Wednesday, June 13, 2012

''ಮರೆತರೂ ನೆನಪಾಗುವ ಮುನ್ನ''

JP bhat...



ಭಾವಗಳ ಬಂಧನದಲ್ಲಿ ಕೊರಗಿ ಸೊರಗಿದೆ ಚಿಂತನೆ,
ತಣಿಯಲು ಬೇಕು ಚೈತನ್ಯದ ನವಜೀವನ..
ಮುಸುಕಲ್ಲೇ ನಸುಕ ತರಿಸುವ ತಿಳಿಯಾದ ಕಿರಣ,
ಬಯಸಿದೆ ಕಂಪ ಸೂಸುವ ಈಗಿನ ಹೊಸ ಸುಮ...

ಬದುಕೆಂದರೆ ಏನೇನೋ ಅಂದರು ತಿಳಿದ ಪ್ರಬುದ್ಧರು,
ತಿಳಿಯದ ನಾವು ಏನೆಂದುಕೊಂಡರೂ ಸಣ್ಣವರು..
ಮಾಡಿದ್ದೊಂದೇ ತಪ್ಪು, ತಿಳಿಯದೇ ನೋಡಿದ ಅವಳ ಕಣ್ಣು,
ಆಮೆಲೇನಾಯಿತೋ ಗೊತ್ತಿಲ್ಲ, ಆದದ್ದೆಲ್ಲ ವಿಸ್ಮಯ..!!

ಮತ್ತೆ ಬದುಕಲ್ಲಿ ಪುಟಿದು ಮೇಲೆದ್ದೇಳುವ ಕನಸಿನ ಆಶಯ,
ಹೊಸದಾಗಿ ಹಸಿರಾಗಿ ಚಿಗುರಲು ಬಿಡುವಳೋ ಅವಳು..?
ಒಂದೇ ಒಂದು ಸಲಕ್ಕೆ ಅನಾಮತ್ತಾಗಿ ಸೇರಿದ ತೆಕ್ಕೆ, ಮುತ್ತು...
ಇನ್ನೆಲ್ಲಿ ಈ ಪುಟ್ಟ ಸತ್ತ ಮನಕ್ಕೆ ಶಾಂತಿ ಮತ್ತು ನೆಮ್ಮದಿ.........??!

4 comments:

ಸಂಧ್ಯಾ ಶ್ರೀಧರ್ ಭಟ್ said...

ಮಾಡಿದ್ದೊಂದೇ ತಪ್ಪು ತಿಳಿಯದೆ ನೋಡಿದ ಅವಳ ಕಣ್ಣು..
ಅಮೆಲೇನಾಯಿತೋ ಗೊತ್ತಿಲ್ಲ , ಆದದ್ದೆಲ್ಲ ವಿಸ್ಮಯ..!!!
ಓಹೋ ಅದಕ್ಕಾಗಿಯೇ ಆರು ತಿಂಗಳು ಕಾಯಬೇಕಾಯ್ತು ಮತ್ತೊಂದು ಕವಿತೆಗಾಗಿ..!!!

shadja said...

ಚಂದ ಇದ್ದು ಹೀಂಗೆ ಬರಿತಿರು!!

ಜೇಪೀ ಭಟ್ ! said...

ಸಂಧ್ಯಾ : ಆದರೂ ಅಪರೂಪಕ್ಕಾದ್ರೂ ಬರೀತಾ ಇದ್ನಲೆ :)
ಥ್ಯಾಂಕ್ಸ್ , ಓದಿ ಕಮೆಂಟ್ ಮಾಡಿದ್ದಕ್ಕೆ :)

ಜೇಪೀ ಭಟ್ ! said...

ಷಡ್ಜಾ:: ಥ್ಯಾಂಕ್ಸ್ :)
ಬರ್ಯದು ದೊಡ್ದದಲ್ಲಾ , ಅದ್ನಾ ಟೈಪ್ ಮಾಡಲೆ ಪುರುಸ್ಹೊತ್ತು ಇಲ್ಲೇ :(