Wednesday, August 17, 2011

ಜೀವನವೇ ಹಾಗೆ, ಬಣ್ಣ ಬಣ್ಣದ ಹಾಳೆ...... ನನಗೆ ಮಾತ್ರ ಎಂದಿಗೂ ಕಪ್ಪು ಬಿಳುಪು ನಾಳೆ!!:(

Jepee Bhat..
ಎಷ್ಟು ದೇವರ ನೋಡಿದರೇನು, ಹುಂಡಿಗೆ ಹಾಕಿದರೇನು ಕಂತೆ,
ಯಾರೂ ಕಣ್ಣು ಬಿಟ್ಟಿಲ್ಲ, ಮತ್ತದೇ ಕೆಟ್ಟ ಹಳೆಯ ಚಿಂತೆ,
ಎಲ್ಲ ದಾರಿಯೂ ಎಲ್ಲೆಡೆ ವಿಫಲ....
ನಾನು ಎಲ್ಲಿಯೂ ಆಗುವುದಿಲ್ಲ  ಸಫಲ...

ಎಲ್ಲ ದಾರಿ, ಬಾಗಿಲುಗಳೂ ಮುಚ್ಚಿವೆ..
ನನ್ನ ಕಣ್ಣುಗಳೂ ಸದ್ದಿಲ್ಲದೇ ಮುಚ್ಚಲಿವೆ....
ಆಕಾಶದಲ್ಲಿ ಪಕ್ಷಿಗಳು ರೆಕ್ಕೆ ಬಿಚ್ಚಿ ಹಾರಿವೆ,
ನನ್ನ ಆತ್ಮ ಶಾಂತಿಯಿಲ್ಲದೇ ತೇಲಿವೆ..

ಎಷ್ಟೆಂದರೂ ಅಷ್ಟೇ, ಹುಟ್ಟಿದರೂ ಸತ್ತರೂ..
ಅತ್ತರೂ ನಕ್ಕರೂ ಬಿದ್ದರೂ ಎದ್ದರೂ.....
ಜೀವನವೇ ಹಾಗೆ, ಬಣ್ಣ ಬಣ್ಣದ ಹಾಳೆ......
ನನಗೆ ಮಾತ್ರ ಎಂದಿಗೂ ಕಪ್ಪು ಬಿಳುಪು ನಾಳೆ!!:(:(

8 comments:

ಕಾವ್ಯಾ ಕಾಶ್ಯಪ್ said...

good one Jepee...

ಜೇಪೀ ಭಟ್ ! said...

ಕಾವ್ಯಾ ಕಶ್ಯಪ್:
ಧನ್ಯವಾದಗಳು... ಏನ್ ಬಹಳ ಅಪರೂಪ??

ಅನು. said...

ಜೀವನವೇ ಹಾಗೆ...ಅಲ್ವಾ ಜಯ್....ಸಖತ್...ಬರದ್ದೆ..

prashasti said...

ಚೆನ್ನಾಗಿದ್ದೋ ಜೇಪಿ. ಇದನ್ನ ಇವತ್ತು ನೋಡಿದ್ದು ನಾನು.. ಏನು ಬಹಳ ಅಪರೂಪ ಆಯ್ದಲಾ ಬರ್ಯದು ? ಅದೂ ಬರೀ ಬೇಸರದ ಕವಿತೇನೆ ಬರೀತ್ಯಲ್ಲ.. anything wrong ? ಅದು ಬರೀ ಭಾವನೆ ಆಗಿರ್ಲಿ ಅಂತ ಹಾರೈಸ್ತಿ. ನಿನ್ನಿಂದ ಮೊದಲಿನ ತರನೇ ಕವನಗಳು ಹರಿದು ಬರಲಿ ಹೇಳಿ ಹಾರೈಸೋ ನಿನ್ನೊಬ್ಬ ಅಭಿಮಾನಿ :-)

Unknown said...

ಜೀವನವೇ ಹೀಗೆ ,ಬಣ್ಣ ಬಣ್ಣದ ನಾಳೆ ..ಅರಿತು ನಡೆದರೆ ಕಪ್ಪು ಬಿಳುಪುಗಳ ಮನ್ವಂತರ ಹಾಳೆ :)

ಜೇಪೀ ಭಟ್ ! said...

ಕವನಾ:
ಜೀವನ ಹಂಗೆ..
ಥ್ಯಾಂಕ್ಸ್.
ಓದ್ತಾ ಕಾಮೆಂಟ್ ಮಾಡ್ತಾ ಇರಿ:):):)

ಜೇಪೀ ಭಟ್ ! said...

ಪ್ರಶಸ್ತಿ:
ನಿಮ್ಮ ಅಭಿಮಾನಕ್ಕೆ ನನ್ನ ದೊಡ್ಡದೊಂದು ಸಲಾಂ:):):)
ಬೇರೆ ಥರದ್ದೂ ಬರತ್ತೆ..
ಕಾಲ ಬರಲಿ/.............!!!:):):):)

ಜೇಪೀ ಭಟ್ ! said...

ನಂದಿನಿ ಶಿಂಧೆ::
ಮನ್ವಂತರದ ಹಾಳೆಯೋ
ನಿನ್ನೆ ಮೊನ್ನೆಯ ಬರಿಯ ನೋವೋ...
ನೋಡೋಣ ಇರಿ.. ಧನ್ಯವಾದಗಳು.