Thursday, February 10, 2011

ಎಲ್ಲರ ಬದುಕಲ್ಲಿ ಇರುವಂತೆ ಕಷ್ಟ ಸುಖದ ಹೂರಣ, ಎಲ್ಲರ ಬಾಳಿನಲ್ಲಿ ಒಮ್ಮೆಯಾದರೂ ಬರದೇ ಇದ್ದೀತೆ ಆಶಾಕಿರಣ??

Life cried loudly!

ಖುಷಿಯಿಂದ ಆಚೀಚೆ ಓಲಾಡಿ  ನಿಂತಿರುವ ಮರಗಳಂತೆ,
ಎಲ್ಲರಿಗೂ ಎಲ್ಲೆಡೆ ಅವಶ್ಯವಾದ  ತಂಪಾದ ಜೀವಜಲ ನೀಡುವ ನದಿಯಂತೆ,
ಎಲ್ಲರನ್ನೂ ಉಸಿರಾಡಿಸಿ ಬದುಕಿಸುತ್ತಿರುವ ಶುದ್ಧ ಗಾಳಿಯಂತೆ,
ಪುಣ್ಯವಂತರನ್ನೂ,ಪಾಪಿಗಳನ್ನೂ ತನ್ನ ಮಡಿಲಲ್ಲಿ ಹೊತ್ತು ನಿಂತಿರುವ ಮಹಾತಾಯಿ ಭೂಮಾತೆಯಂತೆ..

ನೋವುಗಳಿವೆ ಯಾವಾಗಲೂ ಎಲ್ಲರಲ್ಲಿಯೂ,
ಅದರಲ್ಲಿ ನೀನು ಬದುಕು ಹುಡುಕಿ ಖುಷಿಯನ್ನು,
ಈ ಜಗತ್ತಿನಲ್ಲಿ ಯಾರೂ ಪರಮ ಸುಖಿಗಳಲ್ಲ,
ಆದ್ದರಿಂದ ಖುಷಿಯಾಗಿರಿಸು ಯಾವಾಗಲೂ ನಿನ್ನ ಮನವನ್ನು..

ಅವರವರ ಕಷ್ಟ-ಸುಖ ಅವರಿಗೆ ಇದ್ದೇ ಇರುತ್ತೆ,
ನೋವಲ್ಲೂ ಖುಷಿ ಒಮ್ಮೊಮ್ಮೆ ಎದ್ದು ಬರುತ್ತೆ!
ಎಲ್ಲರೊಂದಿಗೂ ನಗುನಗುತ್ತಾ ಬಾಳು ಒಂದಾಗಿ,
ಆಗ ಬದುಕು ಸಾಗುತ್ತೆ ನೀ ಅಂದುಕೊಂಡಂತೆ ಚೆಂದಾಗಿ!

ಎಲ್ಲರ ಬದುಕಲ್ಲಿ ಇರುವಂತೆ ಕಷ್ಟ ಸುಖದ ಹೂರಣ,
ಎಲ್ಲರ ಬಾಳಿನಲ್ಲಿ ಒಮ್ಮೆಯಾದರೂ ಬರದೇ ಇದ್ದೀತೆ ಆಶಾಕಿರಣ??

7 comments:

ಶಾಲ್ಮಲಿ said...

+ve approach.... ನಿಮ್ಮ ಬ್ಲಾಗ್ ನಲ್ಲಿ first time 'ಎಲ್ಲರ ಬಾಳಿನಲ್ಲಿ ಒಮ್ಮೆಯಾದರೂ ಬರದೇ ಇದ್ದೀತೆ ಆಶಾಕಿರಣ' ಎಂಬ ವಾಕ್ಯಗಳು..... ಖುಶಿಯಾಯಿತು.... ಚೆನ್ನಾಗಿದೆ....

ಜೇಪೀ ಭಟ್ ! said...

:):) thanks...!

Digwas Hegde said...

ನೋವುಗಳಿವೆ ಯಾವಾಗಲೂ ಎಲ್ಲರಲ್ಲಿಯೂ,
ಅದರಲ್ಲಿ ನೀನು ಬದುಕು ಹುಡುಕಿ ಖುಷಿಯನ್ನು,
ಈ ಜಗತ್ತಿನಲ್ಲಿ ಯಾರೂ ಪರಮ ಸುಖಿಗಳಲ್ಲ,
ಆದ್ದರಿಂದ ಖುಷಿಯಾಗಿರಿಸು ಯಾವಾಗಲೂ ನಿನ್ನ ಮನವನ್ನು...

ಇಷ್ಟವಾಯಿತು

ಜೇಪೀ ಭಟ್ ! said...

ಶಾಲ್ಮಲಿ : ಧನ್ಯವಾದಗಳು.. ಇವತ್ತು ಪೊಸಿಟಿವ್ ಅಪ್ಪ್ರೋಚ್ ನೋಡಿದ್ರಾ ??

ಜೇಪೀ ಭಟ್ ! said...

ದಿಗ್ವಾಸ್ : :):) !!

Dileep Hegde said...

ಕವನದ ಆಶಯ ಚೆನ್ನಾಗಿದೆ.. ಇಷ್ಟವಾಯ್ತು... :)

ಜೇಪೀ ಭಟ್ ! said...

Dileep : thnaks.........