Monday, April 18, 2011

ಸುಂದರವಾದ ನಶೆಯಿತ್ತು ಅವಳ ಮುಂಗುರುಳಲ್ಲಿ, ಕಾಡಿತು ನನ್ನ ಅದು ಹಗಲಿರುಳಲ್ಲಿ, ಎಲ್ಲಿ ಹೋದರಲ್ಲಿ..


ಸುಂದರವಾದ ನಶೆಯಿತ್ತು ಅವಳ ಮುಂಗುರುಳಲ್ಲಿ,
ಕಾಡಿತು ನನ್ನ ಅದು ಹಗಲಿರುಳಲ್ಲಿ, ಎಲ್ಲಿ ಹೋದರಲ್ಲಿ..
ಗೊತ್ತಿದ್ದು ಗೊತ್ತಿದ್ದೂ ಮತ್ತೆ ಅದನ್ನೇ ನೋಡಿದೆ,
ಬೇಡವೆಂದರೂ ಅವಳ ಪ್ರೀತಿಯಲ್ಲಿ ಬಿದ್ದು ಎದ್ದೆ....

ಬೇಕೆಂತಲೇ ಅವಳು ಮತ್ತೆ ಮತ್ತೆ ತೋರಿಸುವ ಮುಂಗುರುಳು,

ಮಾಡಿತು ನನ್ನ ಮನಸಿನ ಎಲ್ಲ ಭಾವಗಳ ಮರುಳು..
ಪದೇ ಪದೇ ನನ್ನನ್ನೇ ಕದ್ದು  ನೋಡಿ ನಗುವ ಅವಳು,
ಅವಳ ನಗುವೇ ಮಾಡಿದೆ ನನ್ನ ಮತ್ತೆ ಮತ್ತೆ ಅವಳತ್ತ ತಿರುಗಿ ನೋಡಲು...

ಹೀಗೆ ಆಗುತ್ತಿದ್ದರೆ ಮತ್ತಷ್ಟು ದಿನ,

ನಗುವರು ನನ್ನ ಹುಚ್ಹ ಎಂದು ತಿಳಿದ ಜನ..
ಅವರಿಗೇನು ಗೊತ್ತು ಪ್ರೇಮಿಗಳ ಮನ,
ಅದು ಸುಮ್ಮ ಸುಮ್ಮನೇ ನಗುತ್ತ ಅಳುತ್ತ ಬರೆಯುತ್ತೆ ಕವನ!

8 comments:

ಕಾವ್ಯಾ ಕಾಶ್ಯಪ್ said...

:) :)

pavi said...

ಹೀಗೆ ಆಗುತ್ತಿದ್ದರೆ ಮತ್ತಷ್ಟು ದಿನ,
ನಗುವರು ನನ್ನ ಹುಚ್ಹ ಎಂದು ತಿಳಿದ ಜನ..
ಅವರಿಗೇನು ಗೊತ್ತು ಪ್ರೇಮಿಗಳ ಮನ,
ಅದು ಸುಮ್ಮ ಸುಮ್ಮನೇ ನಗುತ್ತ ಅಳುತ್ತ ಬರೆಯುತ್ತೆ ಕವನ!

Tumba chennagiddu...

ಸಂಧ್ಯಾ ಶ್ರೀಧರ್ ಭಟ್ said...

chanda iddu...........

Kirti said...

tumba chennagide nimm kavan..

ಜೇಪೀ ಭಟ್ ! said...

ಕಾವ್ಯಾ ಕಶ್ಯಪ್: :):):):)
ಧನ್ಯವಾದಗಳು!

ಜೇಪೀ ಭಟ್ ! said...

ಪವಿ : ಧನ್ಯವಾದಗಳು!
ಹೀಗೆ ಭೇಟಿ ಕೊಟ್ಟು ಪ್ರತಿಕ್ರಿಯೆ ನೀಡಿ..

ಜೇಪೀ ಭಟ್ ! said...

ಸಂಧ್ಯಾ: ಹೌದಾ?? ಥ್ಯಾಂಕ್ಸ್!
ಹಿಂಗೆ ಓದ್ತಾ ಇರು, ಕಾಮೆಂಟ್ ಮಾಡ್ತಾ ಇರು!!:):)

ಜೇಪೀ ಭಟ್ ! said...

ಕೀರ್ತಿ: ಧನ್ಯವಾದಗಳು...
ಹೀಗೆ ಓದ್ತಾ, ಕಾಮೆಂಟ್ ಮಾಡ್ತಾ ಇರಿ....