Sunday, February 23, 2014

''ಕಡೇ ಪಕ್ಷ ಈ ಸಲದ ಪ್ರೀತಿಯಾದರೂ ಕಣ್ಣೀರಿಂದ ಕೊನೆಯಾಗದಿರಲಿ'' -- ಆರಂಭ!

Jepee Bhat


ನಿಜವಾಗಿ ಪ್ರೀತಿ ಮಾಡೋರಿಗೆ, ಪ್ರೀತೀನೇ ಬದುಕು, ನಂಬಿ ಬಂದವಳ/ಬಂದವನ ಜೊತೆ ಜೀವನ ಪರ್ಯಂತ ಏನೇ ಆದರೂ, ಯಾವುದೇ ಸಂದರ್ಭದಲ್ಲೂ ಇರುವ, ಬದುಕು ಮತ್ತು ಕನಸು ಎರಡನ್ನೂ ಕಟ್ಟಿ ಕೊಟ್ಟು ಜೊತೆಯಾಗಿ ಕಷ್ಟ ಸುಖ ಹಂಚಿಕೊಂಡು ಬಾಳುವುದೇ ಪ್ರೀತಿ, ಅದೇ ನಿಜವಾದ ಪ್ರೀತಿ ಎಂದು ನಾನು ಬಲವಾಗಿ ವಾದಿಸುತ್ತೇನೆ!!
ಬರೀ ಯಾರೋ ಹೇಳಿದರು ಅಂತಾ, ಶೋಕಿಗೆ, ಚಟಕ್ಕೆ, ಸ್ನೇಹಿತರ ಮೇಲಿನ, ಅವರ ಒಳಗಿನ ಬೆಟ್ಸ್ ಗೆ, ವ್ಯಾಲೆನ್ಟೈನ್ಸ್ ಡೇ ಗೆ- ಅದನ್ನು ಸೆಲೆಬ್ರೆಟ್ ಮಾಡೋಕೆ, ಎಲ್ಲರಿಗೂ ಅವರವರದೇ ಆದ ಗರ್ಲ್ ಫ್ರೆಂಡ್/ಬಾಯ್ ಫ್ರೆಂಡ್ ಇದ್ದಾರೆ, ನನಗೆ ಮಾತ್ರ ಇಲ್ಲಾ ಎಂಬ ಕೊರಗಿಗೆ, ಟೈಮ್ ಪಾಸ್ ಗೆ, ಬರೀ 'ಅದೊಂದೇ' ಕೆಲಸಕ್ಕೆ ಪ್ರೀತಿ ಅನ್ನೋ ನಾಟಕದ ಆಟ ಆಡಿ ಆಮೇಲೆ ಮೊಬೈಲ್ ನಂಬರ್ ಸ್ವಿಚ್ ಆಫೋ, ಅಥವಾ ನಂಬರ್ ನೇ ಡಿಸ್ಕನೆಕ್ಟ್ ಮಾಡ್ಸೋರಿಗೆ ನನ್ನ ಯಾವತ್ತೂ ಧಿಕ್ಕಾರ ಇದ್ದೇ ಇದೆ.

ಇಷ್ಟೆಲ್ಲಾ ಈಗ ಕುಯ್ಯೋಕೆ ದೊಡ್ಡ ಕಾರಣ ಇದೆ.

ಹೇಳಿ ಕೇಳಿ ಇವತ್ತು ಪ್ರೇಮಿಗಳ ದಿನ. ಅವರವರ ಜೋಡಿಗಳ ಜೊತೆ ಇವತ್ತು ನಾವು ಎಲ್ಲಾ ಕಡೆ ಪಿಂಕ್, ರೆಡ್, ವೈಟ್ ಡ್ರೆಸ್/ ಗಿಫ್ಟ್ ಗಳ ಸುರಿಮಳೆಯನ್ನೇ ನೋಡಬಹುದು. ಎಲ್ಲರೂ ಖುಷಿಯಾಗಿ ಅವನ/ಅವಳ ತೋಳಿನಲ್ಲಿ ಬೆಚ್ಚಗೆ ಬಂಧಿಯಾಗಿ ಕಾರಲ್ಲೋ/ಬೈಕಿನಲ್ಲೋ ಮನೆಯಲ್ಲೋ ಹಾಯಾಗಿ ಅವರ ಸಮಯವನ್ನು ಕಳೆಯಲೂಬಹುದು.
ಪ್ರೀತಿಯ ಒಂದೇ ಮುಖ ನೋಡಿದವರಿಗೆ ಅದರ ಸಿಹಿ ಮಾತ್ರ ಗೊತ್ತು. ಗಿಫ್ಟ್ ಮತ್ತು ಅಪ್ಪುಗೆಯ ಖುಷಿಯಲ್ಲಿ ತೇಲಾಡಿದವರಿಗೆ ಬಹುಷಃ ಮುಂದಿನ ಖುಷಿಯ ಅಥವಾ ಬರಲಿರುವ ದೊಡ್ಡ ಸುನಾಮಿಯ ಅನಾಹುತದ ಎಚ್ಚರಿಕೆಯ ಗಂಟೆ ಪ್ರೀತಿಯ ಗುಂಗಿನಲ್ಲಿ ಕೇಳಿಸದೇ ಇರಲಿಕ್ಕೂ ಸಾಕು.

ಈಗ ನಾನು ಹೇಳಲಿಕ್ಕೆ ಹೊರಟಿರುವುದೂ ಅಂತಹದ್ದೇ ಕಥೆ!
ಖುಷಿಯಾದಾಗ ತೀರಾ ಭಾವುಕರಾಗುವ ನಾವೆಲ್ಲಾ ಇರೋ ಬರೋರಿಗೆ ಹೇಳ್ಕೊಂಡು, ಸ್ಟೇಟಸ್ ನೆಲ್ಲಾ ಫೇಸ್ಬುಕ್, ವಾಟ್ಸ್ಯಾಪ್ ನಲ್ಲಿ ತಕ್ಷಣ ಹಾಕ್ಕೊಂಡು, ಶೇರ್ ಮಾಡ್ಕೊಂಡು ನಗುವ, ಹುಡುಗಿಯರಾದ್ರೆ ಡೇರಿ ಮಿಲ್ಕ್ ಸಿಲ್ಕ್ ತಿಂದ್ಕೊಂಡೋ, ಫ್ರೆಂಡ್ಸ್ ಜೊತೆ ಶಾಪಿಂಗ್, ಪಾನಿ ಪುರಿ, ಗೋಲ್ಗಪ್ಪ ತಿಂದ್ಕೊಂಡು, ಇನ್ನು ಹುಡುಗರಾದ್ರೆ ರೋಡ್ ಸೈಡ್ ಪೆಟ್ಟಿ ಅಂಗಡೀಲಿ ಧಂ ಹೊಡ್ಕೊಂಡು, ಹಗಲೊತ್ತಿನಲ್ಲೆ ಕೌಂಟರ್ ನಲ್ಲಿ ಕೋಲ್ಡ್ ಚಿಲ್ಲೆಡ್ ಬಿಯರ್ ಕುಡ್ಕೊಂಡು ಇಷ್ಟೆಲ್ಲಾ ಎಂಜಾಯ್ ಮಾಡೋ ನಮ್ಗೆ ದುಃಖ ಆದ್ರೆ ಯಾಕೆ ಸಹಿಸ್ಕೊಳ್ಳೋಕೇ ಆಗಲ್ಲಾ? ಅಥ್ವಾ ಹೇಳ್ಕೋಳ್ಳೋಕೆ ನಾಚಿಕೇನಾ??!
ಒಂದ್ವೇಳೆ ಲವ್ವು ಸಕ್ಸೆಸ್ ಆದ್ರೆ ಓಕೆ. ಆಗ್ದೆ ಇದ್ರೆ ಗಲ್ಸ್ ಅದ್ನಾ ಅಪ್ಪಾ ಅಮ್ಮನ್ಮೇಲೋ, ಫೇಸ್ಬುಕ್ ಗೋಡೆ ಮೇಲೋ, ಕರೆನ್ಸಿ ಹಾಳು ಮಾಡಿ ಫ್ರೆಂಡ್ಸ್ ಹತ್ರಾ ಅತ್ತೋ ತೀರಿಸ್ಕೊತಾರೆ. ಆದ್ರೆ ಬಾಯ್ಸ್ ಗೆ ಸಿಗರೆಟ್ ಮತ್ತು ಕುಡಿತಕ್ಕೆ ದುಡ್ಡು ಹಾಳ್ ಮಾಡೋದಲ್ದೇ ಆಮೇಲೆ ಹುಷಾರ್ ತಪ್ದ್ರೆ ಡಾಕ್ಟರ್ ಗೆ ಕಿಡ್ನಿ, ಶ್ವಾಸಕೋಶದ ರಿಪೇರಿಗೆ ಮತ್ತೂ ದುಡ್ಡು ಚೆಲ್ಬೇಕು.

ಈಗ ಫೈನಲಿ ಬಾಟಮ್ ಲೈನಲ್ಲಿ ನಾನ್ ಹೇಳೋದಂದ್ರೆ ಅಷ್ಟೆಲ್ಲಾ ಲವ್ ಮಾಡ್ಲೇಬೇಕು ಅಂತಿದ್ರೆ ಮಾಡಿ. ಆದ್ರೆ ಆಯ್ಕೆಯಲ್ಲಿ ತುಂಬಾ ಹುಷಾರಾಗಿರಿ. ಜೀವನ ಪರ್ಯಂತ ಇದ್ದಾಗಲೂ, ಹೋದ್ಮೆಲೂ, ಯಾವಾಗಲೂ ಅಳ್ಸೋರ್ ಗಿಂತಾ, ಇರೋವಷ್ಟು ದಿನಾ ನಗಿಸೋರು, ಮೆತ್ತಗೆ ಮಳೆ ಚಳಿಯಲ್ಲಿ ಪಿಸುಗುಟ್ಕೊಂಡು, ಸುಮ್ಮನೆ ಹಂಗೆ ಚಕ್ಕಂತ ಹಣೆಗೆ ಮುತ್ತು ಕೊಟ್ಟು ಮೆಲ್ಲಗೆ ನುಣುಪಾದ ಕೈ ಹಿಡ್ಕೊಂಡೇ ಇರೋವವರು ಯಾವತ್ತೂ 'ದಿ ಬೆಸ್ಟ್ ಅಂಡ್ ಗ್ರೇಟ್' ಅಲ್ವಾ?

ಇನ್ನು ಎಲ್ಲವನ್ನೂ ನಿಮ್ಗೆ ನಿಮ್ಗೆ ಬಿಟ್ಟಿದ್ದು!

ಚೆನ್ನಾಗಿ ಗಿಫ್ಟ್ ಕೊಟ್ಕೊಂಡು, ತಿಂದು, ನಕ್ಕು, ಆದಷ್ಟು ಕಮ್ಮಿ ಅತ್ತು, ಯಾವುದೇ ಸಾವಿನ ಸುದ್ದಿ ಕೇಳದೇ ಈ ಸಲದ ಪ್ರೇಮಿಗಳ ದಿನವನ್ನು ಒಟ್ಟಾಗಿ ಎಲ್ಲರೂ ಆಚರಿಸೋಣ ಬನ್ನಿ:)
''ಒನ್ಸ್ ಅಗೇನ್ ಹ್ಯಾಪಿ ವ್ಯಾಲೆಂಟೈನ್ಸ್ ಡೇ ಟು ಆಲ್'' ಎಲ್ಲರಿಗೂ ಬೆಚ್ಚನೆಯ ಪ್ರೀತಿಯ ಶುಭಾಶಯಗಳು!
ಇವತ್ತು ಪ್ರೀತಿಯನ್ನು ಹೇಳಿಕೊಳ್ಳುವವರಿಗೆಲ್ಲ ಗ್ರೀನ್ ಸಿಗ್ನಲ್ ಸಿಗ್ಲಿ. ಬ್ರೇಕ್ ಅಪ್ ಆದಷ್ಟು ಕಡಿಮೆ ಆಗ್ಲಿ. ಈಗಷ್ಟೇ ಮದುವೆಯಾಗಿ ಈ ವರ್ಷ ಮೊದಲ ಪ್ರೇಮಿಗಳ ದಿನಾಚರಣೆ ಮಾಡ್ಕೊಳ್ಳೋವವರಿಗೆ ನಾನ್ ಏನ್ ಹೇಳ್ಲೀ? ಅವರು ತುಂಬಾ ಫಾಸ್ಟ್ ಮತ್ತು ಜಾಣರು!!


Happy Valentines Day :)

2 comments:

Badarinath Palavalli said...

ತೀರಾ ಭಾವುಕರಾಗುವ ನಮ್ಮಂತವರ ಮನದಳಲನ್ನು ತೆರೆದಿಟ್ಟಿದ್ದೀರಾ.

ಜೇಪೀ ಭಟ್ ! said...

ಬದರಿನಾಥ್: ಹೌದು, ಮನುಷ್ಯರೇ ಹಾಗೆ ಅಲ್ಲವೆ? ಭಾವನಾ ಜೀವಿಗಳು. ನಿಮ್ಮ ಕಮೆಂಟ್ ಗೆ ಧನ್ಯವಾದಗಳು:)