Monday, January 03, 2011

ಒಮ್ಮೆಯಾದರೂ ನಕ್ಕು ಬಿಡು , ಸಾಕದು ನನಗೆ ಜೀವಮಾನವಿಡಿ...

Jepee Bhat.
ನೀ ಅಪರೂಪಕ್ಕೆ ದೂರದಿಂದಲೇ ಮಾಡುವ ಮೋಡಿ,
ಇಡುವುದು ನನ್ನ ಯಾವಾಗಲೂ ಕಾಡಿ ಕಾಡಿ ..
ನೀನಿರಲು ನನ್ನ ಸನಿಹ,
ತೇಲುವುದು ಖುಷಿಯಿಂದ ನನ್ನ ಮನ ..

ಒಮ್ಮೆಯಾದರೂ ನಕ್ಕು ಬಿಡು , ಸಾಕದು ನನಗೆ ಜೀವಮಾನವಿಡಿ ...

ನೀನು ಮಾತನಾಡುವುದೇ ಚೆನ್ನ ,
ಆಗ ನನ್ನ ಲೋಕವಾಗುವುದು ಚಿನ್ನ..
ಬರಸೆಳೆದು ಅಪ್ಪಿಕೋ ನನ್ನ ,
ಆಗ ನಾ ನೋಡುವೆ ಕನಸಲ್ಲೂ ನಿನ್ನ ...

ಒಮ್ಮೆಯಾದರೂ ನಕ್ಕು ಬಿಡು , ಸಾಕದು ನನಗೆ ಜೀವಮಾನವಿಡಿ ...

ಅಲ್ಲಿಂದಲೇ ನಿನ್ನಲ್ಲೇ ನೀನು ಪಿಸುಗುಟ್ಟು ಏನಾದರೂ ಮೆತ್ತಗೆ,
ನನಗೆ ಖುಷಿ ಆಗುವುದು ಇಲ್ಲಿಂದಲೇ ಆ ಹೊತ್ತಿಗೆ...
ನಿಜದಲ್ಲೂ, ಕನಸಲ್ಲೂ, ಯಾವಾಗಲೂ ನಿನ್ನ ಜೊತೆಗೇ ಇರಲು ಬಯಸುವೆ ನಾನು,
ಹಗಲಲ್ಲೂ, ಇರುಳಲ್ಲೂ, ಎಲ್ಲೆಲ್ಲೂ, ಬೇರೆಯವರನ್ನೇ ಚಿಂತಿಸುವೆ ನೀನು ....

ಒಮ್ಮೆಯಾದರೂ ನಕ್ಕು ಬಿಡು , ಸಾಕದು ನನಗೆ ಜೀವಮಾನವಿಡಿ ...


ಯಾತಕೀ ಯಾರೂ ಮಾಡದ ತಪ್ಪಿಗೆ ಹೃದಯಕೆ ಪರಿಧಿ ?
ಇನ್ನಾದರೂ ನೀನು ಕಡಿಮೆ ಮಾಡು ನನ್ನ ಹೃದಯದ ನೋವಿನ ಅವಧಿ ....

ಒಮ್ಮೆಯಾದರೂ ನಕ್ಕು ಬಿಡು , ಸಾಕದು ನನಗೆ ಜೀವಮಾನವಿಡಿ ...!!

No comments: