Saturday, August 13, 2011

ಎಂದೋ ಕಂಡ ಈ ಸಿಹಿಯಾದ ಕನಸು, ನಿನ್ನೆ ರಾತ್ರಿಯೇ ನಿಜವಾಗಲೂ ನನಸಾಗಿತ್ತು:)

©Jepee Bhat!

ಮೆಲ್ಲ ಮೆಲ್ಲನೆ ಕೈ ಹಿಡಿದು ನಡೆಯುತಿರಲು,
ಅವಳ ಮುಖ ರಾತ್ರಿಯಲ್ಲೂ ಹೊಳೆಯುತ್ತಿತ್ತು.
ಇಬ್ಬರ ಮನಸಲ್ಲೂ ಖುಷಿಯ ಅಲೆ ಎದ್ದಿರಲು,
ಅವಳ ಕೈ ಹಿಡಿದ ನನ್ನ ಕೈ ಸಣ್ಣಗೆ ಹೆದರುತಿತ್ತು.

ಚಳಿಯ ರಾತ್ರಿಯಲೂ ಆ ಚಂದಿರನ ಕೆಳಗೆ,
ಮೈ ಮನವೆಲ್ಲಾ ಅರಳಿ ಕಟ್ಟು ಪಾಡು ಕಡೆಗೆ ಸರಿದಿತ್ತು.
ಹಗಲಿನಲ್ಲಿ ಹಚ್ಹ ಹಸುರಾಗಿ ಕಂಡ ಗಿಡ ಮರಗಳು,
ಕಪ್ಪು ಕಪ್ಪಾಗಿ ತಾವು ಇಲ್ಲವೆಂಬ ಸೂಚನೆ ನೀಡಿತ್ತು.

ಇಷ್ಟಾಗಿ ಮತ್ತೆ ಹಿಂದಿರುಗಿ ಬರಲು,
ಕತ್ತಲು ಸರಿದು ಬೆಳಕು ಹರಿದಿತ್ತು.
ಎಂದೋ ಕಂಡ ಈ ಸಿಹಿಯಾದ ಕನಸು
ನಿನ್ನೆ ರಾತ್ರಿಯೇ ನಿಜವಾಗಲೂ ನನಸಾಗಿತ್ತು:)

6 comments:

ಕಾವ್ಯಾ ಕಾಶ್ಯಪ್ said...

super...! ;) antu nansaatu howda alda.. ;) saaku bidu, congrats... :P

v said...

waw... very cute.. :-)

ಜೇಪೀ ಭಟ್ ! said...

ಕಾವ್ಯಾ ಕಶ್ಯಪ್:
ಹ್ಮ್........? ಎಂತು ನಿನ್ನಷ್ಟು?? ಸರೀ ಮಾಡಿ ಅರ್ಥ ಅಪ್ಪಂಗೆ ಹೇಳೇ...
ನಿನ್ನ ಕಂಗ್ರಾಟ್ಸ್ ಗೆ ನನ್ನ ಥ್ಯಾಂಕ್ಸ್ :):)
ನನ್ ಪ್ರಕಾರ ನಿನ್ಕಿಂಥಾ ಜಾಸ್ತೀನೇಯಾ!!! ಹ್ಹಾ ಹ್ಹಾ!!:):)

ಜೇಪೀ ಭಟ್ ! said...

ವೀ:
ನಿಮ್ಮ ಹೆಸರು ವೀ ಅಂತಾ ನೇನಾ??!
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಹೀಗೆ ಭೇಟಿ ನೀಡಿ ಓದುತ್ತಾ ಕಾಮೆಂಟ್ ಮಾಡುತ್ತಿರಿ.

kavana said...

ನಿನ್ನ ಕನಸಿನ ಮನಸು ನನಸಾಗ್ತೋ...ನನಸಿನ ಕನಸು ಮನಸಾಗ್ತೋ...ಒಟ್ಟಿನಲ್ಲಿ ಕವನ ಮಾತ್ರ ಸೂಪರ್ ಇದ್ದು..

ಜೇಪೀ ಭಟ್ ! said...

ಕವನಾ::
ನಿಮ್ಮ ಅಭಿಮಾನಕ್ಕೆ ನನ್ನ ಧನ್ಯವಾದಗಳು....