Monday, January 17, 2011

ಭ್ರೂಣ ಹತ್ಯೆಯನ್ನು ತಡೆಯೋಣ.. ಎಲ್ಲರೂ ಒಂದಾಗಿ, ಚೆನ್ನಾಗಿ ಬಾಳೋಣ..

Stop Fetus Killing.
ಅಳುವಲ್ಲೂ ನಗುವ ಕಂಡು,
ನೋವಲ್ಲೂ ಸುಖವ ಉಂಡು,
ಕತ್ತಲಲ್ಲೂ ಬೆಳಕ ಅರಸಿ,
ಉರಿವ ದೀಪವನ್ನು ಆರಿಸಿ..

ಚಿಗುರನ್ನೇ ಚಿವುಟಿದ್ದು ಯಾಕೆ?
ಅರಳದ ಮುನ್ನವೇ ಬಾಡಿಸುವ ಆಸೆ..
ಆದರೂ ಬದುಕುವ ಬಯಕೆ..

ಆ ಕಣ್ಣುಗಳು ಕಾಣದ ಪಾಪಿ ಲೋಕ..
ಇನ್ನೂ ಬೆಳೆಯದ ಮನಸು, ಹೃದಯ..
ಹುಟ್ಟುವ ಮೊದಲೇ ಸಾವಿನ ಶೋಕ..
ಅಮ್ಮನ ಮಡಿಲಲ್ಲಿ ಭಾರೀ ನೋವಿನ ಗಾಯ..

ಮೆತ್ತನೆ ಬೆಚ್ಚನೆಯ ಕೂಗು..
ಕೇಳುವುದಿಲ್ಲ ಯಾರಿಗೂ ಎಲ್ಲಿಯೂ..
ಹೊಟ್ಟೆಯಲ್ಲೇ ಸಾಯಲಿದೆ ಇನ್ನೂ ಹುಟ್ಟದ ಮಗು..

ನಿಲ್ಲಲಿ ಇನ್ನಾದರೂ ಈ ರೀತಿಯ ಅಭ್ಯಾಸ,
ಆಗದಿರಲಿ ಎಲ್ಲರಿಗೂ ಈ ಧುರಭ್ಯಾಸ..
ಭ್ರೂಣ ಹತ್ಯೆಯನ್ನು ತಡೆಯೋಣ..
ಎಲ್ಲರೂ ಒಂದಾಗಿ, ಚೆನ್ನಾಗಿ ಬಾಳೋಣ..

4 comments:

ವಾಣಿಶ್ರೀ ಭಟ್ said...

olleya baraha...nice one.. keep it up :)

ಜೇಪೀ ಭಟ್ ! said...

ವಾಣಿಶ್ರೀ : ಧನ್ಯವಾದಗಳು..:)..!!

Anju said...

I liked it..

ಜೇಪೀ ಭಟ್ ! said...

ANJU: thanks..........