Friday, January 07, 2011

ಹುಡ್ಗೀರ್ನ ಅರ್ಥ ಮಾಡ್ಕೊಳ್ಳೋದು ತುಂಬಾ ಕಷ್ಟ... ಅಪ್ಪಿ ತಪ್ಪಿ ಅರ್ಥ ಮಾಡ್ಕೊಂಡು ಇಷ್ಟಾ ಪಟ್ರೆ, ನಿಮಗೇ ನಷ್ಟ....!!!

nanDu!

ಹುಡ್ಗೀರೆ ಹೀಗೇನಾ ?
ಲವ್ ಅಂದ್ರೆ ಅಂದ್ಕೋತಾರೆ,
ಹಾಕ್ಬೇಕು ಹುಡ್ಗಾ Branded ಶೂ, ಶರ್ಟು ..
ಬಯಸೋದೆ ಇಲ್ವಾ ಯಾರೂ ಇರ್ಬೇಕು ಅವನಿಗೆ Standard ಹಾರ್ಟು ..??


ಹುಡ್ಗೀರ್ಗೆ ಬೇಕು..ಎಲ್ಲಾ ...
ಹುಡ್ಗನ್ ಹತ್ರಾ ಇರ್ಬೇಕು Imported ಬೈಕು , ಗ್ಲಾಸು..
ಯಾರೂ ನೋಡೋದೇ ಇಲ್ವಾ Inside ಇರೋ ಲವ್ ಮಾಡೋ ಮನ್ಸು..?
ದಿನಾ ಹುಡುಗ್ರು ಬೇಕು ಶಾಪಿಂಗ್ ಮಾಡ್ಸೋಕೆ, ಪಾನಿ ಪುರಿ ಕೊಡ್ಸೋಕೆ...
ಊರ್ ಸುತ್ಸೋಕೆ, ಮೂವಿ ತೋರ್ಸೋಕೆ....


ಪಾರ್ಕ್ ಗೂ ಅವ್ರೆ ಬೇಕು... ಹೋಟೆಲ್ ಬಿಲ್ ಕೊಡೋಕೆ ಮೊದ್ಲು ಅವ್ರೇ ಬೇಕು ...
ಹುಡ್ಗೀರೇ ಒಂಥರಾ ...
ಎಲ್ಲಾ ಹೇಳೋದ್ ಹೇಳ್ಬಿಟ್ಟು,  ಮಾಡೋದ್ ಮಾಡ್ಬಿಟ್ಟು ...
ಆಮೇಲ್ ಅಂತಾರೆ ಹುಡ್ಗಾನೇ ಸರಿ ಇಲ್ಲಾ ಕೈಕೊಟ್ಟು....


ಅಂದ್ಕೋತಾರೆ ಯಾರಿಗೆ ಏನೇ ಎಲ್ಲೇ ಒಳ್ಳೆದಾದ್ರೂ ಅದು ಹುಡ್ಗೀರಿಂದಾ..
ಯಾರಿಗೆ ಏನೇ ಎಲ್ಲೇ ಕೆಟ್ಟದ್ ಆದರೂ ಅದು ಹುಡುಗ್ರಿಂದಾ...
ಯಾಕ್ ಹುಡ್ಗೀರೆ ಹೀಗಾ ??
ಅದ್ಕೆ ಅನ್ನೋದು ಹುಡ್ಗೀರ್ನ, ಅರ್ಥ ಮಾಡ್ಕೊಳ್ಳೋದು ತುಂಬಾ ಕಷ್ಟ...
ಅಪ್ಪಿ ತಪ್ಪಿ ಅರ್ಥ ಮಾಡ್ಕೊಂಡು ಇಷ್ಟಾ ಪಟ್ರೆ, ನಿಮಗೇ ನಷ್ಟ....!!!

6 comments:

vasudha hegd said...

nice one,

ಜೇಪೀ ಭಟ್ ! said...

Hmmmmmmmmm???
Thanks..

Nandan said...

wawww... superb bhatre... sakat ista atu...

ಜೇಪೀ ಭಟ್ ! said...

NANDAN: itzzzz real fact ryt??

HegdeG said...

JP, idu ninna anubhavada maata ? :D

kavana said...

ಹುಡುಗ್ರು ಹೀಗೇನಾ....?
ಯಾವ ಹುಡುಗಿ ಎಲ್ಲೇ ಕಂಡ್ರೂ ಕದ್ದುಮುಚ್ಚಿ ನೋಡ್ತಾರೆ...
ಒಳ್ಳೇ ಫಿಗರ್ ಬಂತು ಅಂತ ಫ್ರೆಂಡ್ಸ್ ಗೆಲ್ಲಾ ಹೇಳ್ತಾರೆ..
ಅವಳಿಗಿಷ್ಟ ಇಲ್ಲ ಅಂದ್ರೂ,ಹಿಂದೆ ಹಿಂದೇ ಬೀಳ್ತಾರೆ...
ಇದನ್ನೇ ಅವರು ಲವ್ ಅಂತ ತಾವೇ ತಿಳಿದುಕೊಂಡು ಬಿಡ್ತಾರೆ..!!
...
ಮೊಬೈಲ್ ನಂಬರ್ ಎಲ್ಲಿ ಅಂತ ಪದೇ ಪದೇ ಕೇಳ್ತಾರೆ...
ಫ್ರೀ ಮೆಸೇಜ್ ಇದೇ ಅಂತ ಮೇಲಿಂದ್ ಮೇಲೆ ಕಳಿಸ್ತಾರೆ..
ಅವಳಿಗಿಸ್ಟ ಇಲ್ಲ ಅಂದ್ರೂ, ಗಿಫ್ಟ್.. ಅಂತ ಕೊಡ್ತಾರೆ..
ಇದನ್ನೆ ಹುಡುಗ್ರು ಲವ್ ಅಂದುಕೊಂಡು ಪೆದ್ದುಪೆದ್ದಾಗಿ ಆಡ್ತಾರೆ..!!

ಬಾಡಿಗೆ ಬೈಕು ತಗೊಂಡು ಬಂದು ತಂದೇ ಬೈಕು ಅಂತಾರೆ..
ಮೂವೀ ನೋಡೋ ಟೇಸ್ಟ್ ಇಲ್ವಾ ಅಂತ ದುಂಬಾಲ್ ಬೀಳ್ತಾರೆ..
ಬೇಡ,ಬೇಡ ಅಂದ್ರೂ ಕೇಳದೇ ಸಿಕ್ಕಿದ್ದೆಲ್ಲ ಕೊಡುಸ್ತಾರೆ..
ಫ್ರೆಂಡ್ಸ್ ಗೆಲ್ಲಾ ಲವ್ವರ್ ಕಣ್ರೋ ಅಂತ ಹೇಳ್ಕೊಂಡು ತಿರುಗ್ತಾರೆ..!!

ಕಾಸು ಖಾಲಿ ಆದ ಮೇಲೂ ತಾನೇ ಸರಿ ಅಂತಾರೆ..
ಫ್ರೆಂಡ್ಸ್ ಇಂದ ಸಾಲ ತಂದು ಮತ್ತೆ ಬೈಕು ಏರ್ತಾರೆ..
ಏನೂ ಇಲ್ಲ ಅಂದ್ರು..ಪಾರ್ಕಿಗಾದ್ರು ಕರಕೊಂಡು ಹೋಗ್ತಾರೆ..
ಇವರಿಗಾದ್ರೂ ಬುದ್ಧಿ ಬೇಡ್ವ..ಇದನ್ನೇ ಲವ್ ಅಂತಾರೆ..!!

ಹುಡುಗ್ರು ಅಂದ್ರೆ ಹೀಗೇನಾ...???
ಲವ್ ಅಂದ್ರೇ..ಇಸ್ಟೇನಾ...??? ANU...