ್ತಾಗಿರಬೇಕು, ಇವರಿಬ್ಬರ ಗೆಳೆತನ ಹೆಚ್ಚು ದಿನ ಬಾಳಿಕೆ ಬರಲಾರದು ಎಂದು, ಯಾಕೆಂದರೆ ನಾನು ಮೊದಲು ನೋಡಿದ್ದೇ ಹಿಂದೆ,.. ನಿನ್ನ ಬೆನ್ನನ್ನು!! ನೀನು ಮೊದಲ ಪರಿಚಯದ ನೋಟದಲ್ಲೇ ಮೌನಿಯಾಗಿರುವುದನ್ನು, ಅದನ್ನು ಕಂಡ ನಾನು ಆಗಲೇ ದಂಗು ಬಡಿದಿದ್ದೆ...


ಆಮೇಲೆ ನಡೆದಿದ್ದು ಎಲ್ಲವೂ ಭಯಂಕರ ಆಶ್ಚರ್ಯ ಮತ್ತು ಜಾದೂಗಳ ಮೇಲೆಯೇ ಎಂದರೆ ಬಹುಶ ತಪ್ಪಾಗಲಾರದು ಅಲ್ವೇನೆ? ಮತ್ತದೇ ಹಳೇ ಪರಿಚಯ, ನಗು, .. ದಿನ ಕಳೆದಂತೆ ನಮ್ಮಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ಮೊಬೈಲ್ ನಂಬರ್ ವಿನಿಮಯ ಮಾಡಿಕೊಳ್ಳುವ ಹಂತಕ್ಕೆ ಹೋಯ್ತು.. ಆಮೇಲಾಮೇಲೆ ರಜಾ ದಿನಗಳಲ್ಲಿ ನಿನ್ನ ಮೆಸೇಜ್ ಗೆಂದೇ ಗುಡ್ಡಕ್ಕೆ ನಾನು ಮೊಬೈಲ್ ತಂದು ಆ ಇರೋ ಬರೋ ಎರಡೋ ಮೂರೋ ಕಡ್ಡಿಯಲ್ಲೇ ನಿನ್ನ ಮೆಸೇಜ್ ಗೋಸ್ಕರ ಕಾದು ಕಾದು, ನಿನ್ನ ಮೆಸೇಜ್ ಒಂದು ಬಿಟ್ಟು ಮಿಕ್ಕವರೆಲ್ಲರ ಮೆಸೇಜ್ ಬಂದಾಗ ಆಗುತ್ತಿದ್ದ ಬೇಜಾರು, ಕೊನೆಗೆ ಇಳೀ ಸಂಜೆ ಹೊರಡುವ ವೇಳೆಯಲ್ಲಿ ಅಮೃತಘಳಿಗೆಯಂತೆ  ನಿನ್ನ ಹೆಸರಿನಿಂದ ಕೂಡಿದ ಒಂದೇ ಒಂದು ಮೆಸೇಜ್ ''I really miss you kano....-S'' ಅಂತ ಒಂದೇ ಒಂದು ಸಂದೇಶ ಬಂದರೂ ಅದು ನನ್ನನ್ನು ಎಷ್ಟು ಖುಷಿಗೆ ತಳ್ಳುತ್ತಿತ್ತೆಂದರೆ ಅದೇ ರಾತ್ರಿ ಹೊತ್ತಿನಲ್ಲಿ ಕಾಡು  ದಾರಿಯಲ್ಲಿ, ಯಾವುದೇ ಹೆದರಿಕೆಯಿಲ್ಲದೆ ಒಬ್ಬನೇ ಕೋಟಿಗಟ್ಟಲೆ ಮೈಲಿ ಬೇಕಾದರೂ ನಡೆಯುವಷ್ಟು, ಹಗಲು ಹೊತ್ತಿನಲ್ಲೇ ಎಲ್ಲರ ಎದುರೇ ನಿನ್ನ ಕೆನ್ನೆಗೆ ಹೂ ಮುತ್ತು ಕೊಟ್ಟಷ್ಟು...ಯಾಕೆಂದರೆ ನನ್ನ ಕೈ ನಲ್ಲಿ ನೀನು ಬೆಚ್ಚಗೆ ಕುಳಿತಿರುತ್ತಿದ್ದೆ ಎಂಬ ಧೈರ್ಯ..! ನಾನಾಗ ಪ್ರಪಂಚದ ತುಂಬಾ ಎತ್ತರದ ಶಿಖರದ ಮೇಲೆ ಅತ್ಯಂತ ಸಂತೋಷದಿಂದ ಇರುವ ವ್ಯಕ್ತಿಯಾಗಿ ನಿಲ್ಲುತ್ತಿದ್ದೆ.. ನೀನಾಗ ಎಲ್ಲಿ ಏನು ಮಾಡುತ್ತಿರುತ್ತಿದ್ದೆಯೋ..?? ಇಷ್ಟೆಲ್ಲಾ ಆಗುತ್ತಿದ್ದುದು ಬರೀ ಒಂದೇ ಒಂದು ನಿನ್ನ ಒಂದು ಸಾಲಿನ ಮೆಸೇಜ್ ನಿಂದ...

ನಿನಗೂ ನೆನಪಿರಬಹುದು..ನಾನು ಬರಲೆಂದು ನೀನು ಕಾಯ್ದಿರಿಸುತ್ತಿದ್ದ ಆ ಸಂಜೆಯ ಬಸ್ಸಿನ ಸೀಟು, ನೀನು ಕಂಡಕ್ಟರ್ ಜೊತೆ ಜಗಳ  ಮಾಡಿ ಮಾಡಿ ನನಗೆಂದೇ ಸೀಟು ಹಿಡಿದಿಡುತ್ತಿದ್ದ ರೀತಿ, ಈಗಲೂ ನೆನೆಸಿಕೊಂಡರೆ ನನಗೆ ನಗು ಬರುತ್ತದೆ.. ಗೆಳತೀ, ನಗುವಿನ ಜೊತೆಗೆ ಅಳುವೂ ಕೂಡಾ..ಆದರೆ ಹೇಳಲು ನೀನೇ ಇಲ್ಲ...ನನ್ನ ಅಕ್ಕನ ಮನೆಯ ಮದುವೆಗೆ ಬಂದ ನೀನು ಅಲ್ಲಿ ಮತ್ತಷ್ಟು ಇನ್ನಷ್ಟು ಸಾಕಷ್ಟು ಪರಿಚಯವಾದೆ.. ಹತ್ತಿರವಾದೆ.. ಸ್ನೇಹ ಮತ್ತಷ್ಟು ಗಟ್ಟಿಯಾಗಿತ್ತು.. ನಮ್ಮಿಬ್ಬರ ಮಧ್ಯೆ ಬಿರುಕು ಆಗಲೇ ಬಿಡಲು ಆರಂಭಿಸಿತ್ತು... ನನ್ನ ಮನದಲ್ಲೆಲ್ಲೋ ನಿನ್ನ ಬಗ್ಗೆ ಯಾವುದೋ ಒಂದು ಭಾವನೆ ಎಲ್ಲೋ ಏನೋ ಆಗಿ ಸುಳಿದಾಡುತ್ತಿತ್ತು...


ನನ್ನ ಮನೆ ನಿನ್ನ ಮನೆ ಹತ್ತಿರ, ಹೆಚ್ಚು ಕಮ್ಮಿ ಒಂದೇ ಊರಾಗಿದ್ದರಿಂದ ನಮ್ಮ ಮನೆ, ಮನೆಯವರಿಗೂ ತುಂಬಾ ಪರಿಚಯವಿತ್ತು.. ನಮ್ಮ ಮನೆಗೆ ನೀನು ಬಂದಿದ್ದೆ, ಕೆಲವು ಸಾರಿ... ಆದರೆ ನಿಮ್ಮ ಮನೆಗೆ ನಾನು ಒಂದು ಬಾರಿಯೂ ಬರಲು ಕೊನೆಗೂ ಸಾಧ್ಯವಾಗಲೇ ಇಲ್ಲ..!! ಯಾಕೆಂದು ನಿನಗೂ ಗೊತ್ತು.. ನನಗಂತೂ ಗೊತ್ತಿರಲೇ ಬೇಕು ಅಲ್ವೇನೆ??
ನೀನು ಆಗಾಗ ಫೋನಿನಲ್ಲಿ ಮಾತನಾಡುತ್ತಿದ್ದ ರೀತಿ, ಆ ತರಲೆ, ಎಲ್ಲವೂ ನನ್ನ ಕಿವಿಯಲ್ಲಿ ಇನ್ನೂ ಹಾಗೇ ನಿಂತಿವೆ..ಆಗಾಗ ಬಂದು ನನ್ನನ್ನೇ ಅಣುಕಿಸಿ ನಗುತ್ತಿವೆ...ನಾನು ಮಾತ್ರ ಆಗ ಮೌನಿಯಾಗುತ್ತೇನೆ.. ನಿನಗೆ ಯಾರಾದರೂ ಫೋನ್  ಮಾಡಿ ಮಾತನಾಡದೆ ಇದ್ದರೆ ನೀನು ಅದು ನಾನೇ ಎಂದು ತಿಳಿದು ಮಾತನಾಡು ಮಾತನಾಡು ಎಂದು ಜೋರಾಗಿ ಕಿರುಚಿ ನನ್ನ ಹೆಸರು ಹೇಳಿ ನನ್ನ ಹೆಸರಿನಲ್ಲಿ ಅವರಿಗೆ ಬೈದು, ಆಮೇಲೆ ಅವರು ನಿನಗೆ ಪದೇ ಪದೇ ನನ್ನ ಹೆಸರು ಹೇಳಿ ತೊಂದರೆ ಕೊಟ್ಟಿದ್ದು, ಕಾಡಿಸಿದ್ದು ಯಾವುದಾದರೂ ಒಂದಾದರೂ ನೆನಪಿದ್ಯೇನೆ ನಿಂಗೆ?

ನಿನಗೆ ನಾವಿಬ್ಬರೂ ಕ್ಯಾಂಪ್ ಗೆ ಹೋಗಿದ್ದು ನೆನಪಿರಬಹುದು..ನನಗೆ ವಾರ ದಿನಾಂಕ ಸಮಯವೂ ಕೂಡ ನೆನಪಿದೆ..ಆದರೆ ಅದು ಈಗ ಇಲ್ಲಿ ಬೇಡ.. ಆ ಕ್ಯಾಂಪಿನಲ್ಲಿ ಆ ರಾತ್ರಿಯ ಚಳಿಯಲ್ಲಿ ನಾವು ಮಾಡಿದ ಬೆಳದಿಂಗಳ ಊಟ, ಆಡಿದ ಆಟ, ಮಾಡಿದ ತಮಾಷೆ, ರಾತ್ರಿಯಿಂದ ಮಧ್ಯರಾತ್ರಿಯ ವರೆಗೆ ನೋಡಿದ ಆ ಯಕ್ಷಗಾನ , ಒಂದಾ ಎರಡಾ?? ಅದೆಲ್ಲ ಮರೆಯಲಿ ಅಂದರೂ ಹೇಗೆ ಮರೆಯಲಿ, ನೀನೇ ಹೇಳು.. ಮರುದಿನ ಮತ್ತದೇ ಶಾಲೆಯಲ್ಲಿ ಅದೇ ಮರದ ಬೆಂಚಿನ ಮೇಲೆ ಒಂದೇ ಒಂದು ಚಿಕ್ಕ ಹೊದಿಕೆಯೂ ಇಲ್ಲದೇ ಮಲಗಿ ಬೆಳಿಗ್ಗೆ ಮಾಡಿದ್ದು, ನೀವೆಲ್ಲರೂ ನಿಮ್ಮ ನಿಮ್ಮ ಗೆಳತಿಯರ  ಮನೆಗೆ ಹೋಗಿ  ಬೆಳಿಗ್ಗೆ ಬೆಚ್ಚಗೆ ಬಂದು ಚಳಿಯಲ್ಲಿ ನಡುಗುತ್ತಿರುವ ನಮಗೆ ತಮಾಷೆ ಮಾಡಿದ್ದು ಇವತ್ತಿಗೂ ನನಗೆ ಚೆನ್ನ! ಅದನ್ನು ಎಂದಾದರೂ ಮರೆಯಲು ಸಾಧ್ಯಾನ ? ನೀನೇ ಹೇಳು..ಪಾಪ ನೀನಾದರೂ ಏನು ಮಾಡುತ್ತಿದ್ದೆ? ಯಾಕೆಂದರೆ ನಾವು ಇದ್ದಿದ್ದು ಬರೋಬ್ಬರಿ 40 ಜನ, ನೀವು 22 ಜನ ಮಾತ್ರ.........

ಮತ್ತದೇ ಗೆಳೆತನ ಮತ್ತಷ್ಟು ವೇಗ ಪಡೆದಿತ್ತು.. ಆದರೆ ಎಲ್ಲಿ ಎಡವಿತೋ ಗೊತ್ತಿಲ್ಲ.. ಒಂದು ದಿನ ನೀನು ಕಳಿಸಿದ ಮೆಸೇಜ್ ಇನ್ನೂ ನನಗೆ ನೆನಪಿದೆ....''ನಂಗೆ ನಿನ್ ಕಂಡ್ರೆ ರಾಶಿ  ಚೋಲೋವಾ, ಇಷ್ಟಾ, ನಿನ್ ಸಂತೀಗೆ ಚಾಟ್ ಮಾಡದು ಅಂದ್ರೆ ನಂಗೆ ಖುಷಿ....."

ಇಷ್ಟು ಹೇಳಿ ಆವತ್ತೇ ನೀನು ಶುರು ಮಾಡಿದ್ದೆ.. ಏನು ಅಂತ ನಂಗೂ ಗೊತ್ತಿಲ್ಲ... ಆ ಮೆಸೇಜ್ ನಾ ನಾನು ಮೊನ್ನೆ ಮೊನ್ನೆ ವರೆಗೂ ಇಟ್ಟಿದ್ದೆ.. ಯಾಕೋ ನಿನ್ನ ಮೇಲಿನ ಕೋಪ ತಡೆಯಲಾಗದೆ ಯಾವುದೋ ಕಾರಣಕ್ಕೆ ಅದನ್ನು ಇವತ್ತು ಡಿಲೀಟ್ ಮಾಡಿದೆ.. ಅದಕ್ಕೆ ಕ್ಷಮೆಯಿರಲಿ... ಕ್ಷಮಿಸ್ತೀಯ ಅಲ್ವಾ? ಆದರೆ ನೀನು ಅ ಮೆಸೇಜ್ ನ ಕಳ್ಸಿದ್ದು 27-11-2007  ರ ರಾತ್ರಿ 9.40 ರ ಹೊತ್ತಿನಲ್ಲಿ.... ನಾನು ಅದನ್ನ ಡಿಲೀಟ್ ಮಾಡಿದ್ದು 2011  ರಲ್ಲಿ... ನಗು ಬಂತಾ ?? ಆದರೂ ಇದು ಸತ್ಯ!


ಇಷ್ಟೆಲ್ಲಾ ಆಗಿಯೂ ನೀನು ನನಗೆ ಹೀಗೇಕೆ ಮಾಡಿದೆ? ನಿನಗೆ ನಿನ್ನಲ್ಲೇ ಕೇಳಿಕೋ ಈ ಪ್ರಶ್ನೇನಾ.. ಉತ್ತರ ಅಪ್ಪಿ ತಪ್ಪಿಯೂ ಎಲ್ಲಿಯಾದರೂ ಸಿಕ್ಕರೆ ದಯವಿಟ್ಟು ನನಗೆ ಹೇಳು.. ನೀನು ನನ್ನ ಹತ್ತಿರ ಮಾತನಾಡುವುದಿಲ್ಲವೆಂದು  ನನಗೆ ಗೊತ್ತು.. ಕಡೇ ಪಕ್ಷ ನಿನ್ನ ಸ್ನೇಹಿತೆಯ ಹತ್ತಿರವಾದರೂ ಹೇಳಿ ಕಳಿಸು.. ನೀನು ನಿಜವಾಗಲೂ ಹೀಗೆ ಇದ್ದೀಯ ಅಥ್ವಾ ನಟಿಸುತ್ತಿರುವೆಯಾ  ಎಂದು ನನಗೆ ಅನುಮಾನ ಶುರುವಾಗಿದೆ.. ನೀನು ಇದ್ದೂ ಮಾತನಾಡದೆ, ಮೌನದಲ್ಲೇ ಕೊಲ್ಲುವಂತೆ.. ನಿನಗೆ ಗೊತ್ತಾ? ಈಗಲೂ ನನಗೆ,  ನಾನು ಬಸ್ಸಿನಲ್ಲಿ ಕೂತಾಗ ಆ ಸೀಟ್ ಮತ್ತು ನಿಮ್ಮ ಮನೆಯ ಬಸ್ ಸ್ಟಾಪ್ ನಲ್ಲಿ ನೀನಿದ್ದಂತೆ ಭಾಸವಾಗುತ್ತದೆ.. ನನಗೆ ಆಗಲೇ ಅನುಮಾನ ಶುರುವಾಗಿತ್ತು..ಆದರೆ ನನ್ನ ಮತ್ತು ನಿನ್ನಲ್ಲಿ ಇಂಥಹ ಪ್ರಶ್ನೆ ಬೇಡ ಮತ್ತು ಅದು ಸರಿಯೂ ಅಲ್ಲ ಎಂದು ನಾನು ಬಲವಾಗಿ ನಂಬಿದ್ದೆ.. ಬಹುಶ ನಾನು ಮಾಡಿದ ತಪ್ಪು ಅಲ್ಲೇ ಅಂತ ಕಾಣುತ್ತೆ..ನನಗೆ ಈಗ ಅನ್ನಿಸ್ತಿದೆ..ಆದರೆ ಆ ದಿನ ಬಂದೇ ಬಿಟ್ಟಿತು... ಅವನೂ ಬಂದೇ ಬಿಟ್ಟಾ...!!! ನೀನು ಪ್ರೀತಿಸುವ, ನಿನ್ನ ಪ್ರೀತಿಸುವ? ಗೊತ್ತಿಲ್ಲ? ನಿನಗೆ ಆ ಹೃದಯ ಬಂದೇ ಬಿಟ್ಟಿತು,,. ನನಗೆ ಏನಾಯಿತು ಗೊತ್ತಿಲ್ಲ...ನೀನಂತೂ ಕೇಳದೆಯೇ ಹೋಗಿಬಿಟ್ಟೆ, ಇವತ್ತಿಗೂ....


ಆಮೇಲೆ ನಿನ್ನ ಹತ್ತಿರವಲ್ಲದಿದ್ದರೂ ಮತ್ತದೇ ನಿನ್ನ ಗೆಳತಿ 'S' ಹತ್ತಿರ ಸುಮಾರು ಬಾರಿ ಕೇಳಿದ್ದೆ...ಅವಳು ಹಾರಿಕೆಯ ಉತ್ತರ ಕೊಟ್ಟು, ಗೊತ್ತಿದ್ದರೂ ಗೊತ್ತಿಲ್ಲವೆಂಬಂತೆ ಎಷ್ಟು ಚೆನ್ನಾಗಿ ನಟಿಸಿದ್ದಳು.. ನೀನೂ ಅವಳಿಗೆ ಎಷ್ಟು ಚೆನ್ನಾಗಿ ಹೇಳಿಕೊಟ್ಟಿರಬೇಕಲ್ವಾ? ಅವೆಲ್ಲ ಇರಲಿ ಬಿಡು..ನೀನು ನನಗೆ ಹೇಳದೆಯೇ ಆದ ಕಥೆಗಳಿವು.. ನಾನು ಈಗ ಅವನ್ನೆಲ್ಲ ನಿನಗೆ ಹೇಳಬೇಕಾಗಿಯೂ ಇರಲಿಲ್ಲ ಕೂಡ.. ಏಕೆಂದರೆ ಆ ಹೊತ್ತಿಗೆ ನಾನು ನಿನಗೆ ಏನೂ ಆಗಿರಲಿಲ್ಲ ಅಲ್ವೇನೆ? ಇವೆಲ್ಲವೂ ಆಗಿ ಸುಮಾರು ಐದು ವರ್ಷಗಳೇ ಆಗುತ್ತಾ ಬಂದವು.. ಯಾಕೋ ಗೊತ್ತಿಲ್ಲ ಇವತ್ತು ನೀನು ನೆನಪಾದೆ... ಬಿಟ್ಟೂ ಬಿಡದೆ ಸುರಿವ ಸಂಜೆ ತುಂತುರು ಸೋನೆ ಮಳೆಯ ತರಹ ನೆನಪಿಗೆ ಬರುತ್ತಲೇ ಇದೀಯಾ.. ಯಾರಲ್ಲಿಯೂ ಹೇಳಿರದ ಈ ಮಾತುಗಳು ಇಂದು ಬರಹದ ರೂಪದಲ್ಲಿ ಇಲ್ಲಿ ತೆರೆದುಕೊಳ್ಳುತ್ತಿದೆ.. ಅದಕ್ಕೂ ನೀನೇ ಕಾರಣವಲ್ವೇನೆ..?? ಮಾತಾಡು.. ಹೌದು,,. ನೀನೇ..!!


ನನಗೆ ಈಗಲೂ ಆಶ್ಚರ್ಯವಾಗುವ ಅಂಶವೇನೆಂದರೆ  ಆಗ ಹಾಗಿದ್ದ ನೀನು.., ಈಗ ಹೀಗಾದ ನೀನು? ನೀನು ನಿಜವಾಗಲೂ ನೀನೇನಾ??


ನನ್ನ ನಿನ್ನ ಸ್ನೇಹವನ್ನು ಏನಾಗಿಯೋ ತಪ್ಪಾಗಿ ಅರ್ಥ ಮಾಡಿಕೊಂಡ ಅವನು ನಿನ್ನ ಮೇಲೆ ವಿನಾಕಾರಣ ಬೈದು ನಿನ್ನ ಕಣ್ಣಲ್ಲಿ ನೀರು ತರಿಸಿದ.. [ನನಗೆ ನಿಜವಾಗಿಯೂ ಅವನ ಹೆಸರು, ಅವನು ಯಾರು ಎಂಬುದು ಇಂದಿಗೂ ಗೊತ್ತಿಲ್ಲ. ನೀನು ಮೊದಲೇ ಹೇಳಿಲ್ಲ.. ನಾನಂತೂ ಅವನನ್ನು ನೋಡಿಯೇ ಇಲ್ಲ..].. ನಾನು ಅವನ ಹತ್ತಿರ ಏನಿದೆಯೋ ಅವನ್ನೆಲ್ಲ ಈಗಲೂ ಹೇಳಬಲ್ಲೆ.. ಧೈರ್ಯದಿಂದ ಮಾತನಾಡಬಲ್ಲೆ.. ಆದರೆ ನೀನೇ ಅವನಿಗೆ ನನ್ನ ತೋರಿಸಲು ಹೆದರುತ್ತಿರುವೆ..ಯಾಕೆ? ಇರಲಿ ಅದನ್ನೂ ಬಿಟ್ಟು ಬಿಡು.. ನೀನು ಅಳದಿದ್ದರೆ ಅಷ್ಟೇ ಸಾಕು.. ನನಗೆ ಮತ್ತಿನ್ನೇನು ಬೇಕು? ನೀನು ಇವೆಲ್ಲವನ್ನೂ ಓದುತ್ತೀಯೋ ಇಲ್ವೋ, ಆದರೆ ನನಗೆ ಇದನ್ನು ನಿನ್ನ ಹತ್ತಿರವೇ ಹೇಳಿದಷ್ಟು ಖುಷಿಯಾಗುತ್ತಿದೆ.. ಅದಕ್ಕೆ ಅಲ್ವೇನೆ, ನಾನು ನಿನ್ನನ್ನು ಬಿಟ್ಟು ನಿನ್ನ ನೆನಪುಗಳೊಂದಿಗೆ ಈ ಎರಡು ಕಾಲು ವರ್ಷದಿಂದ ಬದುಕುತ್ತಿರುವುದು.. ನೀವಿಬ್ಬರೇ ಇರಿ ಅಂತ ನಿನಗೂ ಹೇಳದೆ ಸುಮ್ಮನೆ ಹೊರ ನಡೆದು ಬಂದಿದ್ದು? ಪ್ರೀತಿ ಲೀ ಏನಾದರೂ ಆದ್ರೆ ಬೇಜಾರಾಗತ್ತೆ ಅಂತೆ ಕೇಳಿದ್ದೆ..  ಆದರೆ ಸ್ನೇಹದಲ್ಲೂ ಅದಕ್ಕಿಂತಲೂ ಮಿಗಿಲಾದ ನೋವು ಇದೆ ಎಂದು ಗೊತ್ತಾಯಿತು.. ಅದೂ ನಿನ್ನಿಂದ!


ಈಗ ನೀನು ಎಲ್ಲಿದ್ದೀಯೋ? ಹೇಗಿದ್ದೀಯೋ? ಅವನು ನಿನ್ನ ಜೊತೆಗಿದ್ದಾನೋ ಇಲ್ವೋ ಎಂಬುದೂ ನನಗೆ ಗೊತ್ತಿಲ್ಲ.. ನಿನಗೆ ಈಗ ಅವನ ಜೊತೆ ಅಥ್ವಾ ಬೇರೆಯವನ ಜೊತೆ ಮದುವೆಯೂ ಆಗಿರಲಿಕ್ಕೆ ಸಾಕು.. ಒಂದು ಪುಟ್ಟ ಪಾಪುವೂ ನಿನ್ನ ಬಾಳಲ್ಲಿ ಬಂದಿರಬಹುದು.. ಅದಕ್ಕೆ ಏನು ಹೆಸರು ಇಟ್ಟಿದ್ದೀಯಾ? ಅದೂ ನನಗೆ ಬೇಡ.. ನೀವಿಬ್ಬರು ಎಲ್ಲೇ ಇರಿ, ಹೇಗೇ ಇರಿ .. ಒಂದಾಗಿಯೇ ಇರಿ ಎಂದು ಹೇಳುತ್ತಾ ಇವತ್ತು ನೆನಪಾದ ನೀನು ಮತ್ತೆಂದಿಗೂ ನೆನಪಾಗದಂತೆ ನೋಡಿಕೊಳ್ಳುವೆ.. [ಸಾಧ್ಯವಾದರೆ......??!].. ನಿನ್ನ ಸ್ನೇಹಿತನ ಪುಟ್ಟ ಹೃದಯ ನಿನಗಾಗೇ ಸದಾ ಮಿಡಿಯುತ್ತಿದೆ ಎಂಬುದನ್ನು ಮರೆಯಬೇಡ.. ಇಂದಿಗೂ ನಿನ್ನ ಮೊಬೈಲ್ ನಂಬರ್ ನಿನ್ನ ಹೆಸರಿನಲ್ಲೇ ಸೇವ್ ಮಾಡಿಕೊಂಡು ಬೆಚ್ಚಗೆ ಕುಳಿತಿತ್ತು.. ನಿನ್ನ ನೆನಪಾದಾಗ ಅದನ್ನು ಕನಿಷ್ಠ ನಿನ್ನ ಹೆಸರನ್ನು ನೋಡುತ್ತಿದ್ದೆ,,. ಈಗ ಅದೂ ಇಲ್ಲ.. ಅದನ್ನೂ ಡಿಲೀಟ್ ಮಾಡುತ್ತಿದ್ದೇನೆ..


ಇವನ್ನೆಲ್ಲ ಬರೆದು ಮುಗಿಸುವ ಹೊತ್ತಿಗೆ ನನ್ನ ಕಣ್ಣಲ್ಲಿ ನೀರಿತ್ತಾ?.......... ಗೊತ್ತಿಲ್ಲ.. ಆ ದೇವರಿಗಾದರೂ ನನ್ನ ಮೇಲೆ ಕರುಣೆಯಿತ್ತಾ? ಅವನನ್ನೇ ಕೇಳುವೆ.. ಅದೃಷ್ಟವಿದ್ದರೆ ಮತ್ತೆ ಸಿಗೋಣ ಗೆಳತೀ.., ಇನ್ನೊಮ್ಮೆ ಸಿಕ್ಕಾಗ ಮೊದಲೇ ಬೆನ್ನು ತೋರಿಸಬೇಡ...

ಸಿಹಿಗಿಂತ ಹೆಚ್ಚಿನ ಕಹಿ ನೆನಪುಗಳೊಂದಿಗೆ....
--ನಿನ್ನ ಗೆಳೆಯ :(

37 comments:

putti said...

update d next part soon.......

ಜೇಪೀ ಭಟ್ ! said...

Oh... so curious??! @#$

ಜೇಪೀ ಭಟ್ ! said...

PUTTI: now its completed... U can read!!!

IBK said...

Nice one .. Thank you

nivedita said...

nice one jepee.. keep writin..

nannolagenanu said...

Sakattagi bhavaneyanna vyakta padisidde.a hudugi idanna odidre matte olle snehite agi jeevanaduddakku iro tara baradde.keep writing.:)

susharma said...

excellent!!!!

ಜೇಪೀ ಭಟ್ ! said...

IBK: ಧನ್ಯವಾದಗಳು..

ಜೇಪೀ ಭಟ್ ! said...

ನಿವೇದಿತಾ: ಒಹ್ ... ಥಾಂಕ್ಸ್.. !!

ಜೇಪೀ ಭಟ್ ! said...

ನನ್ನೊಳಗೆ ನಾನು : ಒಹ್ ಹೌದ ?? ಥಾಂಕ್ಸ್.. ಅದು ಓದ್ತ ಇಲ್ಯ ಗೊತ್ತಿಲ್ಲೆ ... ಓದಿದ್ರೆ ನೀ ಹೇಳ್ದಂಗೆ ಆಗ್ತಾ ಇಲ್ಯ ಹೇಳೂ ಗೊತ್ತಿಲ್ಲೆ ... Anyway Thanks.. for reading full:):):) Oh sure..

ಜೇಪೀ ಭಟ್ ! said...

ಸುಶರ್ಮಾ : ಧನ್ಯವಾದಗಳು................!!!

ಮನಸ್ವಿ said...

ನೀ ಚೊಲೋವಾ ಅಂತ ಅವಳು ಯಾವತ್ತು ಎಷ್ಟೊತ್ತಿಗೆ ಯಾವ ವಾರ ಕಳ್ಸಿದ್ದ ಮೆಸೇಜ್ ಅಂತ ನೆನ್ಪಿದ್ದಾ ;) ಚನಾಗಿ ಬರದ್ದೆ ಹಿಂಗೆ ಬರಿತಾ ಇರು... ಅಂದಂಗೆ ಹೆಸ್ರೆಂತೋ ಅವ್ಳದ್ದು.. ಗುಟ್ಟಾಗಿ ಹೇಳು ಇಲ್ಲೇ!

ಜೇಪೀ ಭಟ್ ! said...

ಹ್ಹಾ ಹ್ಹಾ :) ಥ್ಯಾಂಕ್ ಯೂ ..... ಅದೂ ನೆನಪಿದ್ದು ಅದ್ನೂ ಹೇಳಿದ್ನಲಾ ಅಲ್ಲೇ...!! ಅದೆಲ್ಲಾ ಮರ್ಯಲೇ ಸಾಧ್ಯಾನ ? ಬೇಡಾ ಬೇಡಾ ಅಂದ್ರೂ ನೆನ್ಪಿರ್ತು.. ಕಹಿ ಕಹಿ ಆದ್ರೂ ಎಲ್ಲೋ ಸಿಹಿ ಸಿಹಿ..
ಹೆಸರು "S"... ಅದ್ರ್ ಫ್ರೆಂಡ್ ಹೆಸರೂ "S"............ ಗುಟ್ಟಾಗೇ ಹೇಳಿದ್ದಿ.. ಯಾರಿಗೂ ಹೇಳಡಾ.....

ಶಾಲ್ಮಲಿ said...

ಒಂದೊಳ್ಳೇ ಬರಹ. ಎಲ್ಲೋ ಮನಸಿಗೆ ನನ್ನ ಕಳೆದು ಹೋದ ಸ್ನೇಹಿತನ ನೆನಪು. ಸ್ನೇಹ ಹುಟ್ಟುವುದೂ ಕಷ್ಟ ಮರೆಯುವುದು ಇನ್ನೂ ಕಷ್ಟ. ಮರೆತವರಿಗೆ ಮರೆಯಲ್ಪಟ್ಟವರ ನೋವು ಎಂದೂ ಅರ್ಥವಾಗದು.

Harish - ಹರೀಶ said...

ಜೇಪೀ: ಇಷ್ಟು ಚೆನ್ನಾಗಿ ಬರದ್ದೆ..

ಇದು ಕಥೆ ಅಲ್ದೆ ಇದ್ರೆ, ಆ ಹುಡುಗಿ ಇದನ್ನ ನೋಡಿದ್ರೆ, ಖಂಡಿತ ನಿಂಗೆ ಮತ್ತೆ ಸ್ನೇಹಿತೆಯಾಗಿ ಸಿಕ್ಕೇ ಸಿಗ್ತ..

ಚೆಂದುಳ್ಳಿ said...

ಜೆಪಿ, ಮಸ್ತ್ ಇದ್ದು. ತುಂಬಾ ಇಸ್ಟ ಆತು.
ಆ ಕೂಸಿನ್ ಮದ್ವೆ ಆಗ್ದಿದ್ರೆ ಎತ್ತಾಕ್ಯ ಬಪ್ಪನಾ..ಏನಂಬೆ?

Prakash

ಜೇಪೀ ಭಟ್ ! said...

ಶಾಲ್ಮಲಿ : ಧನ್ಯವಾದಗಳು...!! ನಿಮ್ಮ ಸ್ನೇಹಿತ ಮತ್ತೆ ನಿಮಗೆ ಆದಷ್ಟು ಬೇಗ ಒಳ್ಳೆಯ ರೀತಿಯಲ್ಲಿ ಸಿಗಲಿ ಎಂದು ಆಶಿಸುತ್ತೇನೆ ... ಎಲ್ಲೆಲ್ಲೂ ನೋವೆ.. :(

ಜೇಪೀ ಭಟ್ ! said...

ಹರೀಶ್: ಓಕೆ ಥ್ಯಾಂಕ್ಸ್.. ಅಯ್ಯೋ ದೇವ್ರೆ.. .. ನಿಜವಾದದ್ದು.. ಇದು ಕಥೆ ಅಲ್ಲಾ. ಮನಸಿನ ವ್ಯಥೆ.. :(

ಜೇಪೀ ಭಟ್ ! said...

ಚೆಂದುಳ್ಳಿ ಪ್ರಕಾಶ್ : ಥ್ಯಾಂಕ್ಸ್ ಪೀ ಅಣ್ಣ '' ಅಯ್ಯೋ ಬ್ಯಾಡ್ ದೋ ಮಾರಾಯ್ನೆ.. ಮದ್ವೆ ಆಗದ್ ಕಿಂತಾ ಮುಂಚೆನೇ ಹಿಂಗೆ.. ಇನ್ನು ಈಗ ಮದ್ವೆ ಆಗಿದ್ದಿದ್ರೆ ಇನ್ನು ಹೆಂಗೋ ?? ಇರ್ಲಿ ಬಿಡಾ...

anu said...

ನಿನ್ನ,ಮನಸ್ಸಿನ ವ್ಯಥೆಯನ್ನ,ಕಥೆಯಾಗಿ ಬರೆದು,ಎಲ್ಲರೊಂದಿಗೆ ಹಂಚಿಕೊಂಡ ಬಗೆ ನಿಜಕ್ಕೂ ಶ್ಲಾಘನೀಯ..!!

ಜೇಪೀ ಭಟ್ ! said...

ಅನು: ಓ ಹಂಗೆನಿಲ್ಲೇ... ನಿಮ್ಮ ಸಲಹೆ ಸೂಚನೆಗಳಿಗೆ ಸದಾ ತುಂಬು ಹೃದಯದ ಸ್ವಾಗತ ... ಧನ್ಯವಾದಗಳು..

Aghanashini said...

ಜಯಪ್ರಸಾದ, ಭಿನ್ನ ಕತೆ. ಬರವಣಿಗೆ ಶೈಲಿ ಮತ್ತು ವಿಚಾರ ಹೊಸತು. ನಿನ್ನ ಬರವಣಿಗೆ ಇನ್ನೂ ಹೆಚ್ಚು ಬಲಿತು ಸಾಹಿತ್ಯಲೋಕ ಶ್ರೀಮ೦ತವಾಗಲಿ ಎ೦ದು ಹಾರೈಕೆ. ಇತಿ ಪ್ರೀತಿ ವಿಶ್ವಾಸದಿ೦ದ, ಗ೦ಗಣ್ಣ.

ಜೇಪೀ ಭಟ್ ! said...

ಗಂಗಣ್ಣ, ತುಂಬಾ ಧನ್ಯವಾದಗಳು.. ಇದು ಭಿನ್ನ ಆಗಿಕ್ಕು.. ಆದ್ರೆ ಕಥೆ ಅಲ್ದೋ.. ನಿಜ ಘಟನೆ.. ನಿನ್ನ ಪ್ರೀತಿ, ವಿಶ್ವಾಸ ಹಿಂಗೆ ಇರ್ಲಿ :):)

ವಾಣಿಶ್ರೀ ಭಟ್ said...

ಆಗಲೇ ದೇವರಿಗೆ ಗೊತ್ತಾಗಿರಬೇಕು, ಇವರಿಬ್ಬರ ಗೆಳೆತನ ಹೆಚ್ಚು ದಿನ ಬಾಳಿಕೆ ಬರಲಾರದು ಎಂದು, ಯಾಕೆಂದರೆ ನಾನು ಮೊದಲು ನೋಡಿದ್ದೇ ಹಿಂದೆ,..

nice lines.. matte avalu ninage sigali :)

ಜೇಪೀ ಭಟ್ ! said...

ವಾಣಿ: ಥ್ಯಾಂಕ್ಸ್..
ಮತ್ತೆ ಸಿಗ್ಲಿ ಅಂಬ್ಯ ?

Geeta said...

mast iddu... kathe andkandiddi..ufff... vyathe na?? may be idhe vyathe ne nim yella kavithe gu karanava ansta iddu????

pavi said...

jepee.. illi ondu arta aagta ille.. snehana...? preetina....? nan prakra idu sneha alla, preeti. namge naave gottillade preetiyalle ( fall in love) biddogirtya alda? nijwaglu nige adu preeti anta ansidre ninge aahudugige madwe aagade irli....

tumba chennagiddu...

Sudarshan Hegde said...

ಜೇಪೀ ನಿಜಕ್ಕೂ ಗ್ರೇಟ್ ... ಆದ್ರೆ ಬೇಜಾರಗ್ತಲ ಮಾರಾಯ.. ಓದಿ ಯಂಗೆ ಫುಲ್ ತಲೆಬಿಸಿ ಆಗೋತು... ಕಣ್ಣು ಒದ್ದೆ ಅಗ್ತೋ ಮಾರಾಯ ಓದಿರೆ, ಎಂತಕ್ಕಾರು ಹ್ಯಾಂಗ್ ಮಾಡ್ಚ ಮಾರಾಯ ಅದು, ಛೆ...

K.Seema Burde said...

Nice article.ಪದಗಳ ಜೋಡಣೆ,ಮನಸ್ಸಿನ ಭಾವನೆಗಳು ತುಂಬಾ ಮಧುರವಾಗಿ ವಿವರವಾಗಿದೆ. But i can find only a broken heart every where :(

ಜೇಪೀ ಭಟ್ ! said...

ಗೀತಾ: ಒಹ್, ಇದು ಕಥೆ ಅಲ್ಲಾ....
ಇದೇ ಅದ್ಕೆಲ್ಲಾ ಕಾರಣ ಹೇಳೂ ಅಲ್ಲಾ... ಇದು ಅಲ್ವೇ ಅಲ್ಲಾ ಹೇಳೂ ಅಲ್ಲಾ......!!
ಹ್ಹಾ, ಹ್ಹಾ...:):)
ಹೀಗೆ ಓದಿ ಕಾಮೆಂಟ್ ಮಾಡ್ತಾ ಇರಿ:):)

ಜೇಪೀ ಭಟ್ ! said...

ಪವಿ: ಮೋಸ್ಟ್ಲಿ ಅದು ಎಂತು ಹೇಳಿ ನಂಗೂ ಗೊತ್ತಿಲ್ಲೆ..
ಎಂತಾ ಅಂದ್ರಿ? ನಂಗೂ ಆ ಹುಡುಗಿಗೂ ಮದ್ವೆ ''ಆಗದೇ ಇರಲಿ'' ಅಂತಾನ??! ನಿಮ್ಮ ಕಾಮೆಂಟ್ ಮತ್ತೊಮ್ಮೆ ಓದಿ!
ಧನ್ಯವಾದಗಳು, ಹೀಗೆ ಭೇಟಿ ಕೊಟ್ಟು ನಿಮ್ಮ ಅಭಿಪ್ರಾಯ ತಿಳಿಸುತ್ತಿರಿ......!

ಜೇಪೀ ಭಟ್ ! said...

ಸುದರ್ಶನ್ ಹೆಗ್ಡೆ: ಎಂತಾ ಮಾಡಲೇ ಬತ್ತಾ??
ಯಾವಾಗ್ಲೂ ಹಿಂಗೆ ಓದ್ತಾ ಕಾಮೆಂಟ್ ಮಾಡ್ತಾ ಇರು:):)
ಹ್ಹಾ ಹ್ಹಾ ಎಲ್ಲಾರೂ ಅಪ್ಪಿ ತಪ್ಪಿ ಅದು ಮತ್ತೆ ನನ್ನ ಜೀವನದಲ್ಲಿ ಅಥವಾ ಎಲ್ಲಾದರೂ ನನ್ನ ದಾರಿಯಲ್ಲಿ ಸಿಕ್ದ್ರೆ ಅದ್ನೇ ಕೇಳ್ತಿ ಎಂತಕ್ ಹಂಗ್ ಮಾಡ್ದೆ ಹೇಳಿ ಆತ?? ಆಮೇಲೆ ನಿಂಗೆ ಮುದ್ದಾಂ ಹೇಳ್ತಿ...........

ಜೇಪೀ ಭಟ್ ! said...

ಕೆ.ಸೀಮಾ ಬುರುಡೆ: ಹ್ಮ್ಮ್, :(:(
ಏನ್ ಮಾಡೋಕೂ ಬರಲ್ಲಾ...
ಧನ್ಯವಾದಗಳು..Keep on reading & Commenting..:):)
** AND WE SHOULD LIVE WITH THAT BROKEN HEART ONLY NO?? COS ITS NOT REPAIRABLE LIKE ANY ELECTRONIC ITEMS**
THANKS:):):)

kavana said...

ಜೇಪೀ,ಕೆಲವು ಘಟನೆಗಳನ್ನ ಮರೆಯೋ ಅಭ್ಯಾಸ ಮಾಡಿಕೊಳ್ಳಕ್ಕು.ಪದೇ ಪದೇ ಅದನ್ನ ನೆನಪಿಸಿಕೊಂಡ್ರೆ,ಗಾಯ ಕೆರದುಕೊಂಡು ಇನ್ನೂ ಜಾಸ್ತಿ ಮಾಡಿಕೊಂಡ ಹಾಗೇ..ರಾತ್ರಿಯಾಯ್ತು ಅಂತ ಕೊರಗ್ತಾ ಕೂತ್ರೆ,ನಕ್ಷತ್ರ ನೋಡ ಭಾಗ್ಯ ಹೆಂಗೆ ಸಿಕ್ತು..ಇನ್ನೂ ಚೊಲೋ ಗೆಳತಿ ನಿನ್ನ ಜೀವನದಲ್ಲಿ ಸಿಗಲಿ ಎನ್ನವ ಹಾರೈಕೆಗಳೊಂದಿಗೆ...
Anu.

ಜೇಪೀ ಭಟ್ ! said...

ಅನು : ಏನಾಗಲಿ ಮುಂದೆ ಸಾಗು ನೀ ಅಂತೀರಾ ......!!
ಆದ್ರೆ ಆದ ಗಾಯದ ಕಲೆ ನೋಡಿದಾಗ ನೆನಪುಗಳು ಬಂದು ಕಾಡುತ್ತಾವಲ್ಲ ಅದ್ಕೆ ಏನ್ ಮಾಡೋದು ಅಲ್ವಾ ??
ಧನ್ಯವಾದಗಳು:)
ಓದುತ್ತಾ ಕಾಮೆಂಟ್ ಮಾಡುತ್ತಿರಿ!!:)

vivek said...

JP... super ayidu...... thank u soo much...

ಜೇಪೀ ಭಟ್ ! said...

Vivek:
Thanks!!!:):)
Keep on reading and Commenting:):)