![]() |
Jepee Bhat's! |
ಪ್ರೀತಿಯ ಅನಾಮಿಕ...,
ಯಾರೂ ನನ್ನ ಸನಿಹವಿಲ್ಲದಿದ್ದಾಗ,
ಯಾರೂ ನನ್ನ ನೋಡದಿದ್ದಾಗ,
ಯಾರೂ ನನ್ನ ಜೊತೆ ನಗದಿದ್ದಾಗ,
ಯಾರೂ ನನ್ನ ಜೊತೆ ಮಾತನಾಡದಿದ್ದಾಗ,
ಯಾರೂ ನನ್ನ ಲೆಕ್ಕಿಸದೇ ಇದ್ದಾಗ,
ಯಾರೂ ನನ್ನ ಕಣ್ಣೀರನ್ನು ನೋಡಿಯೂ ಸಹ ನೋಡದಂತಿದ್ದಾಗ,
ಯಾರೂ ನನ್ನ ಭಾವನೆಗಳನ್ನೇ ಅರ್ಥ ಮಾಡಿಕೊಳ್ಳದಿದ್ದಾಗ,
ಯಾರೂ ನನ್ನ ಅಳುವಿಗೂ ಬೆಲೆ ಕೊಡದಿದ್ದಾಗ,
ಹೃದಯದ ದುಃಖದ ಕಟ್ಟೆ ಒಡೆದು ಅಳುವೇ ಬಂದಂತಾಗಿ ಕೊನೆಗೆ ಅಳುವೂ ಬರದಿದ್ದಾಗ,
ನನ್ನ ಬದುಕಿನ ಪ್ರತೀ ಕ್ಷಣದಲ್ಲೂ, ಪ್ರತೀ ನಿಮಿಷದಲ್ಲೂ, ನನ್ನ ಪ್ರತೀ ದಿನದ ಪ್ರತಿ ಹೃದಯದ ಬಡಿತದಲ್ಲಿ ಕಾಡುವ ನಿನಗೆ..,
ಈ ಕಾಡುವಿಕೆ ದಯವಿಟ್ಟು ಹೀಗೆಯೇ ನನಗೆ ನಿರಂತರವಾಗಿರಲಿ.
ಪ್ರೀತಿಯಿಂದ ನಿನ್ನವನೇ,
-ಜೇಪೀ ಭಟ್!

13 comments:
ನಿಮ್ಮ ಕವನದ ಸಾಲುಗಳು ನನ್ನನ್ನು ಸದಾ ಕಾಡುತ್ತಿರುತ್ತವೆ...
"ಈ ಕಾಡುವಿಕೆ ದಯವಿಟ್ಟು ಹೀಗೆಯೇ ನನಗೆ ನಿರಂತರವಾಗಿರಲಿ."
ಚೆನ್ನಾಗಿದ್ದು ಕವನ. ನಿಮ್ಮನ್ನು ಕಾಡ್ತಾ ಇರೋ ಅನಾಮಿಕ ಯಾರು? :-)
hmmm... yaar adu ee reethi nimmannu kaadtirodu ??
Nice one !!!
ಚೆನ್ನಾಗಿದೆ.
ಶಾಲ್ಮಲಿ:
ಒಹ್!! ನಿಮ್ಮನ್ನು ನನ್ನ ಸಾಲುಗಳು ಅಷ್ಟೊಂದು ಕಾಡುತ್ತವಾ? '' ಹ್ಹಾ ಹ್ಹಾ, ಸ್ವಲ್ಪಾ ಹುಷಾರಾಗಿರಿ ಮತ್ತೆ!''
ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು:):)
ಪ್ರಶಸ್ತಿ:
ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು:):)
ಕಲ್ಪನೆಯ ''ಅನಾಮಿಕೆ''..... ಕಾಡ್ತಾ ಇರೋದು ಅನಾಮಿಕ* ಅಲ್ಲ!!:):)
ಗಿರೀಶ್ ಎಸ್:
ನನ್ನ ಸಾಲುಗಳನ್ನು ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್ಸ್!:)
ಅದೇ ಹೇಳಿದ್ನಲ್ಲಾ ಅನಾಮಿಕೆ ಅಂತ..!
ನಂಗೆ ಗೊತ್ತಾದ್ಕೂಡ್ಲೆ ಹೇಳ್ತೀನಿ ಆಯ್ತಾ?
ಹೀಗೆ ಓದ್ತಾ, ಭೇಟಿ ಕೊಡ್ತಾ ಕಾಮೆಂಟ್ ಮಾಡ್ತಾ ಇರಿ:)
ಕುಮಾರ ಸುಬ್ರಹ್ಮಣ್ಯ:
ನನ್ನ ಸಾಲುಗಳನ್ನು ಓದಿ ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್ಸ್!:)
ಹೀಗೆ ಓದ್ತಾ, ಭೇಟಿ ಕೊಡ್ತಾ ಕಾಮೆಂಟ್ ಮಾಡ್ತಾ ಇರಿ:)
ವಾಸ್ತವಕ್ಕಿಂತ ಕನಸು ಎಂದಿಗೂ ಚಂದ... ಹಾಗೆಯೇ ಕಾಡುವ ಆ ಅನಾಮಿಕೆ ಸನಿಹದಲ್ಲಿದ್ದಾಗ ಸಿಗುವ ಖುಶಿಗಿಂತ ಕಾಡುವಿಕೆಯಲ್ಲಿಯೇ ಸುಖ ಜಾಸ್ತಿ...!! ;) :P
ಕಾವ್ಯಾ:
ವಾಸ್ತವವೂ ಚೆಂದಾನೆ., ಅದು ನಮಗೆ ಸಹನೀಯ ರೀತಿಯಲ್ಲಿದ್ದರೆ, ನಮಗೆ ಇಷ್ಟವಾಗುವಂತಿದ್ದರೆ ಅಲ್ವೇ?
ಕಾಡುವುದರಲ್ಲೂ, ಕಾಡಿಸಿಕೊಳ್ಳುವಿಕೆಯಲ್ಲೂ ಸುಖವಿದೆ:):)
ಆದರೆ ನಿಮ್ಮ ''ಈ'' ಅಭಿಪ್ರಾಯವೇ ಸರಿ ಎಂದು ನಾನು ಒಪ್ಪುವುದಿಲ್ಲ.:D:D :p
ಈ ಕಾಡುವಿಕೆ ದಯವಿಟ್ಟು ಹೀಗೆಯೇ ನನಗೆ ನಿರಂತರವಾಗಿರಲಿ ಎನ್ನುವ ಸಾಲು ಅರ್ಥವತ್ತಾಗಿದ್ದು...
ಅನು::
ಧನ್ಯವಾದಗಳು ಮೆಚ್ಚಿ ಉತ್ತರಿಸಿದ್ದಕ್ಕೆ:):):)
Post a Comment