Monday, March 28, 2011

ಇಬ್ಬರ ಬದುಕೂ ನುಚ್ಚು ನೂರಾಯಿತು, ಕನಸು ಹರಿದು ಚೂರಾಯಿತು..

Jp bhat:)

ನಾನಿದ್ದೆ ಮುಂಜಾವಿನ ಕಡಲ ತೀರದಲಿ,
ಅವಳಿದ್ದಳು ನನ್ನೆದೆಯ ದಿನದ ಬಡಿತದಲಿ..
ಇಬ್ಬರೂ ಸಾಗಲಿದ್ದೆವು ಬಾಳಿನ ದೋಣಿಯಲಿ,
ಸುನಾಮಿಯೇ ಬಂತು ತಿಳಿಯದೇ ಹಗಲಿನಲಿ..

ಇಬ್ಬರ ಬದುಕೂ ನುಚ್ಚು ನೂರಾಯಿತು,

ಕನಸು ಹರಿದು ಚೂರಾಯಿತು..
ಮನಸು ಬೇರೆ ಬೇರೆಯಾಯಿತು,
ಹೃದಯ ಉಸಿರಾಡುವುದನ್ನೇ ನಿಲ್ಲಿಸಿತು..

ಮನಸುಗಳು ಸದ್ದು ಮಾಡದೆಯೇ ಅತ್ತವು,

ದೇಹಗಳು ನಗುವುದನ್ನೇ ಮರೆತುಬಿಟ್ಟವು..
ಪ್ರಪಂಚದಲ್ಲಿ ಇನ್ನೆಷ್ಟು ಸಾವು-ನೋವೋ..?
ಇದನ್ನೇ ನೋಡಿ ಬದುಕಬೇಕೆ ನಾವು-ನೀವೂ..?

8 comments:

Unknown said...

tumba cehndada kavana....

Unknown said...

Its awesome!! :)image tooo :)

ಅನು. said...

ಎಲ್ಲರ ಬದುಕಲ್ಲು ಬರುವುದು ಸುನಾಮಿ..!
ಅದಕೆ ಹೆದರುವವನಲ್ಲ ಈ ಅಸಾಮಿ..!
ಇರುವುದೆಲ್ಲವು ಇಲ್ಲಿ ಬೇನಾಮಿ...!
ಬದುಕು ಇರುವುದು ಹಂಗಾಮಿ..!!

maanasa saarovra said...

nice blog.. kavana ishta aytu...

ಜೇಪೀ ಭಟ್ ! said...

ಕೃಷ್ಣ ಭಟ್ : ಧನ್ಯವಾದಗಳು........
ಹೀಗೆ ಓದಿ ಕಾಮೆಂಟ್ ಮಾಡ್ತಾ ಇರಿ..

ಜೇಪೀ ಭಟ್ ! said...

ಆಶಾ : ಒಹ್,,.. ಥ್ಯಾಂಕ್ಸ್... ಹೀಗೆ ಓದ್ತಾ ಇರಿ...

ಜೇಪೀ ಭಟ್ ! said...

ಕವನ: ಏನ್ ಮಾಡಕ್ ಆಗತ್ತೆ ಅಲ್ವಾ?? ಹೀಗೆ ಓದಿ ಕಾಮೆಂಟ್ ಮಾಡ್ತಾ ಇರಿ..........

ಜೇಪೀ ಭಟ್ ! said...

ಮಾನಸೀ: ಧನ್ಯವಾದಗಳು...........!!
ಸದಾ ಓದಿ ಪ್ರತಿಕ್ರಿಯೆ ನೀಡಿ:):)