Tuesday, December 28, 2010

ಕೆಲವರೆಂದರು ನೀನು ಮಾಡುತ್ತಿರುವುದು ತಪ್ಪು ..

Jepee BHAT!!!

ಕೆಲವರೆಂದರು ನೀನು ಕದಿಯುತ್ತೀಯಾ..
ಕೆಲವರೆಂದರು ನೀನು ನಕಲು ಮಾಡುತ್ತೀಯಾ ..
ಕೆಲವರೆಂದರು ನೀನು ಅಲ್ಲಿ ಇಲ್ಲಿ ಹುಡುಕುತ್ತೀಯಾ ..
ಕೆಲವರೆಂದರು ನೀನು ಸ್ವಾಮೀಜಿ ..
ಕೆಲವರೆಂದರು ನೀನು ಕಳ್ಳ..
ಕೆಲವರೆಂದರು ನೀನು ಮಾಡುತ್ತಿರುವುದು ತಪ್ಪು ..

ಅವರಾರೆಂಬುದು ನನಗೆ ಗೊತ್ತು ,

ನಾನಾರೆಂಬುದು ಅವರಿಗೆ ಗೊತ್ತಿಲ್ಲ ,.
ನನ್ನದೆಂಬುದು ನನ್ನ ಸ್ವತ್ತು ,
ಏನೇನನ್ನೋ ಮಾತನಾಡುವುದು ಅವರ 'ಗತ್ತು'..

ಕೆಲವರೆಂದರು ನೀನು ಮಾಡುತ್ತಿರುವುದು ತಪ್ಪು ..


ಕೆಲವು ಹಿಡಿಸಿದ ಸಾಲು ಹಾಕುವುದು ನನ್ನಿಷ್ಟ ,

ಅದಕ್ಕೆ ಮನ ಬಂದಂತೆ ಮಾತನಾಡುವುದು ಅವರ ಕಷ್ಟ ..
ಲೋಕದ ನಿಯಮವೇ ಹಾಗೆ ,,.
ಯಾರೂ ಸಹಿಸರು ಇನ್ನೊಬ್ಬರ ಏಳಿಗೆ ..

ಕೆಲವರೆಂದರು ನೀನು ಮಾಡುತ್ತಿರುವುದು ತಪ್ಪು ..


ಹೃದಯದ ನೋವೆ ಹಾಗೆ ಒಮ್ಮೊಮ್ಮೆ .,

ನಿಲ್ಲುತ್ತದೆ ಏನನ್ನೂ ಮಾಡದೆ ಕೆಲವೊಮ್ಮೆ ,.
ಯಾರಲ್ಲಿ ಹೇಳಲಿ ಇದನ್ನು ,.
ಎಲ್ಲರೂ ಮಾಡುವರು ತಮಾಷೆಯನ್ನು .,

ಕೆಲವರೆಂದರು ನೀನು ಮಾಡುತ್ತಿರುವುದು ತಪ್ಪು ..


ಈಗ ಕೂಡ ಹೇಳುವರು ಇದನ್ನೂ ಕದ್ದೆಯೆಂದು .,

ಆದರೆ ಯಾರು ನಂಬುವರು ಇದನ್ನು ಬರೆದದ್ದು ನಾನೇ ಎಂದು ??
ಅವನೋ ಪಾಪ ಹೋಗಿ ಮೂಲೆಯಲ್ಲಿ ಕೂತ.,
ಏನನ್ನೂ ಮಾಡದೆಯೇ ಆಡದೆಯೇ ಸೋತ .,

ಕೆಲವರೆಂದರು ನೀನು ಮಾಡುತ್ತಿರುವುದು ತಪ್ಪು ..


ಅಷ್ಟಕ್ಕೂ ನೀನು ಮಾಡಿರುವುದಾದರೂ ಏನು.,

ಯಾರೂ ಮಾಡದ ಘನಂದಾರಿ ಕೆಲಸವನ್ನು .,
ಎಲ್ಲರೂ ಒಂದು ರೀತಿಯ ಕಳ್ಳರೇ .,
ಒಂದಲ್ಲ ಒಂದು ಬಗೆಯಲ್ಲಿ .,
ಬಗೆದು ಅಗೆದು ತೆಗೆವರು ಭೂಮಿಯನ್ನು .,
ಹೀರುವರು ಲಂಚದ ರೂಪದಲ್ಲಿ ಹಣವನ್ನು .,

ಕೆಲವರೆಂದರು ನೀನು ಮಾಡುತ್ತಿರುವುದು ತಪ್ಪು ..
 
ನನ್ನದೆಂಬುದು ನನ್ನ ಸ್ವತ್ತು ,
ಏನೇನನ್ನೋ ಮಾತನಾಡುವುದು ಅವರ 'ಗತ್ತು'..

ಕೆಲವರೆಂದರು ನೀನು ಮಾಡುತ್ತಿರುವುದು ತಪ್ಪು ..

2 comments:

ವೆಂಕಟೇಶ್ ಹೆಗಡೆ said...

good jeepe ... keep writing

ಜೇಪೀ ಭಟ್ ! said...

ಥ್ಯಾಂಕ್ಸ್ ವೆಂಕಟೇಶಣ್ಣ ....
ಖರೆ ಚೊಲೋ ಆಜ ??