Friday, January 07, 2011

ನಾನೂ ಸಾಧ್ಯವಾದರೆ ಹಿಂದಿರುಗಿಸುವೆ ನಿನ್ನ ಹೃದಯವನ್ನು..........

nanDu.
ನನಗೆ ಈಗೀಗ ರಾತ್ರಿಯೆಲ್ಲ ಬರುತ್ತಿಲ್ಲ ನಿದ್ದೆ,
ಅವನ್ನೆಲ್ಲ ನೀ ಯಾಕೆ ಕದ್ದೆ?
ನಿನಗೂ ಹೀಗೆಲ್ಲಾ ಆಗುತ್ತಿದೆಯಾ,
ಅಥವಾ ಇದು ಬರೀ ನನ್ನ ಭ್ರಮೆಯಾ?

ಮನಸು ನನ್ನ ಹಿಡಿತಕ್ಕೇ ಸಿಗುತ್ತಿಲ್ಲ,
ಕನಸುಗಳು ಹೃದಯದ ತುಂಬೆಲ್ಲ..
ಕಣ್ಣಲ್ಲಿ ಯಾಕೋ ಧಾರಾಕಾರ ನೀರು,
ಹುಡುಕುತ್ತಿವೆ ಅವು ಅದಕ್ಕೆ ಕಾರಣವಾದವರು ಯಾರು?

ಮನವೇ ಖುಷಿಯಿಂದ ತಯಾರಾಗಿ ನಿಂತಿದೆ ಜಿಗಿಯಲು ಹಾರಿ,
ಆದರೆ ಯಾಕೋ ಆಗುತ್ತಿಲ್ಲ, ಅದಕ್ಕೂ ನೀನೇ ನೆನಪಾಗಿ ಈ ಬಾರಿ...
ಸಾಕಿನ್ನು ಮರಳಿ ಕೊಟ್ಟುಬಿಡು ನನ್ನ ನಿದ್ದೆಯನ್ನು,
ನಾನೂ ಸಾಧ್ಯವಾದರೆ ಹಿಂದಿರುಗಿಸುವೆ ನಿನ್ನ ಹೃದಯವನ್ನು...!!

2 comments:

ಅನು. said...

ಕೊನೇಸಾಲು ತುಂಬಾ ಅರ್ಥಪೂರ್ಣವಾಗಿದ್ದು....ವಾವ್..

ಜೇಪೀ ಭಟ್ ! said...

ಅನು: ಹ್ಮ್ಮ್ಮ್ ಹೌದಾ.... ಥ್ಯಾಂಕ್ಸ್...!!! :):)