Friday, January 21, 2011

ಮರಳಿ ಕೊಡುವೆಯಾ ಇವನ್ನೆಲ್ಲ? ಈಗಲೇ ಉತ್ತರಿಸು ಇವಕೆಲ್ಲ.....

Jepee! :)
 
ಕಣ್ಣೀರ ಹನಿಯೊಂದು ಬತ್ತಿದೆ,
ಮನದ ಮುಗಿಲ ಅಂತರಾಳದಲ್ಲೆಲ್ಲೋ..
ಏನೋ ಹೇಳ ಹೊರಟ ಮನಸು,
ಸತ್ತಿದೆ ಮೈಯ್ಯ ಮೂಲೆಯಲ್ಲೆಲ್ಲೋ...

ಅದಕ್ಕೂ ಆಸೆಯಾಗಿರಬಹುದು ನನ್ನಂತೆ,
ಹಾರಬೇಕು ಹಕ್ಕಿಯಂತೆ, ಈಜಬೇಕು ಮೀನಿನಂತೆ..
ನಡೆಯಬೇಕು ಮನುಷ್ಯರಂತೆ, ಹಾಡಬೇಕು ಕೋಗಿಲೆಯಂತೆ,
ಹರಿಯಬೇಕು ನದಿಯಂತೆ, ಮಲಗಬೇಕು ಶವದಂತೆ..

ಆಡಿದ ಆಟಗಳು, ಮಾಡಿದ್ದ ಚೇಷ್ಟೆಗಳು,
ಗೊತ್ತಿಲ್ಲದೇ ಮಾಡಿದ ಎಷ್ಟೋ ತಪ್ಪುಗಳು..
ಗುಡ್ಡ ಬೆಟ್ಟ ಹಾರಿ, ಕಾಡು ಮೇಡು ಅಲೆದು,
ಕಾಡು ಹಣ್ಣು ತಿಂದು, ಹೊಳೆ ದಾಟಿ, ಮನೆಯಲ್ಲಿ ತಿಂದ ಪೆಟ್ಟುಗಳು..

ಮಳೆಗೆ ಸಿಕ್ಕಿ ಗದ್ದೆಯಲ್ಲಿ ಜಾರಿಬಿದ್ದ ಆ ಮಳೆಗಾಲ,
ಚಳಿಗೇ ಸೆಡ್ಡು ಹೊಡೆದು ಬೆಂಕಿ ಕಾಯಿಸಿದ ಚಳಿಗಾಲ,
ಸೆಕೆಯನ್ನೇ ಸುಟ್ಟ ಆ ನೀರಿನ ಬೇಸಿಗೆಕಾಲ,
ಇವೆಲ್ಲವನ್ನೂ ಮತ್ತೆ ಅನುಭವಿಸಲು ಕಾಯುತ್ತಿದೆ ಈ ಬರಗಾಲ..

ಮರಳಿ ಕೊಡುವೆಯಾ ಇವನ್ನೆಲ್ಲ?
ಈಗಲೇ ಉತ್ತರಿಸು ಇವಕೆಲ್ಲ.....

2 comments:

ಅನು. said...

ಕಣ್ಣೀರ ಹನಿಯೊಂದು ಜಾರಿದೆ,ನಿನ್ನ ವಿಶಾದ ಗೀತೆಯ ಓದಿ,
ಎಲ್ಲ ಮೂಟೆಯ ಕಟ್ಟೀ ಒಗೆದು ಬಿಡು ಒಮ್ಮೇ
ನಿರಾಳವಾಗಲಿ ಮೈ,ಮನಸುಗಳೆಲ್ಲಾ...

ಜೇಪೀ ಭಟ್ ! said...

ANU: :)