Thursday, December 30, 2010

ಯಾವುದಕ್ಕೂ ಯಾರಿಗೂ ಸಂಬಂಧವಿಲ್ಲದಂತೆ..!

ಯಾವುದಕ್ಕೂ ಯಾರಿಗೂ ಸಂಬಂಧವಿಲ್ಲದಂತೆ..! 
 
ಹಳೇ ದಿನ ಮುಗಿಯುತ್ತಲೇ ಇರುತ್ತದೆ..
ಹೊಸ ದಿನ ಹುಟ್ಟುತ್ತಲೇ ಇರುತ್ತದೆ..

ಯಾವುದಕ್ಕೂ ಯಾರಿಗೂ ಸಂಬಂಧವಿಲ್ಲದಂತೆ..!

ಪೂರ್ವದಲ್ಲಿ ಮೂಡುವ ಸೂರ್ಯ,
ಪಶ್ಚಿಮದಲ್ಲಿ ಮುಳುಗುವ ಅದೇ ಸೂರ್ಯ,
ಬೆಳಿಗ್ಗೆಯಾದರೆ ಬಿಸಿಲನ್ನು ಹೊತ್ತು ತರುವ ಅವನು,
ಸಂಜೆ ಹೋಗುವಾಗ ಕೊಟ್ಟು ಹೋಗುತ್ತಾನೆ ಹಿತವಾದ ತಂಪನ್ನು..

ಯಾವುದಕ್ಕೂ ಯಾರಿಗೂ ಸಂಬಂಧವಿಲ್ಲದಂತೆ..!

ಯಾರೋ ಹುಟ್ಟಿದರೆ ನಗುವವರಾರು?
ಇನ್ಯಾರೋ ಸತ್ತರೆ ಅಳುವವರಾರು?
ಪ್ರಪಂಚವೇ ಹೀಗೆ ಯಾವುದಕ್ಕೂ ನಿಲ್ಲದು..
ಯಾರಿಗೆ ಏನೇ ಆದರೂ ಅಂಜದು ..

ಯಾವುದಕ್ಕೂ ಯಾರಿಗೂ ಸಂಬಂಧವಿಲ್ಲದಂತೆ..!

ಕೆಲವರ ಪಾಲಿಗೆ ಅವರ ಜೀವನದಲ್ಲಿ ಯಾರೇ ಬಂದರೂ ಸಂತೋಷವಲ್ಲ ..
ಯಾರೇ ಹೋದರೂ ದುಃಖವಂತೂ ಮೊದಲೇ ಅಲ್ಲ ..
ಅವರವರ ಕೆಲಸವನ್ನು ಅವರು ಮಾಡುತ್ತಲೇ ಇರುವರು ..
ಅದು ಕೆಟ್ಟದ್ದಾಗಲೀ, ಒಳ್ಳೆಯದೇ ಇರಲಿ .. ಅವರು ಅದಾವುದಕ್ಕೂ ಹೆದರರು ..

ಯಾವುದಕ್ಕೂ ಯಾರಿಗೂ ಸಂಬಂಧವಿಲ್ಲದಂತೆ..!

ಯಾವುದೋ ಕಾರಣಕ್ಕೆ ಯಾವುದೋ ಬಂಧದೊಳಗೆ ಬೀಳುವ ನಮಗೆ,
ಅವರು ನಮಗೆ ಗೊತ್ತಿಲ್ಲದಂತೆ ನಮ್ಮನ್ನೇ ಬಿಟ್ಟು ಹೋದಾಗ ಆಗುವ ನೋವು ಮಾತ್ರ ಮನಸಿಗೆ ...
ಗೊತ್ತಿದ್ದೋ ಗೊತ್ತಿಲ್ಲದೆಯೋ ಸಂಬಂಧದೊಳಗೆ ಬೀಳುವ ನಾವು
ಹೆದರುವುದು ಒಂದಕ್ಕೆ ಮಾತ್ರ .. ಅದು - ಸಾವು !

ಯಾವುದಕ್ಕೂ ಯಾರಿಗೂ ಸಂಬಂಧವಿಲ್ಲದಂತೆ..!

ದೇಹದ ನೋವೇ ದೊಡ್ಡದೆಂದು ತಿಳಿದವರಿಗೇನು ಗೊತ್ತು ?
ಮನಸು ಮಾಡುವ ನೋವು ಅದಕ್ಕಿಂತ ಆಳ ಗಾತ್ರ ಹೆಚ್ಚು ಅಂತ ?

ಯಾರೋ ಹೇಗೋ ಬಂದು ಸೇರುತ್ತಾರೆ..
ಏನೂ ಕಾರಣವಿಲ್ಲದೆಯೇ ಬಿಟ್ಟು ಹೋಗುತ್ತಾರೆ ..
ಕೇಳಿದರೆ ನಿರುತ್ತರ..
ಮತ್ತೊಮ್ಮೆ ಕೇಳಿದರೆ ಸಂಬಂಧವಿಲ್ಲದ ಪ್ರತ್ಯುತ್ತರ ...

ಪ್ರಪಂಚವೇ ಹೀಗೆ ಯಾವುದಕ್ಕೂ ನಿಲ್ಲದು..
ಯಾರಿಗೆ ಏನೇ ಆದರೂ ಅಂಜದು ..

ಯಾವುದಕ್ಕೂ ಯಾರಿಗೂ ಸಂಬಂಧವಿಲ್ಲದಂತೆ..!

4 comments:

Ar.Nagashree said...

nice j

ಶ್ರೀವತ್ಸ ಕಂಚೀಮನೆ. said...

ಕೆಲವರ ಪಾಲಿಗೆ ಅವರ ಜೀವನದಲ್ಲಿ ಯಾರೇ ಬಂದರೂ ಸಂತೋಷವಲ್ಲ ..
ಯಾರೇ ಹೋದರೂ ದುಃಖವಂತೂ ಮೊದಲೇ ಅಲ್ಲ ..
ಅವರವರ ಕೆಲಸವನ್ನು ಅವರು ಮಾಡುತ್ತಲೇ ಇರುವರು ..
ಅದು ಕೆಟ್ಟದ್ದಾಗಲೀ, ಒಳ್ಳೆಯದೇ ಇರಲಿ .. ಅವರು ಅದಾವುದಕ್ಕೂ ಹೆದರರು ..

ಆ ಕೆಲವರಂತೆ ನಾವೂ ಕೂಡ ನಮ್ಮ ಒಳ ಮನಸಿನಲ್ಲಿ
ಯಾವುದಕ್ಕೂ ಯಾರಿಗೂ ಸಂಬಂಧವಿಲ್ಲದಂತೆ ಬದುಕುವುದ ರೂಢಿಸಿಕೊಂಡರೆ
ಸಾವು ಕೂಡ ನಮ್ಮನ್ನು ಭಯಬೀಳಿಸಲಾರದು...
ಹಾಗೆ ನೋಡಿದರೆ ಸಾವಿಗಿಂತ ಹೆಚ್ಚು ಹೆದರಿಸುವುದು ಬದುಕಿನ ಅನಿಶ್ಚಿತತೆ & ನಿಗೂಢತೆ...
ಒಂದೇ ಭರವಸೆ
"ಹಳೇ ದಿನ ಮುಗಿಯುತ್ತಲೇ ಇರುತ್ತದೆ..
ಹೊಸ ದಿನ ಹುಟ್ಟುತ್ತಲೇ ಇರುತ್ತದೆ.."

ತುಂಬಾನೇ ಚೆನ್ನಾಗಿ ಬರೆದಿದ್ದೀರಿ...

ವಿಜಯಚಂದ್ರ said...

ಹಳೇ ದಿನ ಮುಗಿಯುತ್ತಲೇ ಇರುತ್ತದೆ..
ಹೊಸ ದಿನ ಹುಟ್ಟುತ್ತಲೇ ಇರುತ್ತದೆ..

ಪ್ರಪಂಚವೇ ಹೀಗೆ ಯಾವುದಕ್ಕೂ ನಿಲ್ಲದು..
ಯಾರಿಗೆ ಏನೇ ಆದರೂ ಅಂಜದು ..

ಯಾವುದಕ್ಕೂ ಯಾರಿಗೂ ಸಂಬಂಧವಿಲ್ಲದಂತೆ..!

real lines......

Nanda Kishor B said...

ಬ್ಲೋಗ್ ಚೆಂದ ಇದ್ದು ಜೀಪಿ....