![]() |
Jepee Bhat |
ನಾ ಒಂಟಿಯಾಗಿ ಕಾಡಲ್ಲಿ ಪಯಣಿಸುತ್ತಿದ್ದೆ,
ಅದ್ಯಾವಾಗಲೋ ನೀ ಮನದಲ್ಲಿ ಬಂದು ಕೂತಿದ್ದೆ.,
ಹಳೆಯ ನೆನಪುಗಳೆಲ್ಲವೂ ಓಲಾಡಿ ಜೀಕುತಲಿದ್ದವು,
ಮನದ ಮೂಲೆಯಲ್ಲೆಲ್ಲೋ ಖುಷಿಯ ಮೂಟೆ ನಗುತಿದ್ದವು..
ಮೇಲಿಂದ ಬೀಳುತಿದ್ದ ಮಳೆಯ ಹನಿಗಳು ನೆತ್ತಿಯನ್ನು ತಂಪಾಗಿಸಿದ್ದವು,
ಹೃದಯದ ಒಳಗೆ ಬೆಂಕಿಯ ಅಲೆಗಳು ಉರಿಯಲು ಶುರುವಾಗಿದ್ದವು,
ಹಳೆಯ ನೆನಪುಗಳು ಮತ್ತೊಮ್ಮೆ ಕೆಣಕಿ ನನ್ನನ್ನೂ ಅದರಲ್ಲಿ ತಳ್ಳಿದ್ದವು,
ಅದಾಗಲೇ ಮಳೆನೀರಿನ ಜೊತೆ ಜೊತೆಗೇ ಕಣ್ಣ ಹನಿಗಳೂ ಲೀನವಾಗಿದ್ದವು...
ಯೋಚನೆಯ ಹಾದಿಯಲ್ಲಿ ದಾರಿ ಮುಗಿದಿದ್ದೇ ಗೊತ್ತಾಗಲಿಲ್ಲ,
ಜೀವನವು ಏನೂ ಮಾಡದೇ ವ್ಯರ್ಥವಾಗಿ ಕಳೆದು ಹೋಯಿತಲ್ಲಾ,
ಇನ್ನುಳಿದ ಬಾಳಿಗೆ ಹಳೆಯ ಗತಿಸಿ ಹೋದ ಸಿಹಿ ಕಹಿ ನೆನಪುಗಳೇ ಇವೆಯಲ್ಲಾ,
ಇನ್ನೇನಾದರೂ ಸಾಧಿಸಲೇಬೇಕೆಂದರೆ ಉಳಿದ ಸ್ಪೂರ್ತಿಯ ಚಿಲುಮೆಯೇ ಸಾಕಲ್ಲಾ...
4 comments:
ಚೂರಾದ ಹೃದಯದ ಮೌನರಾಗ,
ಕಹಿ ನೆನಪುಗಳ ವಿಯೋಗ. . .
ಎರಡರ ಸಂಗಮವನ್ನು ಚೆನ್ನಾಗಿ ವರ್ಣಿಸಿರುವಿರಿ
-ಪ್ರಜ್ಞಮಾಲಾ
ಎಲ್ಲಿ ಹೋದಿರಿ ನೀವು? ನಿಮ್ಮ ಸುಳಿವಿಲ್ಲದೆ ತುಂಬಾ ಸಮಯವಾಯಿತು... ನಿಮ್ಮ ಬರಹಗಳಿಗಾಗಿ ಕಾಯುತ್ತಿರುವೆ....
ಪ್ರಜ್ನಮಾಲಾ:
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು:):)
ಹೀಗೆ ಓದ್ತಾ ಕಾಮೆಂಟ್ ಮಾಡ್ತಿರಿ.
ನನ್ನ ಬರಹ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್!
ಶಾಲ್ಮಲಿ:
ಇಲ್ಲೇ ಇದ್ದೆನಲ್ಲಾ....!
ಹ್ಹಾ ಹ್ಹಾ... ಹ್ಮ್ಮ್, ಸ್ವಲ್ಪ ಸಮಯ ನನ್ನ ಕನಸು, ನನ್ನ ಕೂಸು ''ಜೇಪೀಯ ಮನಸು ಮತ್ತು ಕನಸು ಗೆ'' ಗೆ ಭೇಟಿ ಕೊಡೋಕೆ ಆಗ್ಲಿಲ್ಲಾ...!!
ಇನ್ನು ನಿಮ್ಮನ್ನು ಬಹಳ ಸಮಯ ಕಾಯ್ಸೋಲ್ಲ..!!
ಸುಳಿವನ್ನು ಕೊಡ್ತಾ, ಮೊದಲಿನ ತರಹವೇ ಬರಹಗಳು ಬರುತ್ತಿರುತ್ತವೆ...!!
ನೀವು ಓದ್ತಾ ಕಾಮೆಂಟ್ ಮಾಡ್ತಾ ಇರಿ..!
ಇದೋ ನನ್ನ ಬರಹಗಳು ನಿಮಗಾಗಿ:)*
ನಿಮ್ಮ ಎಂದಿನ ನಗು ಮೊಗದ ಪ್ರೀತಿಯ ಅಭಿಮಾನಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು!!
Post a Comment