Tuesday, April 26, 2011

ಅತ್ತೆಯು ಕಂಡರೆ ಸೊಸೆಯನ್ನೂ ಮಗಳಂತೆ, ಆಗುವುದು ಮನೆ ಬೇಡವೆಂದರೂ ಸ್ವರ್ಗದಂತೆ..

Jepee Bhat!

ಅತ್ತೆಯು ಕಂಡರೆ ಸೊಸೆಯನ್ನೂ ಮಗಳಂತೆ,
ಆಗುವುದು
ಮನೆ ಬೇಡವೆಂದರೂ ಸ್ವರ್ಗದಂತೆ..
ಸೊಸೆಯೂ
ನೋಡಿಕೊಂಡರೆ ಅತ್ತೆಯನ್ನು ಅಮ್ಮನಂತೆ,
ಸಂಸಾರ
ಸಾಗುವುದು ತೂತೇ ಇಲ್ಲದ ನಿಲ್ಲದ ದೋಣಿಯಂತೆ..

ಎಲ್ಲರೊಡನೆ
ಒಂದಾಗಿ ಬಾಳು ಖುಷಿಯಿಂದ ಬಂದ ಮನೆಯಲ್ಲಿ,
ಬಂದ
ಮನೆಗೇ ಇಡಬೇಡ ಬೆಂಕಿಯನ್ನು ನಿನ್ನ ಮೌನದಲ್ಲಿ..
ನಿನ್ನ
ಮನದಲ್ಲಿ ಏನಿದ್ದರೂ ಹೇಳಿಬಿಡು ಅದೂ ಎಲ್ಲರೆದುರಲ್ಲಿ,
ಸಿಟ್ಟಾಗಿ
ಯಾವುದನ್ನೂ ಕೆಡಿಸಬೇಡ ನಿನ್ನ ಕೋಪದ ಮಾತಿನಲ್ಲಿ....

ಗಾಳಿಗೆ
ತೂರಿಬಿಡು ಅಲ್ಲಿ  ಇಲ್ಲಿ ಹೇಳಿದ್ದನ್ನು ಅವರು-ಇವರು,
ನಮ್ಮ
ಸಂಸಾರಕ್ಕೆ ಹುಳಿ ಹಿಂಡಲು  ಅವರು ಯಾರು...?
ಕಷ್ಟ
ಸುಖಕ್ಕೆ ಇಲ್ಲವೇ ಎಲ್ಲರೆದುರು ಕೈ ಹಿಡಿದ   ಪತಿ ದೇವರು..??
ಬೇರೆ
ಮತ್ತೂ ಹೆಚ್ಚಿನ ಕಷ್ಟಕ್ಕೆ ಇದ್ದಾನಲ್ಲವೇ ನಮ್ಮೆಲ್ಲರ ದೇವರು...:)
ನನ್ನ ಪ್ರೀತಿಯ ಸ್ನೇಹಿತೆಗೆ ಅರ್ಪಣೆ... ಯಾಕೆ ನೀನು ಅತ್ತೆ ಸೊಸೆ ಬಗೆಗೆ ಒಂದು ಕವನ ಬರೆಯಬಾರದು ಎಂದು ಒಂದು ವಿಶೇಷ, ವಿಶಿಷ್ಟ ಸಂದರ್ಭದಲ್ಲಿ ಸಲಹೆ ನೀಡಿದ ''ಅವಳಿಗೆ''........!!

8 comments:

ವಾಣಿಶ್ರೀ ಭಟ್ said...

superagiddu.. ella anusarisidare mostly prati manenu nandana agtu...

Kirti said...

tumba arth poornavaagide
nimma kavanavannu ell sose mattu atteyaru tilidukondare ..
gandandirage samasyeye iruvudilla...
mattu namma sansaar sukhada sagar endu helabahudu..
nanage tumba ishtavaayitu kaaran naanu attege magalaagi iddu nann atte kooda nannanu magalante tilididdaare.. thanx a lot for writing very nice poem..

Nanda Kishor B said...

chennaagide..
nija...

ಜೇಪೀ ಭಟ್ ! said...

ವಾಣಿಶ್ರೀ: ಧನ್ಯವಾದಗಳು... ಹೌದು ಆಗ್ತು, ಆದ್ರೆ ಎಲ್ಲರೂ ಅದ್ನೇ ಮಾಡವಲೇ............???

ಜೇಪೀ ಭಟ್ ! said...

ಕೀರ್ತಿ: ಥ್ಯಾಂಕ್ಸ್!
ಒಹ್ ಹೌದಾ?? ನಿಮ್ಮ ಮತ್ತು ನಿಮ್ಮ ಅತ್ತೆಯವರ ಸಂಬಂಧ ಇನ್ನು ಮುಂದೆಯೂ ಇಂದಿಗಿಂತ ಮತ್ತೂ ಸಿಹಿಯಾಗಿ ಇರಲೆಂದು ಹಾರೈಸುತ್ತೇನೆ:):)
ಹೀಗೆ ಓದಿ ಕಾಮೆಂಟ್ ಮಾಡ್ತಾ ಇರಿ:):)

ಜೇಪೀ ಭಟ್ ! said...

ನಂದನ್ ಕಿಶೋರ್ ಬೀ: ಥ್ಯಾಂಕ್ಸ್!
ಹೀಗೆ ಓದಿ ಕಾಮೆಂಟ್ ಮಾಡ್ತಾ ಇರಿ:):)

ಡಾ. ಚಂದ್ರಿಕಾ ಹೆಗಡೆ said...

taavu tayaariyalli iddireno?.... ammana manassannu hondida atte , magalante priyannu maaduva sose.... ellara maneyannu belagali...!

ಜೇಪೀ ಭಟ್ ! said...

ಡಾ. ಚಂದ್ರಿಕಾ ಹೆಗಡೆ: ಹ್ಹಾ ಹ್ಹಾ, ಇದೆಂತಾ ಪ್ರಶ್ನೆ...
ಸುಮ್ನೆ ಒಂದು ಕಲ್ಪನೆ ಅಷ್ಟೇ!
ಜಗವೆಲ್ಲಾ ನಲಿಯುತ ಕುಣಿಯುತಾ ಆನಂದದಿಂದ ಇರಲಿ ಎಂಬುದೇ ನನ್ನ ಆಶಯ.
ಧನ್ಯವಾದಗಳು..
ಹೀಗೆ ಭೇಟಿ ಕೊಟ್ಟು ಪ್ರತಿಕ್ರಿಯೆ ನೀಡುತ್ತಿರಿ.