![]() |
Smiling iDioT;) |
ಎಲ್ಲಿಯೋ ಏನನ್ನೋ ಹುಡುಕುತ್ತಿದ್ದೆ,
ಅದು ಸಿಗಲಾರದ ಜಾಗದಲ್ಲಿ..
ಮತ್ತೆ ಮತ್ತೆ ಕೆದಕಿ ತೆಗೆದೆ..
ಬಾರದಿದ್ದರೂ ಮತ್ತೆ ಮೇಲೆ..
ಜೀವನವೇ ಎಲ್ಲರಲ್ಲಿಯೂ ಹೀಗೆ,
ನಾವು ತಿಳಿದಂತಲ್ಲ..
ನಾವು ಬಯಸುವುದೇ ಹಾಗೆ,
ಅನಿಸಿದಂತೆ ಒಂದೂ ಆಗುವುದಿಲ್ಲ..
ಯಾವಾಗಲೂ ಬೇಡವೆಂದರೂ ಮತ್ತೆ ಮತ್ತೆ,
ಕನಸು ಕಾಣುತ್ತೇನೆ..
ಅವು ಎಷ್ಟು ಸತ್ಯವೋ ಸುಳ್ಳೋ,
ಹಾಗೆಯೇ ಎಂದಿನಂತೆ ಕಾಣುತ್ತಲೇ ಇರುತ್ತೇನೆ..
ಕಾಣದ ಕಣ್ಣುಗಳೇ ಹಾಗೆ,
ಎಲ್ಲವನ್ನೂ ತಿಳಿಯುವ ತವಕ..
ಬಯಸಿದ್ದು ಏನೂ ಸಿಗದೇ ಇದ್ದಾಗ,
ಲೋಕದಲ್ಲಿ ಎಲ್ಲರ ಕುಹಕ...!
ಅದು ಸಿಗಲಾರದ ಜಾಗದಲ್ಲಿ..
ಮತ್ತೆ ಮತ್ತೆ ಕೆದಕಿ ತೆಗೆದೆ..
ಬಾರದಿದ್ದರೂ ಮತ್ತೆ ಮೇಲೆ..
ಜೀವನವೇ ಎಲ್ಲರಲ್ಲಿಯೂ ಹೀಗೆ,
ನಾವು ತಿಳಿದಂತಲ್ಲ..
ನಾವು ಬಯಸುವುದೇ ಹಾಗೆ,
ಅನಿಸಿದಂತೆ ಒಂದೂ ಆಗುವುದಿಲ್ಲ..
ಯಾವಾಗಲೂ ಬೇಡವೆಂದರೂ ಮತ್ತೆ ಮತ್ತೆ,
ಕನಸು ಕಾಣುತ್ತೇನೆ..
ಅವು ಎಷ್ಟು ಸತ್ಯವೋ ಸುಳ್ಳೋ,
ಹಾಗೆಯೇ ಎಂದಿನಂತೆ ಕಾಣುತ್ತಲೇ ಇರುತ್ತೇನೆ..
ಕಾಣದ ಕಣ್ಣುಗಳೇ ಹಾಗೆ,
ಎಲ್ಲವನ್ನೂ ತಿಳಿಯುವ ತವಕ..
ಬಯಸಿದ್ದು ಏನೂ ಸಿಗದೇ ಇದ್ದಾಗ,
ಲೋಕದಲ್ಲಿ ಎಲ್ಲರ ಕುಹಕ...!
6 comments:
ಯಾವಾಗಲೂ ಬೇಡವೆಂದರೂ ಮತ್ತೆ ಮತ್ತೆ,
ಕನಸು ಕಾಣುತ್ತೇನೆ..
ಅವು ಎಷ್ಟು ಸತ್ಯವೋ ಸುಳ್ಳೋ,
ಹಾಗೆಯೇ ಎಂದಿನಂತೆ ಕಾಣುತ್ತಲೇ ಇರುತ್ತೇನೆ..
ಇಷ್ಟವಾಯಿತು
ಕನಸು ಕಾಣುವುದು ಮನುಜನ ಸಹಜ ಧರ್ಮ.
ನನಸಾಗದಿದ್ದರೆ ಅದು ನಮ್ಮ ಕರ್ಮ...
ಕಂಡ ಕನಸುಗಳೆಲ್ಲಾ ನನಸಾಗ ಬೇಕೆಂದೇನೂ ನಿಯಮವಿಲ್ಲ.
ಆದರೂ ಕನಸುಗಳ ಅಡಿಪಾಯದ ಮೇಲೇ ನಮ್ಮ ಜೀವನವೆಲ್ಲಾ..
Digwaas : :):) thankss..!
Anu: :)!! THANKS...!!
ನಿಮ್ಮ ಬರಹಗಳು ಬೇಡವೆಂದರೂ ಕಾಮೆಂಟಿಸಿಕೊಳ್ಳುತ್ತವೆ. ನಿಮ್ಮ ಭಾವನೆಗಳು ಅಕ್ಷರಗಳಾಗುವುದೇ ಚಂದ. ಪ್ರತಿ ದಿನವೂ ನಿಮ್ಮ ಬ್ಲಾಗ್ 'update' ಆಗುವುದನ್ನೇ ಕಾಯುತ್ತಿರುತ್ತೇನೆ. ಚಂದದ ಸಾಲುಗಳ ಸುಂದರ ಕವನ.
ಶಾಲ್ಮಲೀ,
ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಸದಾ ಋಣಿ..
ತುಂಬಾ ಧನ್ಯವಾದಗಳು...!!
ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ಹೀಗೆಯೇ ಮುಂದುವರೆಯುತ್ತವೆ ಎಂಬ ನಂಬಿಕೆಯಿಂದ,
ನಿಮ್ಮ-ಜೇಪೀ ಭಟ್!
Post a Comment