nanDu:) |
ಬಯಸಿದಾಗ ನಿನ್ನ,
ನೀನಿರುವೆ ಮತ್ತೆಲ್ಲೋ.
ನೀನೇ ಸೇರಿದಾಗ ನನ್ನ,
ನಾ ಹುಡುಕುವೆ ನಿನ್ನ ಇನ್ನೆಲ್ಲೋ.
ನನ್ನ ಕಣ್ಣ ಕಾತುರ,
ಇರಬಹುದು ನಿನ್ನ ಮನದಲ್ಲೋ ಸಾವಿರ.
ಸಾಕಿನ್ನು ಗೆಳತಿ ಈ ಆಟ,
ಇನ್ನಾದರೂ ಮಾಡದೆ ಬಾ ಮೊದಲಿನ ಆ ಮೋಸ ನಾಟಕ, ಕಪಟ .
ನಿನಗಾಗಿ ಕಾದು ಕುಳಿತಿದೆ ಈ ಜೀವ,
ಇನ್ನಾದರೂ ಕೊಡಬೇಡ ಮತ್ತೆ ಅದಕ್ಕೆ ಸಾವು ನೋವ.
ಇನ್ನಾದರೂ ಬೆಸೆಯಲಿ ಹೃದಯಗಳ ಬಂಧ,
ಚೆಂದವಾಗಿ ನಡೆಸೋಣ ಇನ್ನೂ ಹೆಸರಿಡದ ಈ ಪವಿತ್ರವಾದ ಸಂಬಂಧ.
ಇನ್ನಾದರೂ ಬೆಳೆಯಲಿ ಬದುಕಿನ ಹಸಿರು,
ನಿಲ್ಲದ ಹಾಗೆ ನೋಡಿಕೋ ನನ್ನ-ನಿನ್ನ ಹೃದಯದ ಉಸಿರು....
ನೀನಿರುವೆ ಮತ್ತೆಲ್ಲೋ.
ನೀನೇ ಸೇರಿದಾಗ ನನ್ನ,
ನಾ ಹುಡುಕುವೆ ನಿನ್ನ ಇನ್ನೆಲ್ಲೋ.
ನನ್ನ ಕಣ್ಣ ಕಾತುರ,
ಇರಬಹುದು ನಿನ್ನ ಮನದಲ್ಲೋ ಸಾವಿರ.
ಸಾಕಿನ್ನು ಗೆಳತಿ ಈ ಆಟ,
ಇನ್ನಾದರೂ ಮಾಡದೆ ಬಾ ಮೊದಲಿನ ಆ ಮೋಸ ನಾಟಕ, ಕಪಟ .
ನಿನಗಾಗಿ ಕಾದು ಕುಳಿತಿದೆ ಈ ಜೀವ,
ಇನ್ನಾದರೂ ಕೊಡಬೇಡ ಮತ್ತೆ ಅದಕ್ಕೆ ಸಾವು ನೋವ.
ಇನ್ನಾದರೂ ಬೆಸೆಯಲಿ ಹೃದಯಗಳ ಬಂಧ,
ಚೆಂದವಾಗಿ ನಡೆಸೋಣ ಇನ್ನೂ ಹೆಸರಿಡದ ಈ ಪವಿತ್ರವಾದ ಸಂಬಂಧ.
ಇನ್ನಾದರೂ ಬೆಳೆಯಲಿ ಬದುಕಿನ ಹಸಿರು,
ನಿಲ್ಲದ ಹಾಗೆ ನೋಡಿಕೋ ನನ್ನ-ನಿನ್ನ ಹೃದಯದ ಉಸಿರು....
ನಿನ್ನವನಾ? ಗೊತ್ತಿಲ್ಲ ???
2 comments:
ಸಂಬಂಧ ಇರಲಿ ಹಾಗೆಯೇ...
ಅದಕೆ ಕೊಡಬೇಕೆ ಹೆಸರ ಈಗಲೇ..
ಹುಡುಗಿಯರು ಆಡುವರು ನಾನಾ ಬಗೆ..
ಅದಕ್ಕೀಗ ಸಂಬಂಧ ಬೆಸೆವ ಬಗೆ ಹೇಗೇ..?
ಅನು: ಏನ್ ಮಾಡೋದು? ಹಾಗೆ ಅನ್ಸತ್ತೆ, ಹೀಗೂ ಅನ್ಸತ್ತೆ.. ನೀವೇ ಹೇಳಿ..
ಜೀವನವೇ ಹೀಗಾ? ನಾನೇ ಹಾಗಾ ??
ಧನ್ಯವಾದಗಳು.. ಹೀಗೆ ಓದಿ ಕಾಮೆಂಟ್ ಮಾಡ್ತಾ ಇರಿ:):)
Post a Comment